ಸಾರಾಂಶ
- ಬೀರೂರು ಪುರಸಭೆ ವ್ಯಾಪ್ತಿಯ ರಾಜಾಜಿನಗರದಲ್ಲಿ ಮೂಲಸೌಕರ್ಯ ಕೊರತೆ
ಕನ್ನಡಪ್ರಭ ವಾರ್ತೆ, ಬೀರೂರುಬೀರೂರು ಪಟ್ಟಣದ ‘ರಾಜಾಜಿನಗರ ಬಡಾವಣೆ’ ಅಸ್ತಿತ್ವಕ್ಕೆ ಬಂದು 4 ದಶಕ ಕಳೆದರೂ ಮೂಲ ಸೌಕರ್ಯ ಗಳ ಕೊರತೆಯಿಂದ ನಲುಗುವುದು ತಪ್ಪಿಲ್ಲ. ಬಡಾವಣೆ ಹಲವು ರಸ್ತೆಗಳು ಈವರೆಗೆ ಡಾಂಬರು ಮುಖ ನೋಡಿಲ್ಲ. ಹೆಚ್ಚಿನ ಮನೆಗಳ ಮುಂದೆ ಚರಂಡಿ ಇಲ್ಲ. ಪುರಸಭಾ ಸದಸ್ಯರು ಇತ್ತ ತಲೆ ಹಾಕುವುದಿಲ್ಲ. ಹೀಗೆ ಸಮಸ್ಯೆಗಳ ಮೆರವಣಿಗೆಯೇ ಇಲ್ಲಿ ನಡೆದಿದೆ.ಮೊದಲು ಆಶ್ರಯ ಬಡಾವಣೆಯಾಗಿದ್ದ ಇದು ಕ್ರಮೇಣ ಖಾಸಗಿ ಬಡಾವಣೆಯಾಗಿ ಮಾರ್ಪಟ್ಟಿದೆ. ರೈಲ್ವೆ ನಿಲ್ದಾಣ, ಬಿಇಒ ಕಚೇರಿ, ಬಸ್ ನಿಲ್ದಾಣ ಮೊದಲಾದವು ಸಮೀಪದಲ್ಲಿವೆ. ಆದ್ದರಿಂದ ಅನೇಕ ಜನ ಇಲ್ಲಿ ಮನೆ ಕಟ್ಟಿಕೊಂಡು ವಾಸವಿದ್ದಾರೆ. ಅಂದಾಜು 300 ಮನೆಗಳಿದ್ದು, 700 ಮಂದಿ ವಾಸಿಸುದ್ದಾರೆ. ನಿತ್ಯ ವಿವಿಧ ಕಚೇರಿಗೆ, ಶಾಲೆಗೆ, ಖಾಸಗಿ ಕೆಲಸಗಳಿಗೆ ತೆರಳುವವರು, ನಿವೃತ್ತರು ಇಲ್ಲಿದ್ದು, ರಸ್ತೆ, ಚರಂಡಿ, ಬೀದಿದೀಪ ಮೊದಲಾದ ವ್ಯವಸ್ಥೆ ಕೋರಿ ಪುರಸಭೆಗೆ ಮನವಿ ಕೊಟ್ಟು ಬೇಸತ್ತಿದ್ದಾರೆ.ಬಡಾವಣೆ ಮುಖ್ಯರಸ್ತೆ, ಒಳಭಾಗದ ಅಲ್ಲಲ್ಲಿ ಕೆಲ ಚಿಕ್ಕ ರಸ್ತೆಗಳು ಡಾಂಬರು, ಕಾಂಕ್ರಿಟ್ ಕಂಡಿದ್ದರೆ, ಇನ್ನು 2-3 ಮುಖ್ಯ ಒಳರಸ್ತೆಗಳು ಬಡಾವಣೆ ಅಸ್ತಿತ್ವಕ್ಕೆ ಬಂದಾಗ ಹೇಗಿದ್ದವೋ ಹಾಗೆಯೇ ಇವೆ. ಕೆಲ ಮನೆಗಳ ಅಕ್ಕಪಕ್ಕದಲ್ಲೂ ಚರಂಡಿ ಸುಳಿವಿಲ್ಲ. ಸಾಕಷ್ಟು ಕಡೆ ಮನೆಗಳು ರಸ್ತೆಯ ಪಕ್ಕಕ್ಕೆ ನಿರ್ಮಾಣವಾಗಿರುವುದು ರಸ್ತೆಗಳು ಕಿರಿದಾಗಲು ಕಾರಣವಾಗಿದೆ. ಬಹಳಷ್ಟು ಮನೆಗಳ ಮುಂದೆ ಬೈಕ್ ನಂತಹ ವಾಹನಗಳು ಇದ್ದರೆ ಇನ್ನೊಂದು ವಾಹನ ಸಂಚರಿಸಲೂ ದುಸ್ತರವಾಗುತ್ತಿದೆ ಎನ್ನುತ್ತಾರೆ ನಿವಾಸಿಗಳು.ಬಡಾವಣೆಯಲ್ಲಿ ಒಳಚರಂಡಿ ವ್ಯವಸ್ಥೆ ಇದ್ದರೂ ಕೊಳಚೆ ನೀರು ಸರಿಯಾಗಿ ಹರಿದು ಟ್ರೀಟ್ಮೆಂಟ್ ಪ್ಲಾಂಟ್ ತಲುಪಲು ವ್ಯವಸ್ಥೆ ಇಲ್ಲದ ಕಾರಣ ಅಲ್ಲೇ ಇರುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಹಾಸ್ಟೆಲ್ ಮುಂದೆಯೇ ತುಂಬಿ ಹರಿಯುವ ಸ್ಥಿತಿ ನಿರ್ಮಾಣವಾಗಿದೆ. ‘ಬಡಾವಣೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಿಲ್ಲ. ಆದರೆ, ರಸ್ತೆ ಮತ್ತು ಚರಂಡಿ ಕೊರತೆ ಇದ್ದು ಪುರಸಭೆ ಯಲ್ಲಿ ಅಧಿಕಾರಿಗಳನ್ನು ಪ್ರಶ್ನಿಸಿದರೆ ಅನುದಾನ ಇಲ್ಲ. ವಾರ್ಡ್ ಪ್ರತಿನಿಧಿ ಕೋರಿಕೆ ಮೇಲೆ ಕೆಲಸಗಳು ನಡೆ ಯುತ್ತವೆ. ಚರಂಡಿ ಸ್ವಚ್ಛತೆಗೆ ಕ್ರಮ ವಹಿಸುತ್ತೇವೆ. ಮುಂದಿನ ದಿನಗಳಲ್ಲಿ ರಸ್ತೆ ನಿರ್ಮಿಸುತ್ತೇವೆ ಎಂದು ಹೇಳುತ್ತಾರೆ. ಇಲ್ಲಿ ಉತ್ತಮ ರಸ್ತೆ, ಚರಂಡಿ ನಿರ್ಮಿಸಿದರೆ ಅನುಕೂಲವಾಗುತ್ತದೆ’ ಎನ್ನುತ್ತಾರೆ ಸ್ಥಳೀಯ ನಿವಾಸಿ ರವಿ. -- ಬಾಕ್ಸ್--
ಅಭಿವೃದ್ಧಿಗೆ ಕ್ರಮ ವಹಿಸಲಿ: ನಗರೋತ್ಥಾನ ಯೋಜನೆಯಲ್ಲಿ ಪಟ್ಟಣದ ಹಲವು ರಸ್ತೆಗಳನ್ನು ನಿರ್ಮಿಸಲಾಗಿತ್ತು. ಇಲ್ಲಿನ ಸದಸ್ಯರು ಮತ್ತು ಅಧಿಕಾರಿಗಳು ಸ್ವಲ್ಪ ಕ್ರಮ ವಹಿಸಿದ್ದರೂ ಇಲ್ಲಿಯೂ ಅಭಿವೃದ್ಧಿ ಕಾರ್ಯಗಳನ್ನು ಮಾಡಬಹುದಿತ್ತು. ಆದರೆ, ಎಲ್ಲರೂ ನಿರ್ಲಕ್ಷ್ಯ ತೋರುತ್ತಾರೆ. ಮಕ್ಕಳು, ವೃದ್ಧರ ಪರಿಸ್ಥಿತಿ ಗಮನಿಸಿದರೆ ಬೇಸರವಾಗುತ್ತದೆ. ಬಡಾವಣೆಯ ಅಭಿವೃದ್ಧಿಗೆ ಪುರಸಭೆ ಕ್ರಮ ವಹಿಸಲು ಮುಂದಾಗಬೇಕು’ ಎನ್ನುತ್ತಾರೆ ವೆಂಕಟೇಶ್24 ಬೀರೂರು 3ಬೀರೂರು ಪಟ್ಟಣದ ರಾಜಾಜಿನಗರ ಬಡಾವಣೆಯ ರಸ್ತೆ ದುಃಸ್ಥಿತಿ;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))