ಹಿಂದೂ ಧಾರ್ಮಿಕ ಶಿಕ್ಷಣ ಪ್ರಕಲ್ಪ ಹಾಗೂ ದೇವಾಲಯ ಸಂವರ್ಧನಾ ಸಮಿತಿ, ಪುತ್ತೂರು (ದ.ಕ) ಇದರ ವತಿಯಿಂದ ನಡೆಸಲ್ಪಡುತ್ತಿರುವ ಹಿಂದೂ ಧಾರ್ಮಿಕ ಶಿಕ್ಷಣದ 32ನೇ ಕೇಂದ್ರವನ್ನು ಪುತ್ತೂರು ನಗರದ ಬೊಳುವಾರು ಗಣೇಶ ಪ್ರಸಾದ ಕಟ್ಟಡದಲ್ಲಿರುವ ಪ್ರೀಸ್ಕೂಲ್ ಮತ್ತು ಡೇ ಕೇರ್ ಮಕ್ಕಳ ಮನೆ ಯಲ್ಲಿ ಮಂಗಳವಾರ ಉದ್ಘಾಟಿಸಲಾಯಿತು.
ಪುತ್ತೂರು: ಹಿಂದೂ ಧಾರ್ಮಿಕ ಶಿಕ್ಷಣ ಪ್ರಕಲ್ಪ ಹಾಗೂ ದೇವಾಲಯ ಸಂವರ್ಧನಾ ಸಮಿತಿ, ಪುತ್ತೂರು (ದ.ಕ) ಇದರ ವತಿಯಿಂದ ನಡೆಸಲ್ಪಡುತ್ತಿರುವ ಹಿಂದೂ ಧಾರ್ಮಿಕ ಶಿಕ್ಷಣದ 32ನೇ ಕೇಂದ್ರವನ್ನು ಪುತ್ತೂರು ನಗರದ ಬೊಳುವಾರು ಗಣೇಶ ಪ್ರಸಾದ ಕಟ್ಟಡದಲ್ಲಿರುವ ಪ್ರೀಸ್ಕೂಲ್ ಮತ್ತು ಡೇ ಕೇರ್ ಮಕ್ಕಳ ಮನೆ ಯಲ್ಲಿ ಮಂಗಳವಾರ ಉದ್ಘಾಟಿಸಲಾಯಿತು.
ಪುತ್ತೂರಿನ ಉಷಾ ಮೆಡಿಕಲ್ಸ್ ಮಾಲಕ ಪಿ. ಗಣೇಶ ಭಟ್ ಅವರು ದೀಪ ಬೆಳಗಿಸುವ ಮೂಲಕ ಕೇಂದ್ರವನ್ನು ಉದ್ಘಾಟಿಸಿದರು. ಬಳಿಕ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಪ್ರಸ್ತುತ ಪರಿಸ್ಥಿತಿಯಲ್ಲಿ ಧಾರ್ಮಿಕ ಶಿಕ್ಷಣವು ಮಕ್ಕಳ ಜೊತೆ ಹೆತ್ತವರಿಗೂ ಅಗತ್ಯವಿದೆ. ಹಿಂದೆ ಅವಿಭಕ್ತ ಕುಟುಂಬಗಳಲ್ಲಿ ಬೆಳೆಯುತ್ತಿದ್ದ ಮಕ್ಕಳಿಗೆ ಅನಾಯಾಸವಾಗಿ ಹಿರಿಯರಿಂದ ಇಂತಹ ಮೌಲ್ಯಯುತ ಶಿಕ್ಷಣದ ಮಾರ್ಗದರ್ಶನವು ದೊರೆಯುತ್ತಿತ್ತು ಎಂದ ಅವರು ತನ್ನ ಚಿಕ್ಕಂದಿನಲ್ಲಿ ಚಂದಮಾಮ, ಅಮರ ಚಿತ್ರಕಥೆ ಪುಸ್ತಕಗಳಲ್ಲಿ ಪೌರಾಣಿಕ ಕಥೆಗಳನ್ನು ಓದಿ ಪ್ರಭಾವಿತರಾದ ಬಗ್ಗೆ ನೆನಪಿಸಿಕೊಂಡರು. ಧಾರ್ಮಿಕ ಶಿಕ್ಷಣ ಕೇಂದ್ರದ ಕಾರ್ಯ ಚಟುವಟಿಕೆಗಳನ್ನು ಶ್ಲಾಘಿಸಿ ಶುಭ ಹಾರೈಸಿದರು.ದೇವಾಲಯ ಸಂವರ್ಧನ ಸಮಿತಿಯ ಸದಸ್ಯ ರಾಮದಾಸ್ ಗೌಡ ಅವರು ಕಾರ್ಯಕ್ರಮಕ್ಕೆ ಶುಭಕೋರಿದರು. ಕೇಂದ್ರದ ಎಲ್ಕೆಜಿ ಪುಟಾಣಿ ಸ್ಕಂದರಾಮ ಪ್ರಾರ್ಥಸಿದರು. ಹಿಂದೂ ಧಾರ್ಮಿಕ ಶಿಕ್ಷಣ ಪ್ರಕಲ್ಪದ ಸಂಚಾಲಕಿ ಕೃಷ್ಣವೇಣಿ ಪ್ರಸಾದ್ ಮುಳಿಯ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಮಕ್ಕಳ ಮನೆಯ ಮುಖ್ಯಸ್ಥೆ ಸತ್ಯಪೂರ್ಣ ಕೇಂದ್ರದ ಚಟುವಟಿಕೆಗಳ ಕುರಿತು ಮಾಹಿತಿ ನೀಡಿ ವಂದಿಸಿದರು.
ಈ ಸಂದರ್ಭದಲ್ಲಿ ಮಕ್ಕಳಿಗೆ ಧಾರ್ಮಿಕ ಪುಸ್ತಕಗಳನ್ನು ಡಾ. ಸುಧಾ ರಾವ್ ಮತ್ತು ಪ್ರೊ. ವತ್ಸಲಾ ರಾಜ್ಞಿ ಹಸ್ತಾಂತರಿಸಿದರು. ಡಾ. ವಿಜಯ ಸರಸ್ವತಿ ಶ್ಲೋಕ ಹಾಗೂ ಅದರ ಅರ್ಥವನ್ನು ತಿಳಿಸಿಕೊಟ್ಟರು. ಶಂಕರಿ ಶರ್ಮ ಕಥೆಯನ್ನು ಹೇಳಿ ಮಕ್ಕಳನ್ನು ರಂಜಿಸಿದರು. ತೇಜಸ್ವಿರಾಜೇಶ್ ನಿರೂಪಿಸಿದರು.ಪ್ರಶಾಂತ್ ದೊಡ್ಡಡ್ಕ, ಬೋಧಕ ವೃಂದ, ಪೋಷಕರು ಹಾಗೂ ಮಕ್ಕಳು ಉಪಸ್ಥಿತರಿದ್ದ ಕಾರ್ಯಕ್ರಮವು ಅರ್ಥಪೂರ್ಣವಾಗಿ ಮೂಡಿಬಂದು ನೆರೆದವರ ಮೆಚ್ಚುಗೆಗೆ ಪಾತ್ರವಾಯಿತು.