70ನೇ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಅಖಿಲ ಕರ್ನಾಟಕ ಕನ್ನಡ ಚಳವಳಿ ಕೇಂದ್ರ ಸಮಿತಿಯಿಂದ ವಿಶ್ವ ದಾಖಲೆ ಸೃಷ್ಠಿಸುವ ಏಳು ಕಿಮೀ ಉದ್ದದ ಕನ್ನಡದ ಧ್ವಜ ಮತ್ತು ''''ದಾವಣಗೆರೆ ಕನ್ನಡೋತ್ಸವ'''' ವನ್ನು ನ.28ರಂದು ಇಲ್ಲಿನ ಜಯದೇವ ಸರ್ಕಲ್ ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಜಿಲ್ಲಾಧ್ಯಕ್ಷ ಶಿವರತನ್ ಹೇಳಿದ್ದಾರೆ.

- ಬಿ.ಎಸ್.ಚನ್ನಬಸಪ್ಪ ಅಂಡ್ ಸನ್ಸ್ ಸಹಯೋಗದಲ್ಲಿ 7 ಕಿಮೀ ಉದ್ದದ ಕನ್ನಡ ಧ್ವಜದ ಮೆರವಣಿಗೆ: ಶಿವರತನ್‌ ಮಾಹಿತಿ

- ಅಖಿಲ ಕರ್ನಾಟಕ ಕನ್ನಡ ಚಳವಳಿ ಕೇಂದ್ರ ಸಮಿತಿಯಿಂದ ವಿಶ್ವ ದಾಖಲೆ ಸೃಷ್ಠಿಸುವ ಏಳು ಕಿಮೀ ಉದ್ದದ ಧ್ವಜದ ಮೆರವಣಿಗೆ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ70ನೇ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಅಖಿಲ ಕರ್ನಾಟಕ ಕನ್ನಡ ಚಳವಳಿ ಕೇಂದ್ರ ಸಮಿತಿಯಿಂದ ವಿಶ್ವ ದಾಖಲೆ ಸೃಷ್ಠಿಸುವ ಏಳು ಕಿಮೀ ಉದ್ದದ ಕನ್ನಡದ ಧ್ವಜ ಮತ್ತು ''ದಾವಣಗೆರೆ ಕನ್ನಡೋತ್ಸವ'' ವನ್ನು ನ.28ರಂದು ಇಲ್ಲಿನ ಜಯದೇವ ಸರ್ಕಲ್ ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಜಿಲ್ಲಾಧ್ಯಕ್ಷ ಶಿವರತನ್ ಹೇಳಿದರು. ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ನಗರದ ಬಿ.ಎಸ್. ಚನ್ನಬಸಪ್ಪ ಅಂಡ್ ಸನ್ಸ್‌ನವರು 7 ಕಿ.ಮೀ ಉದ್ದದ ಕನ್ನಡದ ಧ್ವಜವನ್ನು ತಯಾರಿಸಿಕೊಟ್ಟಿದ್ದಾರೆ. ಧ್ವಜದ ಮೆರವಣಿಗೆಯು ಅಂದು ಬೆಳಗ್ಗೆ 8 ಗಂಟೆಗೆ ಜಯದೇವ ವೃತ್ತದಿಂದ ಆರಂಭವಾಗಲಿದೆ. ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಮತ್ತು ಜವಳಿ ವರ್ತಕ ಬಿ.ಸಿ. ಉಮಾಪತಿ ಭುವನೇಶ್ವರಿಗೆ ಪೂಜೆ ಸಲ್ಲಿಸಲಿದ್ದಾರೆ ಎಂದರು.

ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಮತ್ತು ಸಮಿತಿ ರಾಜ್ಯಾಧ್ಯಕ್ಷ ಗುರುದೇವ್ ನಾರಾಯಣ ಕುಮಾರ್ ಧ್ವಜಾರೋಹಣ ನೆರವೇರಿಸುವರು. ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಮತ್ತು ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ಧ್ವಜವಂದನೆ ಸಲ್ಲಿಸಲಿದ್ದಾರೆ. ಜಿಪಂ ಸಿಇಒ ಗಿತ್ತೆ ಮಾಧವ ವಿಠಲರಾವ್ ಮತ್ತು ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತ ಬಿ.ಕೆ. ಮಂಜುನಾಥ ಮಾಗನಹಳ್ಳಿ ಧ್ವಜ ಹಸ್ತಾಂತರ ಮಾಡುವರು ಎಂದರು.

ಮೆರವಣಿಗೆ ಸಾಗುವ ಮಾರ್ಗ:

ಧ್ವಜದ ಮೆರವಣಿಗೆಯು ಜಯದೇವ ವೃತ್ತದಿಂದ ಆರಂಭವಾಗಿ ಐಟಿಐ ಕಾಲೇಜು ವೃತ್ತ, ವಿದ್ಯಾನಗರ ಗಾಂಧಿ ವೃತ್ತ, ಗುಂಡಿ ವೃತ್ತ, ಶಾರದಾಂಬ ದೇವಸ್ಥಾನದ ವೃತ್ತ, ರಿಂಗ್ ರಸ್ತೆ ವೃತ್ತ, ಪಿ.ಬಿ. ರಸ್ತೆ ಮುಖಾಂತರ ಎವಿಕೆ ರಸ್ತೆಗೆ ಆಗಮಿಸಿ ಅಲ್ಲಿಂದ ಅಂಬೇಡ್ಕರ್ ವೃತ್ತದಿಂದ ಜಯದೇವ ವೃತ್ತಕ್ಕೆ ಬಂದು ಮುಕ್ತಾಯಗೊಳ್ಳಲಿದೆ. ವಿವಿಧ ಜಾನಪದ ಕಲಾತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಲಿದ್ದು, ಈ ಧ್ವಜವು ವಿಶ್ವದಾಖಲೆಗೆ ಸೇರ್ಪಡೆಯಾಗಲಿದೆ ಎಂದು ತಿಳಿಸಿದರು.

ಸಂಜೆ ಕಾರ್ಯಕ್ರಮ:

ಸಂಜೆ 6 ಗಂಟೆಗೆ ಜಯದೇವ ವೃತ್ತದ ಕನ್ನಡದ ಕಟ್ಟಾಳು ಜಿ.ನಾರಾಯಣ ಕುಮಾರ್ ಮಹಾವೇದಿಕೆಯಲ್ಲಿ ನಡೆಯುವ ದಾವಣಗೆರೆ ಕನ್ನಡೋತ್ಸವ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಉದ್ಘಾಟಿಸುವರು. ಸಮಿತಿಯ ರಾಜ್ಯಾಧ್ಯಕ್ಷ ಗುರುದೇವ್ ನಾರಾಯಣ ಕುಮಾರ ಅಧ್ಯಕ್ಷತೆ ವಹಿಸುವರು. ಬಿ.ಎಸ್. ಚನ್ನಬಸಪ್ಪ ಅಂಡ್ ಸನ್ಸ್ನ ಮುಖ್ಯಸ್ಥ ಮೃನಾಳ್ ಬಂಕಾಪುರ, ಟಿ.ಶಿವಕುಮಾರ, ಡಾ. ಟಿ.ಜಿ. ರವಿಕುಮಾರ, ಜೆ.ಎನ್. ಶ್ರೀನಿವಾಸ್, ಆರ್.ಆರ್. ರಘು ರಾಜ್ ಮತ್ತಿತರರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಡಿ.ಎಸ್. ಹೇಮಂತ್, ಸಂತೋಷ ಏಕಬೋಟೆ, ವಿ.ಎನ್.ವೀರಣ್ಣ, ನವೀನ್ ದೇವರಾಜ್, ವಿಜಯ ಸುರೇಶ್, ಸುಮನ್ ವೆಂಕಟಾಚಲಂ, ಈಶ್ವರ್ ಮಠದ್ ಇತರರು ಇದ್ದರು.

- - -

-26ಕೆಡಿವಿಜಿ45:

ದಾವಣಗೆರೆಯಲ್ಲಿ ದಾವಣಗೆರೆ ಕನ್ನಡೋತ್ಸವ ಹಮ್ಮಿಕೊಂಡಿರುವ ಕುರಿತು ಶಿವರತನ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.