ಸಾರಾಂಶ
ವಿಶೇಷವಾಗಿ ಹಗರಿಬೊಮ್ಮನಹಳ್ಳಿ ಆಸ್ಪತ್ರೆ ಸ್ವಚ್ಛತೆಯಲ್ಲಿ ಮುಂಚೂಣಿಯಲ್ಲಿದೆ.
ಹಗರಿಬೊಮ್ಮನಹಳ್ಳಿ: ಜಿಲ್ಲೆಯ ಎಲ್ಲ ತಾಲೂಕಿನ ಆಸ್ಪತ್ರೆಗಳಲ್ಲಿ ಉತ್ತಮ ಸೇವೆ ಒದಗಿಸಲಾಗುತ್ತಿದೆ. ವಿಶೇಷವಾಗಿ ಹಗರಿಬೊಮ್ಮನಹಳ್ಳಿ ಆಸ್ಪತ್ರೆ ಸ್ವಚ್ಛತೆಯಲ್ಲಿ ಮುಂಚೂಣಿಯಲ್ಲಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ತಿಳಿಸಿದರು.
ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ಅವರು ಮಾತನಾಡಿದರು. ತುರ್ತು ಚಿಕಿತ್ಸೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಹಬೊಹಳ್ಳಿ ಆಸ್ಪತ್ರೆಯಲ್ಲಿನ ಹೊರರೋಗಿಗಳ ಚಿಕಿತ್ಸೆ ಘಟಕವನ್ನು ಸ್ಥಳಾಂತರಿಸಲಾಗುವುದು. ಈ ಕುರಿತು ಸಿಎಂಒಗೆ ಸೂಚನೆ ನೀಡಲಾಗಿದೆ. ಯಾವುದೇ ಔಷಧಿಯನ್ನು ಹೊರಗಡೆ ಖರೀದಿಸದಂತೆ, ಜಿಲ್ಲಾಡಳಿತದಿಂದಲೇ ಪೂರೈಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.ಗುಣಮಟ್ಟ ಪರಿಶೀಲನೆ:
ನಕಲಿ ವೈದ್ಯರ ಹಾವಳಿ ತಡೆಗೆ ಕ್ರಮ ಕೈಗೊಳ್ಳಲಾಗುವುದು. ಆಸ್ಪತ್ರೆಯಲ್ಲಿ ಮೂಲ ಸೌಲಭ್ಯ, ಅಗತ್ಯತೆ ಕುರಿತು ಪರಿಶೀಲಿಸಲಾಗಿದೆ. ಸರ್ಕಾರಿ ವೈದ್ಯರ ಮೇಲೆ ಜನರು ನಂಬಿಕೆ ಇಟ್ಟಿದ್ದಾರೆ. ವೈದ್ಯರು ಉತ್ತಮ ಸೇವೆ ನೀಡಲಿ ಎಂದರು.ಈ ವೇಳೆ ತಾಲೂಕು ವೈದ್ಯಾಧಿಕಾರಿ ಡಾ.ಎಚ್.ಎಂ. ಪ್ರವೀಣ್‌ಕುಮಾರ್, ಮುಖ್ಯ ವೈದ್ಯಾಧಿಕಾರಿ ಡಾ.ಅಚ್ಯುತರಾಯ, ತಜ್ಞ ವೈದ್ಯಾಧಿಕಾರಿಗಳಾದ ಡಾ.ತಿಪ್ಪೇಸ್ವಾಮಿ, ಡಾ.ವಿನಯಕುಮಾರ್, ಎಸ್‌ಡಿಎ ಶಿವಕುಮಾರ್, ಸುಶೃಷ ಅಧಿಕಾರಿ ಬಾಬುಲಾಲ್, ಎಕ್ಸ್ರೇ ವಿಭಾಗದ ನಿಜಲಿಂಗಪ್ಪ ಇದ್ದರು.