ಡಿಸಿಸಿ ಬ್ಯಾಂಕ್‌ ಸಾಲ ಸಿಗದೆ ಸಹಕಾರ ಸಂಘಕ್ಕೆ ಹಿನ್ನಡೆ

| Published : Sep 11 2024, 01:01 AM IST

ಸಾರಾಂಶ

ರೈತರಿಗೆ ಕೆಸಿಸಿ ಸಾಲ ಮಹಿಳಾ ಸಂಘಗಳಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಆರ್ಥಿಕವಾಗಿ ಬಲಿಷ್ಠ ಗೊಳ್ಳಬೇಕು, ಡಿಸಿಸಿ ಬ್ಯಾಂಕಿನ ಸಹಕಾರದಿಂದ ರೈತರು ಹಾಗೂ ಮಹಿಳಾ ಸಂಘಗಳಿಗೆ ಸಾಲವನ್ನು ವಿತರಣೆ ಮಾಡಲಾಗುತ್ತಿತ್ತು, ಈಗ ನೀಡುತ್ತಿಲ್ಲ

ಕನ್ನಡವಾರ್ತೆ ಮಾಲೂರು

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ರೈತರು ಹಾಗೂ ಮಹಿಳಾ ಸ್ವಸಹಾಯ ಸಂಘಗಳ ಜೀವಾಳವಾಗಿದ್ದು ಜಿಲ್ಲಾ ಕೇಂದ್ರ ಡಿಸಿಸಿ ಬ್ಯಾಂಕಿನಲ್ಲಿ ಚುನಾಯಿತ ಆಡಳಿತ ಮಂಡಳಿ ಇಲ್ಲದ ಕಾರಣ ರೈತರು ಹಾಗೂ ಮಹಿಳಾ ಸ್ವಸಹಾಯ ಸಂಘಗಳಿಗೆ ಸಕಾಲಕ್ಕೆ ಸಾಲ ಸಿಗುತ್ತಿಲ್ಲ. ಇದರಿಂದಾಗಿ ಸಹಕಾರ ಸಂಘಗಳ ಅಭಿವೃದ್ಧಿಗೆ ಹಿನ್ನೆಡೆಯಾಗುತ್ತಿದೆ ಎಂದು ದ್ಯಾಪಸಂದ್ರ ಸೊಸೈಟಿ ಅಧ್ಯಕ್ಷ ಆರ್.ಪ್ರಭಾಕರ್ ಹೇಳಿದರು.

ಪಟ್ಟಣದ ಮಾಲೂರು ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ನಿಯಮಿತ ದ್ಯಾಪಸಂದ್ರ ಸೊಸೈಟಿ ೨೦೨೩-೨೪ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಾಲ ವಿತರಣೆ ಮಾಡುತ್ತಿಲ್ಲ

ರೈತರಿಗೆ ಕೆಸಿಸಿ ಸಾಲ ಮಹಿಳಾ ಸಂಘಗಳಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಆರ್ಥಿಕವಾಗಿ ಬಲಿಷ್ಠ ಗೊಳ್ಳಬೇಕು, ಡಿಸಿಸಿ ಬ್ಯಾಂಕಿನ ಸಹಕಾರದಿಂದ ರೈತರು ಹಾಗೂ ಮಹಿಳಾ ಸಂಘಗಳಿಗೆ ಸಾಲವನ್ನು ವಿತರಣೆ ಮಾಡಲಾಗುತ್ತಿತ್ತು, ಆದರೆ ಕಳೆದ ಎರಡು ವರ್ಷಗಳಿಂದ ಕೇಂದ್ರ ಡಿಸಿಸಿ ಬ್ಯಾಂಕಿನಲ್ಲಿ ಚುನಾಯಿತ ಆಡಳಿತ ಮಂಡಳಿ ಇಲ್ಲದ ಕಾರಣ ಅಧಿಕಾರಿಗಳು ಸಾಲ ವಿತರಣೆ ಮಾಡುತ್ತಿಲ್ಲ ಎಂದರು.

ಇದೇ ಸಂದರ್ಭದಲ್ಲಿ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ ಸುಧಾಕರ್ ೨೦೨೩-೨೪ನೇ ಸಾಲಿನ ವಾರ್ಷಿಕ ಮಹಾಸಭೆಯ ಆಹ್ವಾನ ಪತ್ರಿಕೆ ಓದಿ ದಾಖಲಿಸಿದರು, ೨೦೨೩-೨೪ನೇ ಸಾಲಿನ ಪರಿಶೋಧನಾ ವರದಿ ಹಾಗೂ ಅನುಪಾಲನಾ ವರದಿ ಓದಿ ಅಂಗೀಕರಿಸಿದರು. ವಾರ್ಷಿಕ ಮಹಾಸಭೆಯಲ್ಲಿ ಉಪಾಧ್ಯಕ್ಷ ನಾರಾಯಣಸ್ವಾಮಿ, ನಿರ್ದೇಶಕರುಗಳಾದ ಎನ್ ಕೃಷ್ಣಪ್ಪ, ಸುಬ್ರಮಣಿ, ವಿ ಮುನಿರಾಜು, ಇನ್ನಿತರರು ಹಾಜರಿದ್ದರು.