ಸಾರಾಂಶ
ಚವಡಾಪುರ: ರಾಜ್ಯದ ಮುಜರಾಯಿ ಇಲಾಖೆ ದೇವಸ್ಥಾನವಾಗಿರುವ ಅಫಜಲ್ಪುರ ತಾಲೂಕಿನ ಸುಕ್ಷೇತ್ರ ದೇವಲ ಗಾಣಗಾಪೂರದ ದತ್ತಾತ್ರೇಯ ದೇವಸ್ಥಾನದಲ್ಲಿ ಹುಂಡಿ ಹಣ ಎಣಿಕೆ ಕಾರ್ಯ ನಡೆದಿದ್ದು ಈ ಬಾರಿ 97 ಲಕ್ಷ, 63 ಸಾವಿರ 946 ರುಪಾಯಿ ಸಂಗ್ರಹವಾಗಿದೆ ಎಂದು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ನಾಮದೇವ ತಿಳಿಸಿದ್ದಾರೆ.
ಫೆ.3ರಂದು ಹುಂಡಿ ಹಣ ಎಣಿಕೆ ಕಾರ್ಯ ನಡೆದಿದ್ದು ಎಣಿಕೆಗೆ ಸ್ಥಳೀಯ ಎಸ್‌ಬಿಐ ಬ್ಯಾಂಕಿನ ಸಿಬ್ಬಂದಿಗಳು, ಜಿಲ್ಲಾಧಿಕಾರಿ ಕಚೇರಿ, ತಹಸೀಲ್ದಾರ ಕಚೇರಿ ಸಿಬ್ಬಂದಿಗಳು ಸಹಕಾರ ನೀಡಿದ್ದಾರೆ. ದೇವಲ ಗಾಣಗಾಪೂರ ಪಿಎಸ್‌ಐ ರಾಹುಲ್ ಪವಾಡೆ ಹಾಗೂ ಸಿಬ್ಬಂದಿಗಳು ಭದ್ರತೆ ಒದಗಿಸಿದ್ದರು ಎಂದು ಮಾಹಿತಿ ನೀಡಿದ್ದಾರೆ.
ಈ ಸಂದರ್ಭದಲ್ಲಿ ತಹಸಿಲ್ದಾರ ಸಂಜೀವಕುಮಾರ ದಾಸರ್, ಗ್ರೆಡ್2 ತಹಸೀಲ್ದಾರ ಶರಣಬಸವ, ಲೆಕ್ಕಪರಿಶೀಶೋಧನಾಧಿಕಾರಿ ಮಂಜುಳಾ, ಮುಜರಾಯಿ ಇಲಾಖೆ ಶಿರಸ್ತೆದಾರ ಶಿವಕಾಂತಮ್ಮ, ದೇವಮ್ಮ, ಎಸ್‌ಡಿಎ ಮಹೇಶ, ಶ್ರೀನಿವಾಸ, ಪ್ರಥಮ ದರ್ಜೆ ಸಹಾಯಕಿ ಶೀಲಾ, ದ್ವಿತಿಯ ದರ್ಜೆ ಸಹಾಯಕ ದತ್ತು ನಿಂಬರ್ಗಿ ಸೇರಿದಂತೆ ಎಸ್‌ಬಿಐ ದೇವಲ ಗಾಣಗಾಪೂರ ಬ್ರಾಂಚ್ ಮ್ಯಾನೇಜರ್, ಸಿಬ್ಬಂದಿ ಇದ್ದರು.