ಚನ್ನರಾಯಪಟ್ಟಣ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಮುಂದಿನ ಮೂರು ವರ್ಷದ ಅವಧಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ದಯಾನಂದ್ ಶೆಟ್ಟಿಹಳ್ಳಿ ಹಾಗೂ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಆರ್.ಶ್ರೀನಿವಾಸ್ ಉಳ್ಳಾವಳ್ಳಿ ಆಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಆಯ್ಕೆಯಾದ ದಯಾನಂದ್ ಶೆಟ್ಟಿಹಳ್ಳಿ ಹಾಗೂ ಆರ್‌. ಶ್ರೀನಿವಾಸ್ ಉಳ್ಳಾವಳ್ಳಿ ಹಾಗೂ ಎಲ್ಲಾ ಪದಾಧಿಕಾರಿಗಳನ್ನು ಸಂಘದ ವತಿಯಿಂದ ಅಭಿನಂದಿಸಲಾಯಿತು.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಮುಂದಿನ ಮೂರು ವರ್ಷದ ಅವಧಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ದಯಾನಂದ್ ಶೆಟ್ಟಿಹಳ್ಳಿ ಹಾಗೂ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಆರ್.ಶ್ರೀನಿವಾಸ್ ಉಳ್ಳಾವಳ್ಳಿ ಆಯ್ಕೆಯಾಗಿದ್ದಾರೆ.

ಖಜಾಂಚಿ, ಉಪಾಧ್ಯಕ್ಷ ಸ್ಥಾನ 2, ಸಹ ಕಾರ್ಯದರ್ಶಿ 2 ಸ್ಥಾನ ಹಾಗೂ 4 ನಿರ್ದೇಶಕ ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದ್ದು ಅಧ್ಯಕ್ಷ ಹಾಗೂ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಮಾತ್ರ ಚುನಾವಣೆ ಪ್ರಕ್ರಿಯೆ ನಡೆಯಿತು. ಉಪಾಧ್ಯಕ್ಷ ಸ್ಥಾನಕ್ಕೆ ನಂದನ್ ಪುಟ್ಟಣ್ಣ, ಕೆ.ಪಿ.ಪುಟ್ಟರಾಜು, ಸಹ ಕಾರ್ಯದರ್ಶಿಯಾಗಿ ಜೈ ಕುಮಾರ್, ನಾಗೇಂದ್ರ ರಾಯ, ಖಜಾಂಚಿ ಎ.ಎಲ್. ನಾಗೇಶ್, ನಿರ್ದೇಶಕರಾಗಿ ಎ.ಎಂ.ಜಯರಾಮ್, ನಟೇಶ್. ಎ, ಪಾಂಡುರಂಗ ಮತ್ತು ವೆಂಕಟಸ್ವಾಮಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಗೆಲುವು ಸಾಧಿಸಿ ಅಧ್ಯಕ್ಷ ಹಾಗೂ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಆಯ್ಕೆಯಾದ ದಯಾನಂದ್ ಶೆಟ್ಟಿಹಳ್ಳಿ ಹಾಗೂ ಆರ್‌. ಶ್ರೀನಿವಾಸ್ ಉಳ್ಳಾವಳ್ಳಿ ಹಾಗೂ ಎಲ್ಲಾ ಪದಾಧಿಕಾರಿಗಳನ್ನು ಸಂಘದ ವತಿಯಿಂದ ಅಭಿನಂದಿಸಲಾಯಿತು.

ಚುನಾವಣಾ ಅಧಿಕಾರಿಗಳಾಗಿ ಹಿರಿಸಾವೆ ಪ್ರತಾಪ್ ಮತ್ತು ಕೃಷ್ಣ ಇಬ್ಬೀಡು ಅವರು ಕರ್ತವ್ಯ ನಿರ್ವಹಿಸಿದರು. ನಿಕಟಪೂರ್ವ ಅಧ್ಯಕ್ಷ ಸಿದ್ದರಾಜು, ಸದಸ್ಯರಾದ ಮಂಜುನಾಥ್ ಹಂಚಿಹಳ್ಳಿ, ಪ್ರದೀಪ್, ಗೋವಿಂದ, ಗೋವಿಂದರಾಜು ಹಾಗೂ ಇತರರು ಇದ್ದರು.