ಕೊಟ್ಟೂರೇಶ್ವರ ದೇವಸ್ಥಾನಕ್ಕೆ ಡಿಸಿ ಕವಿತಾ ಭೇಟಿ

| Published : Sep 21 2025, 02:02 AM IST

ಸಾರಾಂಶ

ವಿಜಯನಗರ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಶನಿವಾರ ಇಲ್ಲಿನ ಪ್ರಸಿದ್ದ ಕೊಟ್ಟೂರು ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯ ಮೂರು ದೇವಸ್ಥಾನಗಳಿಗೆ ಭೇಟಿ ನೀಡಿದರು.

ಕನ್ನಡಪ್ರಭ ವಾರ್ತೆ ಕೊಟ್ಟೂರು

ವಿಜಯನಗರ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಶನಿವಾರ ಇಲ್ಲಿನ ಪ್ರಸಿದ್ದ ಕೊಟ್ಟೂರು ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯ ಮೂರು ದೇವಸ್ಥಾನಗಳಿಗೆ ಭೇಟಿ ನೀಡಿದರು.

ಶ್ರೀ ಸ್ವಾಮಿಯ ಹಿರೇಮಠಕ್ಕೆ ಮೊದಲು ಭೇಟಿ ನೀಡಿದ ಅವರು ದರ್ಶನ ಪಡೆದು ನಂತರ ದೇವಸ್ಥಾನದ ಒಳ ಮತ್ತು ಹಿಂಭಾಗ ಮತ್ತು ಹೊರಾಂಗಣ ಪರಿವೀಕ್ಷಣೆ ಮಾಡಿ ಮಾಹಿತಿ ಪಡೆದುಕೊಂಡರು. ಅಲ್ಲದೇ ಹಿರೇಮಠದಲ್ಲಿ ದಿನಿನಿತ್ಯ ನಡೆಯುವ ಪ್ರಸಾದ ಸೇವೆಯಲ್ಲಿ ಭಾಗವಹಿಸಿ ಸ್ವತಃ ಪ್ರಸಾದ ನೀಡಿದರಲ್ಲದೇ ಪ್ರಸಾದದ ಕೋಣೆಗೂ ಭೇಟಿ ನೀಡಿ ಪರಿಶೀಲಿಸಿದರು.

ಈ ಸಂದರ್ಭ ಅಲ್ಲಿದ್ದ ಕೆಲ ಭಕ್ತರು ಹಿರೇಮಠದ ಬಾಗಿಲಿಗೆ ಬೆಳ್ಳಿ ಅಳವಡಿಸುವ ಕಾರ್ಯದ ಕುರಿತು ವಿವರಿಸಿದರು.

ನಂತರ ಶ್ರೀ ಸ್ವಾಮಿಯ ಜೀವಂತ ಯೋಗ ಸಮಾಧಿ ಗಚ್ಚಿನ ಮಠ, ತೊಟ್ಟಿಲ ಮಠಕ್ಕೂ ಭೇಟಿ ನೀಡಿದರು. ಗ್ರಾಮ ದೇವತೆ ಊರಮ್ಮ ದೇವಿಯ ಗುಡಿಗೂ ಭೇಟಿ ನೀಡಿ ಪೂಜಾಕರ್ತರಿಂದ ಆರ್ಶೀವಾದ ಪಡೆದುಕೊಂಡರು.

ಈ ಸಂದರ್ಭ ಪಪಂ ಮಾಜಿ ಸದಸ್ಯ ಮರಬದ ನಾಗರಾಜ, ಆಯಾಗರ ಬಳಗದ ಕೆಂಪಳ್ಳಿ ಗುರುಸಿದ್ದನಗೌಡ , ನಾಗರಾಜ ಗೌಡ, ಎಚ್. ಪ್ರಕಾಶ್, ಕೂಡ್ಲಿಗಿ ಕೊಟ್ರೇಶ್ ಮತ್ತಿತರರು ಇದ್ದರು.

ಅಂಗನವಾಡಿ ಕೇಂದ್ರಕ್ಕೆ ಭೇಟಿ:

ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಶನಿವಾರ ಪಟ್ಟಣದಲ್ಲಿನ ಮಹಲ್ ಮಠದ ಕೋಣೆಯಲ್ಲಿರುವ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿದರು.ತಿಂಗಳುಗಳ ಹೆಸರು ಹೇಳಿರಿ ಎಂದು ಚಿಣ್ಣರನ್ನು ಕೇಳುತ್ತಿದಂತೆ ಇಬ್ಬರು ಪಟ-ಪಟನೆ ಜನವರಿಯಿಂದ ಡಿಸೆಂಬರ್ ವರೆಗಿನ ಎಲ್ಲಾ ತಿಂಗಳುಗಳ ಹೆಸರು ಹೇಳಿದರು. ಇದನ್ನು ಕೇಳಿದ ಜಿಲ್ಲಾಧಿಕಾರಿಗಳು ವೆರಿ ಗುಡ್ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ನಂತರ ಅಂಗನವಾಡಿಯಲ್ಲಿದ್ದ ಸಹಾಯಕಿಯನ್ನು ನಿಮ್ಮ ದಾಖಲೆ ಕೊಡಿ ಎಂದು ಕೇಳಿದರಲ್ಲದೆ, ಹಾಜರಾತಿಯಲ್ಲಿ ಸರಿಯಾಗಿ ಏಕೆ ನಮೂದಿಸಿಲ್ಲ ಎಂದು ಪ್ರಶ್ನಿಸಿದರು. ಅಂಗನವಾಡಿ ಶಿಕ್ಷಕಿ ಈ ಸಂದರ್ಭದಲ್ಲಿ ಕೇಂದ್ರದಲ್ಲಿ ಇರದೆ ಹೊರಗಡೆ ಹೋಗಿದ್ದಕ್ಕೆ ಆಕ್ಷೇಪಿಸಿ ಸ್ವತಃ ಪೋನ್ ಮಾಡಿ ಈ ರೀತಿ ಮಾಡಿದರೆ ಸರಿ ಇರಲ್ಲ ಎಂದು ಎಚ್ಚರಿಸಿದರು.