ಸಾರಾಂಶ
ಚಿರತೆ ಟಾಸ್ಕ್ ಫೋರ್ಸ್ ಮೈಸೂರಿನಲ್ಲಿದ್ದು ಇಲ್ಲಿಗೆ ಬರಲು ತಿಳಿಸಿದ್ದೇವೆ. ಹೀಗಾಗಿ ಚಿರತೆ ಇರುವ ಬಗ್ಗೆ ದೃಢೀಕರಿಸಿದ್ದಾರೆ. ಹೀಗಾಗಿ ಅದನ್ನು ಸೆರೆ ಹಿಡಿಯಲು ಎಲ್ಲ ರೀತಿಯ ವ್ಯವಸ್ಥೆಯನ್ನು ಮಾಡಲಾಗಿದೆ ರೈತರು ಆತಂಕ ಪಡೆದೆ ಸಹಕಾರ ನೀಡುವಂತೆ ಮನವಿ ಮಾಡಿದರು.
ಕನ್ನಡಪ್ರಭ ವಾರ್ತೆ ಹನೂರು
ಬಿ ಆರ್ ಟಿ ಅರಣ್ಯ ಪ್ರದೇಶಕ್ಕೆ ಡಿಸಿಎಫ್ ದೀಪ ಕಾಂಟ್ರಾಕ್ಟರ್ ಭೇಟಿ ನೀಡಿ ಚಿರತೆ ಬಗ್ಗೆ ಆತಂಕದಲ್ಲಿದ್ದ ಗ್ರಾಮಸ್ಥರಿಗೆ ಧೈರ್ಯ ತುಂಬಿದರು. ತಾಲೂಕಿನ ಗುಂಡಾಲ್ ಜಲಾಶಯದ ಬಳಿ ಸೋಮವಾರ ಚಿರತೆ ಮೇಕೆ ಮೇಲೆ ದಾಳಿ ಮಾಡಿ ರೈತರ ಹಾಗೂ ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದ್ದ ಘಟನೆ ಹಿನ್ನೆಲೆ ಡಿಸಿಎಫ್ ದೀಪ ಕಾಂಟ್ರಾಕ್ಟರ್ ವಲಯ ಅರಣ್ಯ ಪ್ರದೇಶದ ಕಾಡಂಚಿನ ಪ್ರದೇಶಗಳಿಗೆ ಭೇಟಿ ನೀಡಿ ಗ್ರಾಮಸ್ಥರಿಗೆ ಮತ್ತು ಸುತ್ತಮುತ್ತಲಿನ ಜಮೀನುಗಳಲ್ಲಿ ವಾಸಿಸುವ ರೈತರೊಂದಿಗೆ ಮಾತನಾಡಿದರು. ರೈತರು ಚಿರತೆ ಬಗ್ಗೆ ಮುನ್ನೆಚ್ಚರಿಕೆ ಕ್ರಮವಾಗಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಮಾಹಿತಿ ನೀಡಿ, ವಲಯ ಅರಣ್ಯ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರು ನಿರಂತರವಾಗಿ ದಿನನಿತ್ಯ ತೊಂದರೆ ನೀಡುತ್ತಿರುವ ಚಿರತೆಯನ್ನು ಸೆರೆ ಹಿಡಿಯಲು ಸತತವಾಗಿ ಪ್ರಯತ್ನ ಪಡುತ್ತಿದ್ದಾರೆ. ರೈತರಿಗೆ ಗ್ರಾಮಸ್ಥರಿಗೆ ಚಿರತೆ ಕಂಡು ಬಂದರೆ ತಕ್ಷಣ ವಲಯ ಅರಣ್ಯ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿ ವರ್ಗದವರಿಗೆ ಮಾಹಿತಿ ನೀಡುವ ಮೂಲಕ ಅರಣ್ಯ ಇಲಾಖೆ ಅಧಿಕಾರಿ ಸಿಬ್ಬಂದಿ ವರ್ಗದವರಿಗೆ ಕಾರ್ಯಾಚರಣೆ ನಡೆಸಲು ಸಹಕಾರ ನೀಡುವಂತೆ ತಿಳಿಸಿದರು.ಚಿರತೆ ಟಾಸ್ಕ್ ಫೋರ್ಸ್ ಮೈಸೂರಿನಲ್ಲಿದ್ದು ಇಲ್ಲಿಗೆ ಬರಲು ತಿಳಿಸಿದ್ದೇವೆ. ಹೀಗಾಗಿ ಚಿರತೆ ಇರುವ ಬಗ್ಗೆ ದೃಢೀಕರಿಸಿದ್ದಾರೆ. ಹೀಗಾಗಿ ಅದನ್ನು ಸೆರೆ ಹಿಡಿಯಲು ಎಲ್ಲ ರೀತಿಯ ವ್ಯವಸ್ಥೆಯನ್ನು ಮಾಡಲಾಗಿದೆ ರೈತರು ಆತಂಕ ಪಡೆದೆ ಸಹಕಾರ ನೀಡುವಂತೆ ಮನವಿ ಮಾಡಿದರು.ಪ್ಲಾಂಟ್ ಬಳಿ ಚಿರತೆ: ಬೇರೆ ಕಡೆ ಕಿರುಕುಳ ನೀಡುತ್ತಿದ್ದ ಚಿರತೆಯನ್ನು ಹಿಡಿದು ಕಾಲರ್ ಟ್ಯೂನ್ ಅಳವಡಿಸಿ ಈ ಭಾಗದಲ್ಲಿ ಬಿಟ್ಟಿರುವುದರಿಂದ ಚಿರತೆ ಎಲ್ಲಿದೆ ಎಂಬುದನ್ನು ಅರಣ್ಯಾಧಿಕಾರಿಗಳು ಟ್ರಾಪ್ ಮೂಲಕ ಗಂಟೆಗೊಮ್ಮೆ ಅಪ್ಡೇಟ್ ಆಗುವುದನ್ನು ಪರಿಶೀಲಿಸಿ ಅರಣ್ಯಾಧಿಕಾರಿಗಳು ಚಿರತೆ ಇರುವ ಬಗ್ಗೆ ಮಾಹಿತಿ ನೀಡುವುದರ ಮೂಲಕ ಅದರ ಚಲನವಲನವನ್ನು ಗಮನಿಸುತ್ತಿದ್ದು ಸೆರೆ ಹಿಡಿಯಲು ಎಲ್ಲಾ ರೀತಿಯ ಯತ್ನಗಳನ್ನು ಮಾಡಲಾಗುತ್ತಿದೆ. ಹೀಗಾಗಿ ರೈತರು ಅರಣ್ಯ ಅಧಿಕಾರಿಗಳಿಗೆ ಸಹಕಾರ ನೀಡಬೇಕು ಎಂದು ವಲಯ ಅರಣ್ಯ ಅಧಿಕಾರಿ ವಾಸು ಸಹ ಮನವಿ ಮಾಡಿದರು.