ರಾಜ್ಯದಲ್ಲಿ ಬರಗಾಲ ಉಂಟಾಗಿದ್ದು ಮುಂದಿನ ಮೂರು ವರ್ಷ ಬರದ ಛಾಯೆ ಇರುತ್ತದೆ. ಆದ್ದರಿಂದ ಕೇಂದ್ರ ಸರ್ಕಾರ ರೈತರ ಸಾಲ ಮನ್ನಾ ಮಾಡಬೇಕೆಂದು ಕರ್ನಾಟಕ ರಾಜ್ಯ ಉಪ ಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್ ಒತ್ತಾಯಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಕುಣಿಗಲ್ರಾಜ್ಯದಲ್ಲಿ ಬರಗಾಲ ಉಂಟಾಗಿದ್ದು ಮುಂದಿನ ಮೂರು ವರ್ಷ ಬರದ ಛಾಯೆ ಇರುತ್ತದೆ. ಆದ್ದರಿಂದ ಕೇಂದ್ರ ಸರ್ಕಾರ ರೈತರ ಸಾಲ ಮನ್ನಾ ಮಾಡಬೇಕೆಂದು ಕರ್ನಾಟಕ ರಾಜ್ಯ ಉಪ ಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್ ಒತ್ತಾಯಿಸಿದ್ದಾರೆ. ಕುಣಿಗಲ್ ತಾಲೂಕಿನ ಹುಲಿಯೂರ್ ದುರ್ಗದಲ್ಲಿ ಏರ್ಪಡಿಸಿದ್ದ ಪ್ರಜಾ ಸೇವೆ ಇಲಾಖೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ರಾಜ್ಯದ ಬಹುತೇಕ ತಾಲೂಕುಗಳನ್ನು ಬರ ಎಂದು ಘೋಷಣೆ ಮಾಡಿ ಕೇಂದ್ರ ಸರ್ಕಾರಕ್ಕೆ ಈಗಾಗಲೇ ಮನವಿ ಸಲ್ಲಿಸಲಾಗಿದೆ. ಮುಂದಿನ ಎರಡು ಹಂತದಲ್ಲಿ ಬರದ ತಾಲೂಕುಗಳ ಪಟ್ಟಿಯನ್ನು ಕೇಂದ್ರಕ್ಕೆ ಕಳುಹಿಸಲು ನಾವು ಸಿದ್ಧರಿದ್ದೇವೆ. ಬರಗಾಲ ನಿರ್ವಹಣೆಗೆ ಕೇಂದ್ರ ಸರ್ಕಾರ ನೀಡುವ ಬಹುತೇಕ ವ್ಯವಸ್ಥೆಯನ್ನು ನಾವು ಸರಿಯಾದ ರೀತಿ ಬಳಸಿಕೊಳ್ಳುವ ಕಾರ್ಯವನ್ನು ಮಾಡುತ್ತಿದ್ದೇವೆ ಅಧಿಕಾರಿಗಳು ಕೂಡ ಇದರ ಬಗ್ಗೆ ಚುರುಕಾಗಬೇಕೆಂದರು.ನಾನು ಪೊಲೀಸ್ ಇಲಾಖೆಯಲ್ಲಿ ಮಂತ್ರಿ ಆಗಿದ್ದೆ 1000 ಸಮಸ್ಯೆಗಳು ಪ್ರತಿದಿನ ನನ್ನನ್ನು ಕಾಡುತ್ತಿದ್ದವು. ಈಗ ಪೊಲೀಸ್ ಇಲಾಖೆ ಬೇಡ ಎಂದು ಕಂದಾಯ ಇಲಾಖೆ ಜವಾಬ್ದಾರಿಯನ್ನು ತೆಗೆದುಕೊಂಡೆ. ಆದರೂ ಕೂಡ ಬರ ಎಂಬ ಮಹಾ ಮಾರಿ 150 ವರ್ಷಗಳ ನಂತರ ಇಂತಹ ಕಠಿಣವಾದ ಬರಗಾಲ ಬಂದು ನನ್ನನ್ನು ಕಾಡಲಾರಂಭಿಸಿದೆ. ನಾನು ಎಲ್ಲಿ ಹೋಗುತ್ತೇನೋ ಅಲ್ಲಿ ಸಮಸ್ಯೆಗಳ ಸುರಿಮಳೆ ಹೆಚ್ಚಾಗುತ್ತವೆ ಎಂದು ವಿಷಾದ ವ್ಯಕ್ತಪಡಿಸಿದರು.
ಕುಣಿಗಲ್ ಗೆ ಈಗಾಗಲೇ ಎಂಜಿನಿಯರ್ ಕಾಲೇಜು, ಮಂಜೂರಾಗಿದೆ ಕುಣಿಗಲ್ ಶಾಸಕರು ಇಲ್ಲಿಗೆ ಮೆಡಿಕಲ್ ಕಾಲೇಜು ನೀಡಬೇಕೆಂದು ಒತ್ತಡ ಹಾಕುತ್ತಿದ್ದಾರೆ. ನಾನು ತುಮಕೂರು ಜಿಲ್ಲೆಗೆ ಮೆಡಿಕಲ್ ಕಾಲೇಜು ಕೇಳಿದ್ದೇನೆ ಆದರೆ ಮುಖ್ಯಮಂತ್ರಿ ಅಧಿಕಾರದ ಪೆನ್ನು ಕುಣಿಗಲ್ ಶಾಸಕ ಡಾ.ರಂಗನಾಥ್ ಅವರ ಮನೆಯಲ್ಲಿದೆ ಅವರು ಕುಣಿಗಲ್ ಗೆ ಎಂದು ಬರೆಸಲಿ ಎಂದರು. ಲಿಂಕ್ ಕೆನಲ್ ಬಗ್ಗೆ ಸರ್ಕಾರ ಅಭಿವೃದ್ಧಿ ಮಾಡಲು ಅನುಮತಿ ನೀಡಿದೆ ತಾಂತ್ರಿಕ ಸಮಸ್ಯೆ ಇದ್ದು ಮುಂದಿನ ದಿನಗಳಲ್ಲಿ ಆದಷ್ಟು ಬೇಗ ಕಾಮಗಾರಿ ಪ್ರಾರಂಭ ಆಗಲಿದೆ ಎಂದರು. ಕುಣಿಗಲ್ ಶಾಸಕ ಡಾ. ರಂಗನಾಥ ಮಾತನಾಡಿ, ನಾನು ಒಬ್ಬ ವೈದ್ಯನಾಗಿ ರಾಜಕೀಯ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಬಹುದು ಎಂದು ಕನಸು ಕಟ್ಟಿ ಬಂದೆ ಆದರೆ ಇಲ್ಲಿ ಪ್ರತಿ ಸಣ್ಣ ವಿಚಾರಕ್ಕೂ ಕೂಡ ರಾಜಕೀಯ ಮಾಡುತ್ತಾರೆ.ಸಣ್ಣ ಕುಡಿಯುವ ನೀರಿನ ಘಟಕ ಪ್ರಾರಂಭದಿಂದ ಮೊದಲುಗೊಂಡು ಲಿಂಕ್ ಕೆನಾಲ್ ವರೆಗೂ ಕೇವಲ ವಿರೋಧ ವ್ಯಕ್ತಪಡಿಸುವುದು ಸರಿಯಲ್ಲ ಡಾ ಜಿ ಪರಮೇಶ್ವರ್ ಅವರು ಎಂಜಿನಿಯರಿಂಗ್ ಮೆಡಿಕಲ್ ಕಾಲೇಜು ಉಳ್ಳವರಾಗಿದ್ದಾರೆ ಕುಣಿಗಲ್ ತಾಲೂಕಿಗೆ ಸರ್ಕಾರದಿಂದ ಮೆಡಿಕಲ್ ಕಾಲೇಜು ಒಂದನ್ನು ಮಂಜೂರು ಮಾಡಲು ಅವಕಾಶ ಮಾಡಬೇಕೆಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಹುಲಿಯೂರ್ ದುರ್ಗಾ ಮಠದ ಸುತ್ತಲೂ ಅಭಿವೃದ್ಧಿ ಅಂಕನಹಳ್ಳಿ ಮಠಕ್ಕೆ ಸೇರಿರುವ ಭೂಮಿಯನ್ನು ಮಂಜೂರಾತಿ ಸೇರಿದಂತೆ ನೂರಾರು ಅರ್ಜಿಗಳನ್ನು ಸ್ವಾಮೀಜಿ ಸಾರ್ವಜನಿಕರು ಸೇರಿದಂತೆ ಮಹಿಳೆಯರು ನೀಡಿದರು. ಈ ಸಂದರ್ಭದಲ್ಲಿ ಹಲವಾರು ಇಲಾಖೆಗಳಿಂದ ತಾವು ಮಾಡಿರುವ ವಿವಿಧ ಯೋಜನೆಗಳಿಗೆ ಸಂಬಂಧಿಸಿದಂತೆ ಮಳಿಗೆಗಳನ್ನು ನಿರ್ಮಾಣ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್. ಅಪರ ಜಿಲ್ಲಾಧಿಕಾರಿ ತಿಪ್ಪೇಸ್ವಾಮಿ, ಉಪವಿಭಾಗಾಧಿಕಾರಿ ನಹೀದಾ ಜಮ್ ಜಮ್. ತಹಸೀಲ್ದಾರ್ ಕರಿಯ ನಾಯಕ. ತಾಲೂಕು ಪಂಚಾಯಿತಿ ಕಾರ್ಯನಿರ್ವಣಾಧಿಕಾರಿ ವಸಂತಕುಮಾರ್, ಡಿವೈಎಸ್ಪಿ ಸೇರಿದಂತೆ ಹಲವಾರು ಅಧಿಕಾರಿಗಳು ಇದ್ದರು.