ಚಿಕ್ಕಮಗಳೂರುಕಾಫಿನಾಡು ಚಿಕ್ಕಮಗಳೂರಿನಲ್ಲಿ ಕಳೆದ ಮೂರು ವರ್ಷಗಳಲ್ಲಿ ಮೃತಪಟ್ಟ 7,227 ಮಂದಿ ಮಹಿಳೆಯರ ಪೈಕಿ ಹಲವರ ಬ್ಯಾಂಕ್ ಖಾತೆಗೆ ಗೃಹ ಲಕ್ಷ್ಮಿ ಸ್ಕೀಂ ಹಣ ಸಂದಾಯವಾಗುತ್ತಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಇ-ಜನ್ಮ ತಂತ್ರಾಂಶದ ಮಾಹಿತಿ ಆಧಾರಿಸಿ ಅನರ್ಹರ ಪತ್ತೆಗೆ ಅಧಿಕಾರಿಗಳು ಮುಂದಾಗಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ 2,62,880 ಮಂದಿ ಮಾತ್ರ ಫಲಾನುಭವಿಗಳು ।
ವಿಶ್ವನಾಥ ಮಲೇಬೆನ್ನೂರುಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ಕಾಫಿನಾಡು ಚಿಕ್ಕಮಗಳೂರಿನಲ್ಲಿ ಕಳೆದ ಮೂರು ವರ್ಷಗಳಲ್ಲಿ ಮೃತಪಟ್ಟ 7,227 ಮಂದಿ ಮಹಿಳೆಯರ ಪೈಕಿ ಹಲವರ ಬ್ಯಾಂಕ್ ಖಾತೆಗೆ ಗೃಹ ಲಕ್ಷ್ಮಿ ಸ್ಕೀಂ ಹಣ ಸಂದಾಯವಾಗುತ್ತಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಇ-ಜನ್ಮ ತಂತ್ರಾಂಶದ ಮಾಹಿತಿ ಆಧಾರಿಸಿ ಅನರ್ಹರ ಪತ್ತೆಗೆ ಅಧಿಕಾರಿಗಳು ಮುಂದಾಗಿದ್ದಾರೆ.ರಾಜ್ಯ ಸರ್ಕಾರ ಇದೀಗ ಗೃಹಲಕ್ಷ್ಮಿ ಯೋಜನೆ ದುರುಪಯೋಗ ತಡೆಗಟ್ಟಲು ಮುಂದಾಗಿರುವ ನಿಟ್ಟಿನಲ್ಲಿ ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳ ಪೈಕಿ ಮೃತಪಟ್ಟವರ ಪತ್ತೆಗೆ ಕೈ ಹಾಕಲಾಗಿದೆ.
ಈಗಾಗಲೇ ಹಲವು ಮಾರ್ಗದಲ್ಲಿ ಪತ್ತೆ ಕಾರ್ಯ ಶುರು ಮಾಡಿರುವ ಅಧಿಕಾರಿಗಳು ಇ-ಜನ್ಮ ತಂತ್ರಾಂಶದಲ್ಲಿ ಕಳೆದ ಮೂರು ವರ್ಷದಲ್ಲಿ ಮೃತಪಟ್ಟ ಮಹಿಳೆಯರ ಮಾಹಿತಿ ದತ್ತಾಂಶ ಆಧಾರಿಸಿ ಪರಿಶೀಲನೆ ಆರಂಭಿಸಿದ್ದಾರೆ.ಚಿಕ್ಕಮಗಳೂರು ಜಿಲ್ಲೆಯಲ್ಲಿ ಇರುವ 2,72,904 ಫಲಾನುಭವಿಗಳಲ್ಲಿ 2,62,880 ಫಲಾನುಭವಿಗಳಿಗೆ ಮಾತ್ರ ₹2 ಸಾವಿರ ಸೌಲಭ್ಯ ದೊರೆಯುತ್ತಿದೆ. ಬಾಕಿ 10,024 ಮಂದಿಗೆ ಹಣ ಸಂದಾಯವಾಗುತ್ತಿಲ್ಲ. ಇದರಲ್ಲಿ 4,238 ಮಂದಿ ಐಟಿ, ಜಿಎಸ್‌ಟಿ ಪಾವತಿದಾರರು, 3,712 ಮಂದಿ ಮರಣ ಹೊಂದಿದ್ದಾರೆ, 306 ಮಂದಿಯ ಆಧಾರ್ ಸಂಖ್ಯೆ ಲಿಂಕ್ ಆಗಿಲ್ಲ, 409 ಮಂದಿ ತಿದ್ದುಪಡಿ ಅರ್ಜಿ ಸಲ್ಲಿಕೆ ಹಿನ್ನೆಲೆಯಲ್ಲಿ, 330 ಮಂದಿ ಇದೀಗ ಹೊಸ ಅರ್ಜಿ ಸಲ್ಲಿಕೆದಾರರು, 1,029 ಮಂದಿಯ ಬ್ಯಾಂಕ್ ಖಾತೆ ಸರಿಯಾಗಿಲ್ಲ ಎಂಬ ಕಾರಣಕ್ಕೆ ಗೃಹ ಲಕ್ಷ್ಮಿ ಹಣ ನಿಲ್ಲಿಸಲಾಗಿದೆ.
ಇದನ್ನು ಹೊರತು ಪಡಿಸಿ ಇನ್ನೂ ಹಲವು ಮೃತಪಟ್ಟವರ ಬ್ಯಾಂಕ್ ಖಾತೆಗೆ ₹2 ಸಾವಿರ ಸಂದಾಯವಾಗುತ್ತಿದೆ ಎಂಬ ಅನುಮಾನ ವ್ಯಕ್ತವಾಗಿದೆ. ಹೀಗಾಗಿ, ಮೃತಪಟ್ಟವರ ಮಾಹಿತಿ ಆಧಾರಿಸಿ ತಾಳೆ ಹಾಕಲು ನಿರ್ಧರಿಸಲಾಗಿದೆ.3,515 ಮೃತರ ಮಾಹಿತಿ ಹುಡುಕಾಟ
ಜಿಲ್ಲೆಯಲ್ಲಿ ಕಳೆದ 2023ರಿಂದ ಈವರೆಗೆ ಒಟ್ಟು 7,227 ಮಹಿಳೆಯರು ಮೃತಪಟ್ಟಿದ್ದಾರೆ ಎಂಬ ಅಂಕಿ ಅಂಶ ಇ-ಜನ್ಮ ತಂತ್ರಾಂಶದಲ್ಲಿ ದಾಖಲಾಗಿದೆ. ಆದರೆ, ಗೃಹಲಕ್ಷ್ಮಿ ಸೌಲಭ್ಯ ಪಡೆಯುತ್ತಿರುವವರ ಪೈಕಿ 3,712 ಮಂದಿ ಮಾತ್ರ ಮೃತಪಟ್ಟಿದ್ದಾರೆ. ಅವರಿಗೆ ಮಾತ್ರ ಗೃಹ ಲಕ್ಷ್ಮೀ ಸ್ಕೀಂ ಹಣ ನಿಲ್ಲಿಸಲಾಗಿದೆ. ಇನ್ನುಳಿದ 3,515 ಮಂದಿಗೆ ₹2 ಸಾವಿರ ಈಗಲೂ ಪಾವತಿ ಆಗುತ್ತಿದೆಯೇ ಅಥವಾ ಅವರು ಗೃಹ ಲಕ್ಷ್ಮಿ ಯೋಜನೆ ಫಲಾನುಭವಿಗಳೇ ಅಲ್ಲವೇ ಎಂಬುದನ್ನು ಪರಿಶೀಲನೆ ನಡೆಸಬೇಕಾಗಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ ಎಂಬ ಮಾಹಿತಿ ‘ಕನ್ನಡಪ್ರಭ’ಕ್ಕೆ ಲಭ್ಯವಾಗಿದೆ.ಮೃತರ ಪಟ್ಟಿ ಆಶಾ- ಅಂಗನವಾಡಿ ಕಾರ್ಯಕರ್ತರಿಗೆ?ಜಿಲ್ಲೆಯಲ್ಲಿ ಮೃತಪಟ್ಟವರ ವಿವರವನ್ನು ತಾಲೂಕುವಾರು ಆಯಾ ವ್ಯಾಪ್ತಿಯ ಅಂಗನವಾಡಿ ಕಾರ್ಯಕರ್ತರಿಗೆ ನೀಡುವುದು. ಅವರು ಸ್ಥಳೀಯವಾಗಿ ಇರುವುದರಿಂದ ಅವರಿಂದ ಪರಿಶೀಲನೆ ಮಾಡಿಸಿ ಮಾಹಿತಿ ಪಡೆದು ಮುಂದಿನ ಕ್ರಮ ಕೈಗೊಳ್ಳಲು ಅಧಿಕಾರಿಗಳು ಪ್ಲಾನ್ ಮಾಡಿದ್ದಾರೆ.
----ಬಾಕ್ಸ್---ರೇಷನ್ ಕಾರ್ಡ್ ಯಜಮಾನಿ ಬದಲಾವಣೆ ಸಾಧ್ಯತೆ ರೇಷನ್ ಕಾರ್ಡ್‌ನಲ್ಲಿ ಮನೆ ಯಜಮಾನಿಯ ಆಧಾರ್ ಕಾರ್ಡ್ ಲಿಂಕ್ ಆಗಿರುವ ಬ್ಯಾಂಕ್ ಖಾತೆಗೆ ಗೃಹ ಲಕ್ಷ್ಮಿ ಹಣ ಪಾವತಿ ಆಗುವಂತೆ ಯೋಜನೆ ರೂಪಿಸಲಾಗಿದೆ. ಒಂದು ವೇಳೆ ಯಜಮಾನಿ ಮೃತಪಟ್ಟಿದ್ದರೆ, ಕುಟುಂಬಸ್ಥರು ಮತ್ತೊಬ್ಬ ಮಹಿಳೆ ಯನ್ನು ಮನೆ ಯಜಮಾನಿಯಾಗಿ ರೇಷನ್ ಕಾರ್ಡ್‌ನಲ್ಲಿ ಬದಲಾವಣೆ ಮಾಡಿಕೊಂಡಿರುವ ಸಾಧ್ಯತೆ ಹೆಚ್ಚಾಗಲಿದೆ.
ಇಂತಹ ಸಂದರ್ಭದಲ್ಲಿ, ಯಥಾ ಪ್ರಕಾರ ಗೃಹ ಲಕ್ಷ್ಮೀ ಸ್ಕೀಂನ ಹಣ ರೇಷನ್ ಕಾರ್ಡ್‌ನಲ್ಲಿ ಯಾವ ಯಜಮಾನಿ ಆಧಾರ್ ಕಾರ್ಡ್ ಸಂಖ್ಯೆ ನೋಂದಣೆ ಆಗಲಿದೆಯೋ ಆ ಸಂಖ್ಯೆಗೆ ಜೋಡಣೆ ಆಗಿರುವ ಬ್ಯಾಂಕ್ ಖಾತೆಗೆ ಹಣ ಸಂದಾಯವಾಗಿರಲಿದೆ. ಹೀಗಾಗಿ, ಮೃತರ ಪಟ್ಟಿ ಆಧರಿಸಿ ಪರಿಶೀಲನೆ ಮಾಡುವುದರಿಂದ ಹೆಚ್ಚಿನ ಉಪಯೋಗ ಆಗುವ ಸಾಧ್ಯತೆಯೂ ಕಡಿಮೆಯಾಗಿದೆ ಎಂದು ಅಧಿಕಾರಿಗಳು ‘ಕನ್ನಡಪ್ರಭ’ ಮಾಹಿತಿ ನೀಡಿದ್ದಾರೆ.-- ಬಾಕ್ಸ್--ತಾಲೂಕುವಾರು ಜಿಲ್ಲೆಯಲ್ಲಿ ಕಳೆದ ಮೂರು ವರ್ಷದಲ್ಲಿ ಮೃತಪಟ್ಟ ಮಹಿಳೆ ಸಂಖ್ಯೆ
ತಾಲೂಕುನೋಂದಣಿ ಸಂಖ್ಯೆಹಾಲಿ ಫಲಾನುಭವಿ ಸಂಖ್ಯೆಮೃತರ ಒಟ್ಟು ಸಂಖ್ಯೆಮೃತ ಗೃಹ ಲಕ್ಷ್ಮಿ ಫಲಾನುಭವಿಚಿಕ್ಕಮಗಳೂರು72,68769,6441,735976ಕಡೂರು 72,770 70,2372,0911,122ತರೀಕೆರೆ 35,468 34,292893466ಅಜ್ಜಂಪುರ 19,803 19,217593266ಮೂಡಿಗೆರೆ 29,068 27,908738360ಎನ್ ಆರ್‌ಪುರ 16,193 15,594367175ಶೃಂಗೇರಿ 8,273 7,966 21187ಕೊಪ್ಪ 18,642 18,022 599260ಒಟ್ಟು 2,72,904 2,62,8807,2273,712
(ಸೂಕ್ತ ಫೋಟೋ ಬಳಸಿ)