ಸಾರಾಂಶ
ಗುಂಡ್ಲುಪೇಟೆಯ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ದಿನಗೂಲಿ ನೌಕರ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ರಾತ್ರಿ ಸಾವನ್ನಪ್ಪಿದ್ದಾನೆ. ಆತನ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಮದ್ದೂರು ಅರಣ್ಯ ಕಚೇರಿ ಮುಂದೆ ಶವ ಇಟ್ಟುಕೊಂಡು ಧರಣಿ ನಡೆಸಿದರು.
ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮದ್ದೂರು ವಲಯದಲ್ಲಿ ಸೇವೆ ಸಲ್ಲಿಸುತ್ತಿದ್ದ ದಿನಗೂಲಿ ನೌಕರ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ರಾತ್ರಿ ಸಾವನ್ನಪ್ಪಿದ್ದಾನೆ. ಆತನ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಮದ್ದೂರು ಅರಣ್ಯ ಕಚೇರಿ ಮುಂದೆ ಶವ ಇಟ್ಟುಕೊಂಡು ಧರಣಿ ನಡೆಸಿದರು.
ತಾಲೂಕಿನ ಗೋಪಾಲಪುರ ಗ್ರಾಮದ ಮಹೇಶ್ (೫೫) ಮದ್ದೂರು ವಲಯದಲ್ಲಿ ದಿನಗೂಲಿ ನೌಕರನಾಗಿ ಕೆಲಸ ಮಾಡುತ್ತಿದ್ದರು. ಮಹೇಶ್ ಪಾರ್ಶ್ವವಾಯುನಿಂದ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಅರಣ್ಯ ಇಲಾಖೆಯಲ್ಲಿ ಎರಡು ದಶಕಗಳ ಕಾಲ ಕೆಲಸ ಮಾಡಿದ್ದಾನೆ. ಚಿಕಿತ್ಸಾ ವೆಚ್ಚ ಭರಿಸಿ, ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಶವದ ಸಮೇತ ಧರಣಿ ಕುಳಿತ ಸ್ಥಳಕ್ಕೆ ಎಸಿಎಫ್ ಸುರೇಶ್ ಹಾಗೂ ಪೊಲೀಸರು ಧರಣಿ ನಿರತರೊಂದಿಗೆ ಮಾತುಕತೆ ನಡೆಸಿದರು.ದಿನಗೂಲಿ ನೌಕರರ ಸಂಘದ ರಾಜ್ಯಾಧ್ಯಕ್ಷ ನಾಗರಾಜು ಮಾತನಾಡಿ, ೨೦ ಲಕ್ಷ ಪರಿಹಾರ ನೀಡಬೇಕು ಎಂದು ಪಟ್ಟು ಹಿಡಿದ್ದಾರೆ. ಇದಕ್ಕೆ ಎಸಿಎಫ್ ಚಿಕಿತ್ಸಾ ವೆಚ್ಚ ಹಾಗೂ ಲಕ್ಷ ಪರಿಹಾರ ನೀಡುತ್ತೇವೆಂದು ಹೇಳುತ್ತಿದ್ದಾರೆ ಎನ್ನಲಾಗಿದೆ. ಮೃತ ಮಹೇಶ್ ಸ್ವಾಭಾವಿಕವಾಗಿ ಸಾವನ್ನಪ್ಪಿದ್ದಾನೆ ಹೆಚ್ಚಿನ ಪರಿಹಾರ ನೀಡಲು ಬರುವುದಿಲ್ಲ. ಇಲಾಖೆ ನಿಯಮದಂತೆ ಬರುವ ಹಣ ನೀಡಬಹುದಾಗಿದೆ ಎಂಬ ಮಾತು ಕೇಳಿ ಬಂದಿದೆ.