ಸಾರಾಂಶ
2000 ಹೊಸ ಉದ್ಯೋಗಿಗಳಿಗೆ ಆಫರ್ ನೀಡಲಾಗಿದ್ದರೂ ಅವರನ್ನು ಕೆಲಸಕ್ಕೆ ಸೇರಿಸಿಕೊಂಳ್ಳದೆ ಎರಡು ವರ್ಷಗಳಿಂದ ಕಾಯಿಸಲಾಗುತ್ತಿದೆ ಎಂಬ ಆರೋಪಗಳಿಗೆ ಬೆಂಗಳೂರು ಮೂಲದ ಇನ್ಫೋಸಿಸ್ ಸಿಇಒ ಸಲೀಲ್ ಪರೇಖ್ ಸ್ಪಷ್ಟನೆ ನೀಡಿದ್ದಾರೆ.
ನವದೆಹಲಿ: 2000 ಹೊಸ ಉದ್ಯೋಗಿಗಳಿಗೆ ಆಫರ್ ನೀಡಲಾಗಿದ್ದರೂ ಅವರನ್ನು ಕೆಲಸಕ್ಕೆ ಸೇರಿಸಿಕೊಂಳ್ಳದೆ ಎರಡು ವರ್ಷಗಳಿಂದ ಕಾಯಿಸಲಾಗುತ್ತಿದೆ ಎಂಬ ಆರೋಪಗಳಿಗೆ ಬೆಂಗಳೂರು ಮೂಲದ ಇನ್ಫೋಸಿಸ್ ಸಿಇಒ ಸಲೀಲ್ ಪರೇಖ್ ಸ್ಪಷ್ಟನೆ ನೀಡಿದ್ದಾರೆ. ನಾವು ಯಾರಿಗೆ ಆಫರ್ ನೀಡಿದ್ದೇವೆಯೋ ಅವರನ್ನು ಖಂಡಿತ ಇನ್ಫೋಸಿಸ್‌ಗೆ ಸೇರಿಸಿಕೊಳ್ಳುತ್ತೇವೆ. ಈ ಪ್ರಕ್ರಿಯೆಯ ದಿನಾಂಕವನ್ನು ಮುಂದೂಡಲಾಗಿದೆಯೇ ಹೊರತು ನೇಮಕಾತಿಯಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ’ ಎಂದು ಪರೇಖ್ ಹೇಳಿದ್ದಾರೆ.
2022ನೇ ಬ್ಯಾಚ್‌ನ 2 ಸಾವಿರ ಇಂಜಿನಿಯರಿಂಗ್ ವಿದ್ಯಾರ್ಥಿಗಳ ನೇಮಕ, ವೇತನವಿಲ್ಲದ ತರಬೇತಿ ಕಾರ್ಯಕ್ರಮ ಹಾಗೂ ಅನಿರೀಕ್ಷಿತ ಹೆಚ್ಚುವರಿ ಮೌಲ್ಯಮಾಪನ ನಡೆಸುವುದರಲ್ಲಿ ಕಂಪನಿ ತಡ ಮಾಡುತ್ತಿದೆ ಎಂದು ಆರೋಪಿಸಿ ಐಟಿ ಹಾಗೂ ಐಟಿಇಎಸ್ ಒಕ್ಕೂಟವಾದ ಎನ್‌ಈಟಿಇಎಸ್ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದಲ್ಲಿ ದೂರು ದಾಖಲಿಸಿತ್ತು. ಅದರ ಬೆನ್ನಲ್ಲೇ ಕಂಪನಿ ಸ್ಪಷ್ಟನೆ ನೀಡಿದೆ.