ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆಯಿಂದ ಜಿಲ್ಲಾ ಮಟ್ಟದ ಆಪದ್ಮಿತ್ರ ತರಬೇತಿ ಶಿಬಿರ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಜಿಲ್ಲೆ ಮಲೆನಾಡು ಹಾಗೂ ಅತಿಹೆಚ್ಚು ಮಳೆಬೀಳುವ ಪ್ರದೇಶವಾಗಿದೆ. ಕೆಲವು ತಾಲೂಕುಗಳಲ್ಲಿ ವಿಪರೀತ ಮಳೆಯಿಂದ ಗುಡ್ಡ ಕುಸಿತ ಸಂಭವಿಸುತ್ತವೆ. ಆ ನಿಟ್ಟಿನಲ್ಲಿ ನಾಗರಿಕರನ್ನು ಸುರಕ್ಷಿತವಾಗಿಸಲು ಶಾಲಾ -ಕಾಲೇಜು ವಿದ್ಯಾರ್ಥಿಗಳಿಗೆ ಆಪದ್ಮಿತ್ರ ತರಬೇತಿ ನೀಡಿ ಸ್ಪಂದಿಸುವ ಗುಣ ಬೆಳೆಸುತ್ತಿರುವುದು ಶ್ಲಾಘನೀಯ ಎಂದು ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್ ಹೇಳಿದರು. ನಗರದ ಸ್ಕೌಟ್ಸ್ ಭವನದಲ್ಲಿ ಸೋಮವಾರ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆಯಿಂದ ಆಯೋಜಿಸಿದ್ಧ ಜಿಲ್ಲಾ ಮಟ್ಟದ ಆಪದ್ಮಿತ್ರ ತರಬೇತಿ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ವಿಪತ್ತು ಯಾವ ಸಂದರ್ಭದಲ್ಲಿ ಸಂಭವಿಸುತ್ತದೆ ಎಂದು ಊಹಿಸಲಾಗದು. ಆಕಸ್ಮಿಕವಾಗಿ ಸಂಭವಿಸುವ ವಿಪತ್ತುಗಳನ್ನು ಆತ್ಮವಿಶ್ವಾಸದಿಂದ ಎದುರಿಸಲು ವಿದ್ಯಾರ್ಥಿಗಳಿಗೆ ತರಬೇತಿ ಶಿಬಿರ ಸಹಕಾರಿ. ನೈಸರ್ಗಿಕವಾಗಿ ಸಂಭವಿಸುವ ಭೂಕುಸಿತ, ಪ್ರವಾಹಗಳನ್ನು ವೈಜ್ಞಾನಿಕ ರೀತಿಯಲ್ಲಿ ಎದುರಿಸ ಲು ಆಪದ್ಮಿತ್ರ ತರಬೇತಿ ಮುಖ್ಯ. ಇಂತಹ ದುರ್ಘಟನೆ ಸಂದರ್ಭದಲ್ಲಿ ಯಾವ ರೀತಿ ಸ್ಪಂದಿಸಬೇಕೆಂಬ ಬಗ್ಗೆ ಅರಿವಿರುವುದಿಲ್ಲ. ಆ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಯುವಕರಿಗೆ ತರಬೇತಿ ನೀಡಿ ಸಂಕಷ್ಟದ ಸ್ಪಂದಿಸುವ ಕಾರ್ಯ ಮಾಡುತ್ತಿದೆ ಎಂದರು.

ಶಾಲಾವರಣ ಅಥವಾ ಸಾರ್ವಜನಿಕ ವಲಯದಲ್ಲಿ ಕೆಲವರು ಉಸಿರಾಟ ಹಾಗೂ ಧಿಡೀರ್ ಹೃದಯಾಘಾತಕ್ಕೆ ಒಳಗಾಗುತ್ತಾರೆ. ಈ ಸ್ಥಿತಿಯಲ್ಲಿ ಪ್ರಥಮ ಚಿಕಿತ್ಸೆ ನೀಡಿದಲ್ಲಿ, ಆ ವ್ಯಕ್ತಿ ಪ್ರಾಣ ಉಳಿಸಬಹುದು. ಅಲ್ಲ ದೇ ಭೂಕಂಪನ ಹಾಗೂ ತುರ್ತು ಸ್ಥಿತಿಗಳಲ್ಲಿ ಸ್ಥಳೀಯವಾಗಿ ಸನ್ನದ್ಧರಾಗಲು ಎಲ್ಲಾ ರಂಗದಲ್ಲೂ ಅನುಭವ ಪಡೆದಿರಬೇಕು ಎಂದು ಹೇಳಿದರು.ಭೂಕುಸಿತದಂಥ ವೇಳೆಯಲ್ಲಿ ಎನ್ಡಿಆರ್, ಎಸ್ಟಿಆರ್ಎಫ್ ತಂಡವೇ ಎಲ್ಲಾ ಕಡೆ ತೆರಳಿ ಪ್ರಾಣ ಉಳಿಸಲು ಸಾಧ್ಯವಿಲ್ಲ. ಅಲ್ಲದೇ ದೊಡ್ಡ ನದಿ ಹಾಗೂ ಬಾವಿಗಳಲ್ಲಿ ಮುಳುಗುವ ವ್ಯಕ್ತಿ ರಕ್ಷಿಸಲು ಪರಿಣೀತರಾಗಬೇಕು. ಆದ್ದರಿಂದ ಸ್ಥಳೀಯರು ರಕ್ಷಿಸುವ ಕಾರ್ಯ ಅರಿವಿದ್ದಲ್ಲಿ ಪ್ರಾಣ ಕಾಪಾಡಬಹುದು ಎಂದರು.ಕರ್ನಾಟಕ ಪರಿಸರ ಮೌಲ್ಯ ಮಾಪನ ಅಧ್ಯಕ್ಷ ಎ.ಎನ್.ಮಹೇಶ್ ಮಾತನಾಡಿ, ವಿಪತ್ತು ಎದುರಾದ ಸಂದರ್ಭದಲ್ಲಿ ಸನ್ನಿವೇಶ ನಿಭಾಯಿಸಲು ಕೇಂದ್ರ ಸರ್ಕಾರ ರೋವರ್ ಮತ್ತು ರೇಂರ್ಸ್, ಎನ್ಎಸ್ಎಸ್, ಎನ್ಸಿಸಿ ಹಾ ಗೂ ಮೈಭಾರತ್ ವಿದ್ಯಾರ್ಥಿಗಳಿಗೆ ಕಾಲೇಜು ಹಂತದಲ್ಲಿ ತರಬೇತಿ ನೀಡಿ, ಪರಿಸ್ಥಿತಿ ನಿರ್ವಹಿ ಸುವ ಶಕ್ತಿ ತುಂಬುತ್ತಿದೆ ಎಂದು ತಿಳಿಸಿದರು.ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ತನ್ನ ಸೇವಾ ಕಾರ್ಯದಿಂದಲೇ ಗುರುತಿಸಿಕೊಂಡಿದೆ. ಮಡಿಕೇರಿ ವಿಪತ್ತು, ಶ್ರವಣಬೆಳಗೊಳ ಮಹಾಮಸ್ತಾಭಿಷೇಕ ಹಾಗೂ ದೊಡ್ಡ ಜಾತ್ರೆಗಳ ಲ್ಲಿ ವಿದ್ಯಾರ್ಥಿಗಳನ್ನು ಸೇವಾ ಕಾರ್ಯಕ್ಕೆ ಬಳಸಿಕೊಳ್ಳುತ್ತಿದೆ. ಅಲ್ಲದೇ ವಿದ್ಯಾರ್ಥಿಗಳಿಗೆ ಬಾಲ್ಯದಲ್ಲೇ ಸವಾಲು ಎದುರಿಸುವ ಶಕ್ತಿ ಪರಿಚಯಿಸುತ್ತದೆ ಎಂದರು.ಗೈಡ್ಸ್ ಸಹಾಯಕ ರಾಜ್ಯ ಆಯುಕ್ತೆ ಲತಾ ಮಂಜುನಾಥ್ ಮಾತನಾಡಿ, ವಿಪತ್ತು ಸಂಭವಿಸುವ ಮೊದಲೇ ಯುವಕರನ್ನು ಎಚ್ಚರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಭಾರತದಾದ್ಯಂತ ವಿದ್ಯಾರ್ಥಿಗಳಿಗೆ ಏಳು ದಿನಗಳ ಕಾಲ ಆಪದ್ಮಿತ್ರ ತರಬೇತಿ ನೀಡಿ, ಅನಾಹುತ ಹಾಗೂ ಆಕಸ್ಮಿಕ ಪ್ರಕೃತಿ ವಿಪತ್ತು ಎದುರಿಸಲು ಅಣಿಗೊಳಿಸುತ್ತಿದೆ ಎಂದು ಹೇಳಿದರು.ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಮುಖ್ಯ ಆಯುಕ್ತ ಎಂ.ಎನ್.ಷಡಕ್ಷರಿ ಅಧ್ಯಕ್ಷ ತೆ ವಹಿಸಿದ್ದರು. ಗೈಡ್ಸ್ ಜಿಲ್ಲಾ ಆಯುಕ್ತೆ ಡಿ.ಎಸ್.ಮಮತಾ, ಕಾರ್ಯದರ್ಶಿ ನೀಲಾಕಂಠ ಚಾರ್, ಸ್ಕೌಟ್ಸ್ ತರಬೇತಿ ಆಯುಕ್ತೆ ಸಿ.ಸಂಧ್ಯಾರಾಣಿ, ಗೈಡ್ಸ್ ಸಹಾಯಕ ರಾಜ್ಯ ಸಂಘಟನಾ ಆಯುಕ್ತೆ ಪ್ರಿ ಯಾಂಕಾ, ಸಂಘಟನಾ ಆಯುಕ್ತ ಬಿ.ಎನ್.ಕಿರಣ್ಕುಮಾರ್, ಮೂಡಿಗೆರೆ ಸ್ಥಳೀಯ ಸಂಸ್ಥೇ ಕಾರ್ಯದರ್ಶಿ ಬಿ.ಎಸ್ .ರಕ್ಷಿತ್ ಹಾಗೂ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.23 ಚಿಕ್ಕಮಗಳೂರು 6ಚಿಕ್ಕಮಗಳೂರಿನ ಸ್ಕೌಟ್ಸ್ ಭವನದಲ್ಲಿ ಸೋಮವಾರ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ವತಿಯಿಂದ ಆಯೋಜಿಸಿದ್ಧ ಜಿಲ್ಲಾ ಮಟ್ಟದ ಆಪದ್ಮಿತ್ರ ತರಬೇತಿ ಶಿಬಿರ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್ ಉದ್ಘಾಟಿಸಿದರು.