ನೀರಾವರಿ ಸೌಲಭ್ಯಕ್ಕಾಗಿ 14ನೇ ದಿನಕ್ಕೆ ಕಾಲಿಟ್ಟ ಪ್ರತಿಭಟನೆ
Author : KannadaprabhaNewsNetwork
Published : Nov 10 2025, 01:00 AM IST
ಹನೂರು ತಾಲೂಕಿನ ವಡೆಕಹಳ್ಳ ಗ್ರಾಮದಲ್ಲಿ ನೀರಾವರಿ ಸೌಕರ್ಯಕ್ಕಾಗಿ ರೈತರು ನಡೆಸುತ್ತಿರುವ ಧರಣಿ ಭಾನುವಾರದಂದು 14ನೇ ದಿನಕ್ಕೆ ಕಾಲಿಟ್ಟಿದೆ. ಈ ಹಿನ್ನಲೆಯಲ್ಲಿ ಬಿದರಹಳ್ಳಿ ಗ್ರಾಮದಿಂದ ಚರ್ಚ್ ಫಾದರ್ ಮಾರ್ಷಲ್ ಅವರ ನೇತೃತ್ವದಲ್ಲಿ ರೈತರು ಹಾಗೂ ನಾಗರೀಕರು ಪಾದಯಾತ್ರೆ ನಡೆಸಿ ವಡೆಕಹಳ್ಳ ಗ್ರಾಮದ ಬಳಿ ತಲುಪಿ ಧರಣಿ ಸ್ಥಳದಲ್ಲಿ ರೈತರಿಗೆ ಬೆಂಬಲ ಸೂಚಿಸಿದರು. | Kannada Prabha
Image Credit: KP
ತಾಲೂಕಿನ ವಡೆಕಹಳ್ಳ ಗ್ರಾಮದಲ್ಲಿ ನೀರಾವರಿ ಸೌಕರ್ಯಕ್ಕಾಗಿ ರೈತರು ನಡೆಸುತ್ತಿರುವ ಧರಣಿ ಭಾನುವಾರದಂದು 14ನೇ ದಿನಕ್ಕೆ ಕಾಲಿಟ್ಟಿದೆ. ಈ ಹಿನ್ನೆಲೆಯಲ್ಲಿ ಬಿದರಹಳ್ಳಿ ಗ್ರಾಮದಿಂದ ಚರ್ಚ್ ಫಾದರ್ ಮಾರ್ಷಲ್ ಅವರ ನೇತೃತ್ವದಲ್ಲಿ ರೈತರು ಹಾಗೂ ನಾಗರಿಕರು ಪಾದಯಾತ್ರೆ ನಡೆಸಿ ವಡೆಕಹಳ್ಳ ಗ್ರಾಮದ ಬಳಿ ತಲುಪಿ ಧರಣಿ ಸ್ಥಳದಲ್ಲಿ ಬೆಂಬಲ ಸೂಚಿಸಿದರು.
ಕನ್ನಡಪ್ರಭ ವಾರ್ತೆ, ಹನೂರು
ತಾಲೂಕಿನ ವಡೆಕಹಳ್ಳ ಗ್ರಾಮದಲ್ಲಿ ನೀರಾವರಿ ಸೌಕರ್ಯಕ್ಕಾಗಿ ರೈತರು ನಡೆಸುತ್ತಿರುವ ಧರಣಿ ಭಾನುವಾರದಂದು 14ನೇ ದಿನಕ್ಕೆ ಕಾಲಿಟ್ಟಿದೆ. ಈ ಹಿನ್ನೆಲೆಯಲ್ಲಿ ಬಿದರಹಳ್ಳಿ ಗ್ರಾಮದಿಂದ ಚರ್ಚ್ ಫಾದರ್ ಮಾರ್ಷಲ್ ಅವರ ನೇತೃತ್ವದಲ್ಲಿ ರೈತರು ಹಾಗೂ ನಾಗರಿಕರು ಪಾದಯಾತ್ರೆ ನಡೆಸಿ ವಡೆಕಹಳ್ಳ ಗ್ರಾಮದ ಬಳಿ ತಲುಪಿ ಧರಣಿ ಸ್ಥಳದಲ್ಲಿ ಬೆಂಬಲ ಸೂಚಿಸಿದರು.
ಬಳಿಕ ರೈತರು ಮಾತನಾಡಿ, ಕಾವೇರಿ ಜಲ ವಿವಾದ ತೀರ್ಪು ಪ್ರಕಾರ ಪ್ರತಿವರ್ಷ 63.83 ಟಿಎಂಸಿ ನೀರು ಕುಡಿಯುವ ನೀರು ಹಾಗೂ ಸಣ್ಣ ನೀರಾವರಿ ಯೋಜನೆಗಳಿಗೆ ಮೀಸಲಾಗಿರಬೇಕು. ಆದರೆ ಸರ್ಕಾರ ಈ ನಿಯಮವನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ವಿಫಲವಾಗಿದೆ. ಇದರ ಪರಿಣಾಮವಾಗಿ ನಮ್ಮ ಭಾಗದ ಅಂತರ್ಜಲ ಮಟ್ಟ ಕುಸಿದು ರೈತರು ಬೇಸಾಯ ಮಾಡಲು ಕಷ್ಟಪಡುವ ಪರಿಸ್ಥಿತಿ ನಿರ್ಮಾಣವಾಗಿದೆ.ಕಾವೇರಿ ನದಿಯಿಂದ ಏತ ನೀರಾವರಿ ಮೂಲಕ ನೀರು ಹರಿಸುವಂತೆ ಹಲವು ಬಾರಿ ಸರ್ಕಾರಕ್ಕೆ ಮನವಿ ಸಲ್ಲಿಸಿದರೂ, ಇದುವರೆಗೆ ಯಾವುದೇ ಪ್ರಯೋಜನವಾಗಿಲ್ಲ. ಸರ್ಕಾರವು ತಕ್ಷಣ ಕ್ರಮ ಕೈಗೊಂಡು ರೈತರ ಜೀವಾಳವಾದ ನೀರಾವರಿ ಯೋಜನೆ ಜಾರಿಗೆ ತರಬೇಕು ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.
ಈ ಧರಣಿಯಲ್ಲಿ ಸುಳ್ವಾಡಿ ಹಾಗೂ ಬಿದರಹಳ್ಳಿ ಚರ್ಚ್ ನ ಧರ್ಮ ಗುರುಗಳು ಮಹಿಳಾ ರೈತ ಸಂಘಟನೆಯ ಕನಕ, ಮಾಜಿ ಸೈನಿಕರಾದ ಜೋಸೆಫ್, ರೈತ ಸಂಘಟನೆಯ ಕಾರ್ಯಧ್ಯಕ್ಷ ಶೈಲೇಂದ್ರ, ಹಾಗೂ ರೈತ ಮುಖಂಡರಾದ ಅರ್ಪುತರಾಜ್, ಪುಟ್ಟಸ್ವಾಮಿ ಭಾಗವಹಿಸಿದ್ದರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.