ರಾಷ್ಟ್ರೀಯ ಮಟ್ಟದ ಇನ್ಪೈರ್ ಮಾನಕ್ ಅವಾರ್ಡ್ಸ್ ಸ್ಪರ್ಧೆಗೆ ದೇಚಮ್ಮ ಆಯ್ಕೆ

| Published : Sep 15 2024, 01:54 AM IST

ರಾಷ್ಟ್ರೀಯ ಮಟ್ಟದ ಇನ್ಪೈರ್ ಮಾನಕ್ ಅವಾರ್ಡ್ಸ್ ಸ್ಪರ್ಧೆಗೆ ದೇಚಮ್ಮ ಆಯ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ವಿದ್ಯಾರ್ಥಿನಿ ದೇಚಮ್ಮ ಮಂಡಿಸಿದ ಈ ಪರಿಕಲ್ಪನೆಯ ಸಾಧನವು ನೀರಿನ ತೊಟ್ಟಿಗಳನ್ನು ಸಚ್ಛಗೊಳಿಸುವ ಕಾರ್ಯವನ್ನು ಸರಳಗೊಳಿಸುವ ಗುರಿಯನ್ನು ಹೊಂದಿದೆ.

ಮಡಿಕೇರಿ : ಕೊಡಗು ವಿದ್ಯಾಲಯ ಶಾಲೆಯಲ್ಲಿ 2022- 23ರ ಸಾಲಿನಲ್ಲಿ 10ನೇ ತರಗತಿ ಓದುತ್ತಿದ್ದ ದೇಚಮ್ಮ ಎಂ. ಎಸ್. ಅವರು ವಿಜ್ಞಾನ ಶಿಕ್ಷಕಿ ಪೊನ್ನಮ್ಮ ಪಿ. ಎಸ್. ಅವರ ಮಾರ್ಗದರ್ಶನದಲ್ಲಿ ಮಂಡಿಸಿದ್ದ ಓವರ್ ಹೆಡ್ ಟ್ಯಾಂಕ್ ಕ್ಲಿನರ್ ಪರಿಕಲ್ಪನೆಯು ರಾಷ್ಟ್ರೀಯ ಮಟ್ಟದ ಇನ್ಪೆರ್ ಮಾನಕ್ ಅವಾರ್ಡ್ ಸ್ಪರ್ಧೆಗೆ ಆಯ್ಕೆಯಾಗಿದೆ.

ವಿದ್ಯಾರ್ಥಿನಿ ದೇಚಮ್ಮ ಮಂಡಿಸಿದ ಈ ಪರಿಕಲ್ಪನೆಯ ಸಾಧನವು ನೀರಿನ ತೊಟ್ಟಿಗಳನ್ನು ಸ್ವಚ್ಛಗೊಳಿಸುವ ಕಾರ್ಯವನ್ನು ಸರಳಗೊಳಿಸುವ ಗುರಿಯನ್ನು ಹೊಂದಿದೆ. ದೈನಂದಿನ ಜೀವನದಲ್ಲಿ ಸೃಜನ ಶೀಲ ಸಮಸ್ಯೆ ಪರಿಹರಿಸುವ ಸಾಮರ್ಥ್ಯವನ್ನು ಕೂಡ ಇದು ಹೊಂದಿದೆ.

ದೇಚಮ್ಮ ಅವರು ಪ್ರಸ್ತುತ ನಳಂದ ಗುರುಕುಲ ಕಾಲೇಜಿನಲ್ಲಿ ದ್ವೀತಿಯ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ತನ್ನ, ಪರಿಕಲ್ಪನೆಯು ಯಶಸ್ಸು ಗಳಿಸಲು ಬೆನ್ನೆಲುಬಾಗಿ ಸಹಕರಿಸಿದ ಮಾರ್ಗದರ್ಶಕರು, ಕೊಡಗು ವಿದ್ಯಾಲಯ ಶಾಲೆಯ ಪ್ರಾಂಶುಪಾಲರು, ಸಿಬ್ಬಂದಿ ವರ್ಗದವರು, ಕುಟುಂಬದವರು ಹಾಗೂ ಗೆಳೆಯರ ಸಹಾಯವನ್ನು ದೇಚಮ್ಮ ಸ್ಮರಿಕೊಳ್ಳುತ್ತಾರೆ.

ಈಕೆ ಅರ್ಪಟ್ಟು ಮುಕ್ಕಾಟ್ಟಿರ ಪಿ ಸುಬ್ರಮಣಿ ಮತ್ತು ಅಂಜು ಸುಬ್ರಮಣಿ (ತಾಮನೆ ಅಮ್ಮಂಡ )ಇವರ ಮಗಳಾಗಿದ್ದು, ಜಪಾನಿನ ನಿಡೆಕ್ ನಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕಾರ್ಯನಿವಹಿಸುತ್ತಿರುವ ಲಿಸಾ ಬೋಜಮ್ಮಳ ಸಹೋದರಿಯಾಗಿದ್ದಾಳೆ.

ಈಕೆ ದಿನಾಂಕ ಸೆ. 17 ಮತ್ತು 18ರಂದು ನವದೆಹಲಿಯ ಪ್ರಗತಿ ಮೈದಾನದಲ್ಲಿ ನಡೆಯುವ 11ನೇ ರಾಷ್ಟ್ರ ಮಟ್ಟದ ಪ್ರದರ್ಶನ ಮತ್ತು ಯೋಜನಾ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾಳೆ.