ಸಾರಾಂಶ
ಹಿಂದೂಗಳು ಜಾತಿ, ಅಸ್ಪ್ರಶ್ಯತೆ, ಮತ, ಪಂಥ, ಭಾಷೆಗಳ ಹೆಸರಲ್ಲಿ ಬಡಿದಾಡಿಕೊಂಡಿದ್ದರೆ, ಕ್ಷುದ್ರ ಮನಸ್ಸಿನವರು ಲಾಭ ಪಡೆಯುತ್ತಾರೆ. ಸಂಘಟಿತರಾದರೆ ಜಗತ್ತಿನ ಯಾವುದೇ ಮೂಲೆಯಲ್ಲಿ ಎಷ್ಟೇ ಸಣ್ಣ ಸಂಖ್ಯೆಯಲ್ಲಿದ್ದರೂ ಮಾನ, ಪ್ರಾಣ ಹಾಗೂ ಆಸ್ತಿಯ ರಕ್ಷಣೆ ಸಾಧ್ಯವೆಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಹೇಳಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಹಿಂದೂಗಳು ಜಾತಿ, ಅಸ್ಪ್ರಶ್ಯತೆ, ಮತ, ಪಂಥ, ಭಾಷೆಗಳ ಹೆಸರಲ್ಲಿ ಬಡಿದಾಡಿಕೊಂಡಿದ್ದರೆ, ಕ್ಷುದ್ರ ಮನಸ್ಸಿನವರು ಲಾಭ ಪಡೆಯುತ್ತಾರೆ. ಸಂಘಟಿತರಾದರೆ ಜಗತ್ತಿನ ಯಾವುದೇ ಮೂಲೆಯಲ್ಲಿ ಎಷ್ಟೇ ಸಣ್ಣ ಸಂಖ್ಯೆಯಲ್ಲಿದ್ದರೂ ಮಾನ, ಪ್ರಾಣ ಹಾಗೂ ಆಸ್ತಿಯ ರಕ್ಷಣೆ ಸಾಧ್ಯವೆಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಹೇಳಿದ್ದಾರೆ.ಅವರು ಶಂಕರಪುರದಲ್ಲಿ ಭಾನುವಾರ ನಡೆದ ವಿಶ್ವ ಹಿಂದೂ ಪರಿಷದ್‌ನ ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯಾಲಯದ ನೂತನ ಕಟ್ಟಡ ''''ಧರ್ಮಶ್ರೀ'''' ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಾಂಗ್ಲಾ ಹಿಂದೂಗಳ ಮೇಲೆ ದೌರ್ಜನ್ಯ ನಡೆದಿದೆ. ಅಲ್ಲಿನ ಅಲ್ಪಸಂಖ್ಯಾತ ಹಿಂದೂ, ಬೌದ್ಧರ ಮಾನ, ಪ್ರಾಣ, ಆಸ್ತಿ ರಕ್ಷಣೆಗೆ ಧ್ವನಿ ಜಾಗತಿಕ ಮಟ್ಟದಲ್ಲಿ ಎತ್ತಬೇಕು. ಜಗತ್ತಿನ ಹಲವೆಡೆ ಹಿಂದೂಗಳ ಮಾನವಾಧಿಕಾರ ಸ್ಥಿತಿ ಗಂಭೀರವಾಗಿದೆ. ಹಿಂಸೆಯ ಆಧಾರದಲ್ಲಿ ಮತಪ್ರಚಾರ ಮಾಡುತ್ತ ತಮ್ಮ ಸಂಖ್ಯೆ ಹೆಚ್ಚಿಸಿಕೊಳ್ಳುವವರು ಇಂಥದ್ದು ಬಹಳ ಕಾಲ ಇದು ನಡೆಯುವುದಿಲ್ಲ ಎಂಬುದು ನೆನಪಿಟ್ಟುಕೊಳ್ಳಬೇಕು ಎಂದು ಹೇಳಿದರು.ಹಿಂದೂ ಸಮಾಜ ಸಂಘಟಿತವಾದರೆ ಜಗತ್ತಿನ ಯಾವುದೇ ಮೂಲೆಯಲ್ಲಿ ಎಷ್ಟೇ ಕಡಿಮೆ ಸಂಖ್ಯೆಯಲ್ಲಿದ್ದರೂ ಹಿಂದೂಗಳ ಮಾನ ಪ್ರಾಣ, ಆಸ್ತಿ ರಕ್ಷಣೆ ಸಾಧ್ಯ. ಅಯೋಧ್ಯೆ ರಾಮಮಂದಿರ ಇದಕ್ಕೆ ಸಾಕ್ಷಿ. ನಾವು ಒಂದಾದರೆ ಕಾಶ್ಮೀರದ ಕುರಿತು ಯಾರೂ ಸೊಲ್ಲೆತ್ತಲು ಸಾಧ್ಯವಿಲ್ಲ. ಮತ ಪಂಥ, ಭಾಷೆ, ಪ್ರಾಂತ್ಯದ ಆಧಾರದಲ್ಲಿ ತಮ್ಮನ್ನು ತಾವೇ ಒಡೆದುಕೊಂಡರೆ ದೇವರೂ ನಮ್ಮನ್ನು ರಕ್ಷಿಸಲು ಸಾಧ್ಯವಿಲ್ಲ ಎಂಬುದನ್ನು ಅರಿಯಬೇಕು ಎಂದರು.
ವಿಹಿಂಪ ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷ ಅಲೋಕ್ ಕುಮಾರ್, ಕಾರ್ಯಕ್ರಮದಲ್ಲಿ ಹಿರಿಯ ಕಾರ್ಯಕರ್ತ ವೈ.ಕೆ.ರಾಘವೇಂದ್ರ ರಾವ್, ವಿಶ್ವ ಹಿಂದೂ ಪರಿಷತ್ ಉಪಾಧ್ಯಕ್ಷೆ ವಿಜಯಲಕ್ಷ್ಮಿ ದೇಶಮಾನೆ, ಕ್ಷೇತ್ರೀಯ ಪ್ರಚಾರಕ್ ಸುಧೀರ್, ಕ್ಷೇತ್ರೀಯ ಸಂಘಚಾಲಕ ಡಾ.ಪಿ.ವಾಮನ್ ಶೆಣೈ ಸೇರಿ ಇತರರಿದ್ದರು.