ಸಾರಾಂಶ
ಕೊಪ್ಪಳ: ಮಾಜಿ ಪ್ರಧಾನ ಮಂತ್ರಿ ಡಾ. ಮನಮೋಹನ್ ಸಿಂಗ್ ನಿಧನವಾಗಿರುವ ಹಿನ್ನೆಲೆಯಲ್ಲಿ ಕೊಪ್ಪಳ ನಗರದ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಅಧ್ಯಕ್ಷ ಅಮರೇಗೌಡ ಭಯ್ಯಾಪುರ ಮಾತನಾಡಿ, ಬಡತನದಲ್ಲಿಯೇ ಜನಿಸಿ, ಬೆಳೆದ ಮನಮೋಹನ್ ಸಿಂಗ್ ಅವರು ದೇಶದ ಪ್ರಧಾನಿಯಾದರು. ಅವರು ದೀಪದ ಬೆಳಕಿನಲ್ಲಿ ಓದಿ ಬೆಳೆದರು.ದೇಶದ ಆರ್ಥಿಕ ಸುಧಾರಣೆಗೆ ಅವರು ಬಹುದೊಡ್ಡ ಕಾಣಿಕೆ ನೀಡಿದರು. ಇಡೀ ಜಗತ್ತು ಆರ್ಥಿಕ ಮುಗ್ಗಟ್ಟು ಎದುರಿಸಿದಾಗ ಅದರಿಂದ ಭಾರತವನ್ನು ಪಾರು ಮಾಡಿದರು. ಕೇವಲ ಭಾರತಕ್ಕೆ ಅಷ್ಟೇ ಅಲ್ಲ, ಜಗತ್ತಿನ ಹಲವು ದೇಶಗಳಿಗೆ ಆರ್ಥಿಕ ಪಾಠ ಮಾಡಿದ ಹಿರಿಮೆ ಅವರದು ಎಂದು ಬಣ್ಣಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೃಷ್ಣ ಎಂ. ಇಟ್ಟಂಗಿ, ಬ್ಲಾಕ್ ಅಧ್ಯಕ್ಷ ಕೃಷ್ಣರೆಡ್ಡಿ ಗಲಾಬಿ, ಮಹಿಳಾ ಕೆಪಿಸಿಸಿ ಉಪಾಧ್ಯಕ್ಷೆ ಕಿಶೋರಿ ಬುದನೂರ್, ನಗರಸಭೆ ಸದಸ್ಯ ಅಕ್ಬರ್ ಪಾಶ, ಪಪಂ ಭಾಗ್ಯನಗರ ಉಪಾಧ್ಯಕ್ಷ ಹೊನ್ನೂರಸಾಬ್ ಭೈರಪುರ, ಜಿಪಂ ಮಾಜಿ ಉಪಾಧ್ಯಕ್ಷ, S.B. ನಾಗರಲ್ಲಿ, ಶಿವರೆಡ್ಡಿ ಬಹುಮಕ್ಕನವರ, ಗವಿಸಿದ್ದಪ್ಪ ಚಿನ್ನೂರ, ಜ್ಯೋತಿ ಗೊಂಡಬಾಳ, ಪದ್ಮಾವತಿ ಕಂಬಳಿ, ಅಜ್ಜಪ್ಪಸ್ವಾಮಿ, ರಾಮಣ್ಣ ಕಳ್ಳನವರ, ಸಲೀಂ ಅಲವಂದಿ, ಮಾನ್ವಿ ಪಾಶ, ಶ್ರೀನಿವಾಸ್ ಪಂಡಿತ್, ಪರಶುರಾಮ್ ಕೆರೇಹಳ್ಳಿ, ಶಿವಮೂರ್ತಿ ಗುತ್ತೂರ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು.ಶಾಸಕ ದೊಡ್ಡನಗೌಡ ಪಾಟೀಲ ಸಂತಾಪಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರ ಅಗಲಿಕೆಯಿಂದ ಭರಿಸಲಾಗದ ನಷ್ಟ ಉಂಟಾಗಿದೆ. ಅಗಲಿಕೆಯ ದು:ಖವನ್ನು ಸಹಿಸುವ ಶಕ್ತಿಯನ್ನು ಕುಟುಂಬಕ್ಕೆ ದೇವರು ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇನೆ. ಅವರ ಆತ್ಮಕ್ಕೆ ಶಾಂತಿ ಕೋರಿ ಶ್ರದ್ಧಾಂಜಲಿ ಸಲ್ಲಿಸುತ್ತೇನೆ. ಮನಮೋಹನ ಸಿಂಗ್ ಶ್ರೇಷ್ಠತೆ ಮತ್ತು ಕೊಡುಗೆಗಳು ಯಾವಾಗಲೂ ನಮ್ಮ ಮನಸ್ಸಿನಲ್ಲಿ ಶಾಶ್ವತವಾಗಿರುತ್ತವೆ. ಆರ್ಥಿಕ ತಜ್ಞರಾಗಿ, ಪ್ರಧಾನಮಂತ್ರಿಯಾಗಿ ರಾಷ್ಟ್ರಕ್ಕೆ ಅಮೂಲ್ಯ ಸೇವೆಯನ್ನು ಸಲ್ಲಿಸಿದ್ದಾರೆ.ಹಸನಸಾಬ ದೋಟಿಹಾಳ ಸಂತಾಪಮಾಜಿ ಪ್ರಧಾನಿ ಡಾ.ಮನಮೋಹನ ಸಿಂಗ್ ಅವರ ಅಗಲಿಕೆಯ ನೋವು ದೇಶಕ್ಕೆ ತುಂಬಲಾರದ ನಷ್ಟವಾಗಿದೆ. ಅವರು ರೂಪಿಸಿದ ಅನೇಕ ಯೋಜನೆಗಳು ದೇಶದ ಆರ್ಥಿಕತೆಗೆ ಅನುಕೂಲಕರವಾಗಿದ್ದು, ಜಾಗತೀಕರಣದಲ್ಲಿ ಅವರ ಶಕ್ತಿ ಅಜರಾಮರವಾಗಿದೆ. ಅವರು ಅಗಲಿರುವುದು ದುಃಖದ ಸಂಗತಿಯಾಗಿದೆ. ದೇಶಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅಗಲಿಕೆ ಶಕ್ತಿಯನ್ನು ಕುಟುಂಬಕ್ಕೆ ದಯಪಾಲಿಸಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.ಅಮರೇಗೌಡ ಬಯ್ಯಾಪೂರ ಸಂತಾಪ
ಬಡತನದಲ್ಲಿ ಹುಟ್ಟಿ, ಚಿಕ್ಕವಯಸ್ಸಿನಲ್ಲಿ ತಾಯಿಯನ್ನು ಕಳೆದುಕೊಂಡು ಅಜ್ಜಿಯ ಆಶ್ರಯದಲ್ಲಿ ದೀಪದ ಕೆಳಗೆ ಓದಿ ಪ್ರಧಾನಿಯಾದ ಧೀಮಂತ ನಾಯಕ ಡಾ. ಮನಮೋಹನಸಿಂಗ್ ಅವರು ಇಂದು ನಮ್ಮನ್ನು ಅಗಲಿರುವುದು ತುಂಬಲಾರದ ನಷ್ಟ ಉಂಟಾಗಿದೆ. ಮಹಾಮೌನಿಯಾದ ಅವರು ದೇಶದ ಪ್ರಧಾನಿಯಾಗಿ 10 ವರ್ಷಗಳ ಅಮೋಘ ಸೇವೆ ಸಲ್ಲಿಸಿದ್ದಾರೆ. ಜಾಗತೀಕರಣಕ್ಕೆ ದೇಶವನ್ನೇ ಸಜ್ಜುಗೊಳಿಸಿ ಭಾರತದ ಅರ್ಥ ವ್ಯವಸ್ಥೆಯ ದಿಕ್ಕನ್ನೇ ಬದಲಿಸಿದ ಧೀಮಂತ ನಾಯಕ. ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ, ಆಧಾರ್ ಕಾರ್ಡ್ ರೂವಾರಿ, ಪೋಲೀಯೊ ಮುಕ್ತ ಭಾರತ, ಚಂದ್ರಯಾನ, ಮಂಗಳಯಾನ ಅನ್ವೇಷಣೆ ಹಾಗೂ ಮುಂತಾದ ಯೋಜನೆಗಳ ರೂವಾರಿಯಾಗಿದ್ದರು. ಅವರ ಅಗಲಿಕೆಯ ನೋವು ತಡೆದುಕೊಳ್ಳುವ ಶಕ್ತಿಯನ್ನು ಕುಟುಂಬಕ್ಕೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ.