ಸಾರಾಂಶ
ಕನ್ನಡಪ್ರಭ ವಾರ್ತೆ ಕೆಜಿಎಫ್ನಗರಸಭೆಯಲ್ಲಿ ವಾರ್ಷಿಕ 16 ಕೋಟಿ ರುಪಾಯಿಗಳ ವ್ಯವಹಾರಕ್ಕೆ 49 ಬ್ಯಾಂಕ್ ಖಾತೆಗಳು ನಗರಸಭೆಗೆ ಅವಶ್ಯವಿದೆಯೇ ಎಂದು ಲೆಕ್ಕಾಧಿಕಾರಿ ಪದ್ಮ ಅವರನ್ನು ಜಿಲ್ಲಾಧಿಕಾರಿ ಡಾ.ಎಂ.ಅರ್.ರವಿ ತರಾಟೆಗೆ ತೆಗೆದುಕೊಂಡರು.
ನಗರಸಭೆ ಆಡಳಿತಾಧಿಕಾರಿಯಾಗಿ ಮೊದಲನೇ ಸಲ ನಗರಸಭೆ ಕಚೇರಿಗೆ ಭೇಟಿ ನೀಡಿ ನಗರಸಭೆಯಲ್ಲಿ ಅಧಿಕಾರಿಗಳ ಸಭೆಯನ್ನು ನಡೆಸಿದರು. ಮೊದಲು ನಮಗೆ ಯಾವ ಬ್ಯಾಂಕ್ ವ್ಯವಹಾರಕ್ಕೆ ಅನುಕೂಲ ಮಾಡಿಕೊಡುತ್ತೆ ಅಂತಹ ಬ್ಯಾಂಕ್‌ಗಳಲ್ಲಿ ವ್ಯವಹರಿಸಿ ಮಿಕ್ಕ ಬ್ಯಾಂಕ್ ಖಾತೆಗಳನ್ನು ರದ್ದುಗೊಳಿಸುವಂತೆ ಪೌರಾಯುಕ್ತ ಅಂಜಿನೇಯಲು ಅವರಿಗೆ ಸೂಚನೆ ನೀಡಿದರು.14 ವರ್ಷಗಳಿಂದ ಇರುವವರನ್ನು ಎತ್ತಂಗಡಿ ಮಾಡಿ:ನಗರಸಭೆಯಲ್ಲಿ ವ್ಯವಸ್ಥಾಪಕರು ಸೇರಿದಂತೆ ಒಬ್ಬರೇ ಆರು ಹುದ್ದೆಗಳನ್ನು ನಿಭಾಯಿಸುವುದು ಎಷ್ಟರ ಮಟ್ಟಿಗೆ ಸರಿ, ಶಶಿಕುಮಾರ್‌ಗೆ ನೀಡಲಾಗಿರುವ ಪ್ರಭಾರ ಹುದ್ದೆಗಳನ್ನು ತೆಗೆದು ಹಾಕಿ ಕೂಡಲೇ ಬದಲಾವಣೆ ಮಾಡುವಂತೆ ಜಿಲ್ಲಾಧಿಕಾರಿಗಳು ಅಂಜಿನೇಯಲು ಅವರಿಗೆ ಸೂಚನೆ ನೀಡಿದರು. ಕೇವಲ ಒಂದು ಹುದ್ದೆಯನ್ನು ಮಾತ್ರ ನೀಡಬೇಕು ಎಂದು ತಾಕೀತು ಮಾಡಿದರು.ಬಾಕಿ ಇರುವ ತೆರಿಗೆಯನ್ನು ವಸೂಲಿ ಮಾಡಿ:ಬೆಮೆಲ್‌ನ 27 ಕೋಟಿ ರುಪಾಯಿಗಳ ತೆರಿಗೆಯನ್ನು ವಸೂಲಿ ಮಾಡಿ ನಗರಸಭೆಗೆ ಬಿಜಿಎಂಎಲ್ ಆಡಳಿತ ಮಂಡಳಿ ಬಿಇಎಂಎಲ್ ಆಡಳಿತ ಮಂಡಳಿಗಳಿಂದ ಬಾಕಿ ತೆರಿಗೆ ಹಣ ವಸೂಲಿ ಮಾಡಲು ಏಕೆ ನೋಟಿಸ್ ಜಾರಿ ಮಾಡಿಲ್ಲವೆಂದು ಕಂದಾಯ ಅಧಿಕಾರಿ ಜಯರಾಮ್ ಅವರನ್ನು ಪ್ರಶ್ನೆ ಮಾಡಿ, ಕೂಡಲೇ ನೋಟೀಸ್ ಜಾರಿ ಮಾಡಿ. ನ್ಯಾಯಾಯಕ್ಕೆ ದಾವೆ ಹೋದರೆ ನೀವು ಕಂದಾಯ ಏಕೇ ವಸೂಲಿ ಮಾಡುತ್ತಿಲ್ಲ, ಕಂದಾಯ ವಸೂಲಿ ಮಾಡಬಾರದೆಂದು ನ್ಯಾಯಾಲಯ ಅದೇಶ ನೀಡಿದೆಯೇ ಎಂದು ಪ್ರಶ್ನೆಸಿದರು, ಮೊದಲು ನಗರಸಭೆಗೆ ಬರಬೇಕಾದ ಕಂದಾಯವನ್ನು ವಸೂಲಿ ಮಾಡುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.27 ಕೋಟಿ ಸಣ್ಣ ಮೊತ್ತವಲ್ಲ:ಬಿಇಎಂಎಲ್ ಕಂಪನಿಗಳಿಂದ 27 ಕೋಟಿ ಬಾಕಿ ತೆರಿಗೆ ಹಣ ಬರಬೇಕಿದೆ ಎಂಬ ಲೆಕ್ಕ ನೀಡುತ್ತಿರುವ ಸಿಬ್ಬಂದಿ ಬಾಕಿ ಹಣ ವಸೂಲಿಗೆ ಏನು ಕ್ರಮಕೈಗೊಂಡಿದ್ದಿರಿ? 27 ಕೋಟಿ ಎಂಬುದು ಸಣ್ಣ ಮೋತ್ತವೇ? ಇದನ್ನು ನನ್ನ ಗಮನಕ್ಕೆ ಏಕೆ ತಂದಿಲ್ಲ? ಬಾಕಿ ಉಳಿಸಿಕೊಂಡಿರುವ ಬಿಜಿಎಂಎಲ್ ಹಾಗೂ ಬಿಇಎಂಎಲ್ ಕಂಪನಿಗಳಿಗೆ ನೋಟಿಸ್ ಜಾರಿ ಮಾಡಿ ಕೂಡಲೇ ಕ್ರಮಕ್ಕೆ ಮುಂದಾಗಬೇಕೆಂದು ಸೂಚನೆ ನೀಡಿದರು.ಬೀದಿ ನಾಯಿಗಳ ಹಾವಳಿಗೆ ಕಡಿವಾಣ:ಬೀದಿ ನಾಯಿಗಳ ಆಶ್ರಯ ತಾಣಗಳನ್ನು ಪ್ರಾರಂಭಿಸಬೇಕು ಮತ್ತು ಸಂತಾನಾಹರಣ ಚಿಕಿತ್ಸೆ ನೀಡುವಂತಹ ಕೆಲಸ ಆಗಬೇಕು, ಶಾಲೆ ಮಾರುಕಟ್ಟೆ ಆಸ್ಪತ್ರೆಗಳ ಬಳಿ ಮಕ್ಕಳು ವೃದ್ದರ ಮೇಲೆ ದಾಳಿ ಮಾಡುವ ಪ್ರಕರಣಗಳು ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಬೀದಿ ನಾಯಿಗಳಿಗೆ ಶೆಲ್ಟರ್‌ಗಳನ್ನು ನಿರ್ಮಿಸಿ ಬೀದಿ ನಾಯಿಗಳ ಆಶ್ರಯ ನೀಡಿ ಎಬಿಸಿ ಎಆರ್‌ವಿ ಸಂತನಾಹರಣ ಚಿಕಿತ್ಸೆಯನ್ನು ನೀಡಬೇಕು ಎಂದು ಆದೇಶ ನೀಡಿರುವುದರಿಂದ ಎಬಿಸಿ ಎಆರ್‌ವಿ ಚಿಕಿತ್ಸೆಯನ್ನು ನೀಡುವ ಮೂಲಕ ಬೀದಿ ನಾಯಿಗಳ ಹಾವಳಿಗಳ ನಿಯಂತ್ರಣಕ್ಕೆ ಕ್ರಮವಹಿಸಲಾಗುತ್ತಿದೆ ಎಂದು ಹೇಳಿದರು.ಕೆಜಿಎಫ್‌ನಲ್ಲಿ ಕೋಲಾರಮ್ಮ ಸ್ವಚ್ಛತಾ ಪಡೆ:ಕೋಲಾರಮ್ಮ ಸ್ವಚ್ಛತಾ ಕಾರ್ಯಪಡೆಯುವ ಉತ್ತಮವಾಗಿ ಕೆಲಸ ಮಾಡಿರುವುದರಿಂದ ಮತ್ತು ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ಬಂದಿರುವುದರಿಂದ ಕೋಲಾರಮ್ಮ ಸ್ವಚ್ಛತೆ ಕಾರ್ಯಪಡೆಗೆ ಜಿಲ್ಲಾ ಉಸ್ತುವರಿ ಸಚಿವರು ಕೋಲಾರ ನಗರವು ಸೇರಿದಂತೆ ಜಿಲ್ಲೆಯ ಎಲ್ಲಾ ನಗರಗಳಿಗೂ ಚಾಲನೆ ನೀಡಲಿದ್ದಾರೆ. ಕೋಲಾರಮ್ಮ ಸ್ವಚ್ಛತಾ ವಾಹಿನಿಯು ಜಿಲ್ಲೆಯ ಎಲ್ಲಾ ನಗರಗಳಲ್ಲೂ ಸಂಚರಿಸಲಿದ್ದು ರಸ್ತೆಯಲ್ಲಿ ಕಸ ಹಾಕುವವರ ವಿರುದ್ಧ ದಂಡ ವಿದಿಸುತ್ತಾರೆ ದಂಡ ನೀಡದಿದ್ದಾರೆ ಅವರ ವಿರುದ್ಧ ಎಫ್‌ಐಆರ್ ಸಹ ದಾಖಲು ಮಾಡಲಾಗುವುದು ಎಂದು ಹೇಳಿದರು.
ಕೋಲಾರದ ಯೋಜನಾ ನಿದೇರ್ಶಕರಾದ ಅಂಬಿಕಾ, ಇಇ ಶ್ರೀನಿವಾಸ್, ಪೌರಾಯುಕ್ತ ಅಂಜನೇಯಲು ಎಇಇ ಗಂಗಾಧರ್ ಉಪಸ್ಥಿತರಿದ್ದರು.೨೦ಕೆಜಿಎಫ್೨ನಗರಸಭೆಗೆ ಭೇಟಿ ನೀಡಿ ಕಡತಗಳ ಪರಿಶೀಲನೆ ಹಾಗೂ ಅಧಿಕಾರಿಗಳ ಸಭೆ ನಡೆಸಿದ ಕೋಲಾರ ಜಿಲ್ಲಾಧಿಕಾರಿ ನಗರಸಭೆ ಆಡಳಿತಾಧಿಕಾರಿ ಡಾ:ಎಂ.ಆರ್.ರವಿ
;Resize=(128,128))
;Resize=(128,128))
;Resize=(128,128))
;Resize=(128,128))