ಅ.3ಕ್ಕೆ ಒಳ ಮೀಸಲಾತಿ ಜಾರಿಗಾಗಿ ಜಿಲ್ಲಾ ಬಂದ್‌ಗೆ ನಿರ್ಧಾರ

| Published : Sep 30 2024, 01:29 AM IST

ಅ.3ಕ್ಕೆ ಒಳ ಮೀಸಲಾತಿ ಜಾರಿಗಾಗಿ ಜಿಲ್ಲಾ ಬಂದ್‌ಗೆ ನಿರ್ಧಾರ
Share this Article
  • FB
  • TW
  • Linkdin
  • Email

ಸಾರಾಂಶ

Decision for district bandh for implementation of internal reservation for A.3

-ಒಳ ಮೀಸಲಾತಿ ಹೋರಾಟ ಸಮಿತಿ ಮುಖಂಡ ಜಿ.ಬಿ.ರಾಜು ಮಾಹಿತಿ

-------ಕನ್ನಡಪ್ರಭ ವಾರ್ತೆ ದೇವದುರ್ಗ: ರಾಜ್ಯ ಸರ್ಕಾರ ಸುಪ್ರೀಂಕೋರ್ಟ್‌ ತೀರ್ಪಿನಂತೆ ಒಳ ಮೀಸಲಾತಿ ಜಾರಿಗೆ ವಿಳಂಬ ಧೋರಣೆ ಮಾಡುತ್ತಿರುವದನ್ನು ಖಂಡಿಸಿ, ಜಿಲ್ಲೆಯಾದ್ಯಂತ ಅ.3ರಂದು ಜಿಲ್ಲಾ ಬಂದ್ ಗೆ ಕರೆ ನೀಡಲಾಗಿದೆ ಎಂದು ಒಳ ಮೀಸಲಾತಿ ಹೋರಾಟ ಸಮಿತಿ ಮುಖಂಡ ಜಿ.ಬಿ.ರಾಜು ತಿಳಿಸಿದರು.

ಪಟ್ಟಣದ ಜಗಜೀವನರಾಮ್ ಭವನದಲ್ಲಿ ಜರುಗಿದ ಕಾರ್ಯಕ್ರಮದ ಪೂರ್ವ ಸಿದ್ಧತಾ ಸಭೆಯಲ್ಲಿ ಮಾತನಾಡಿದರು. ರಾಜ್ಯದಲ್ಲಿ ಪ.ಜಾತಿ ಸಮುದಾಯದಲ್ಲಿ ಮಾದಿಗ ಸಮುದಾಯಕ್ಕೆ ನಿರಂತರ ಅನ್ಯಾಯವಾಗುತ್ತಲೇ ಬಂದಿದೆ. ಅನೇಕ ವರದಿಗಳು ಶಿಫಾರಸ್ಸು ಮಾಡಿವೆ. ಅನೇಕ ಅಧ್ಯಯನ ವರದಿಗಳು ಮಂಡನೆಯಾಗಿವೆ. ಇದುವರೆಗಿನ ಸರ್ಕಾರಗಳು ಕೇವಲ ಭರವಸೆ ನೀಡುತ್ತಾ, ಕಾಲಹರಣ ಮಾಡುತ್ತಿವೆ.

ಕೊನೆಗೆ ಸುಪ್ರೀಂಕೋರ್ಟ್ ತೀರ್ಪು ನೀಡಿದಾಗ್ಯೂ ರಾಜ್ಯ ಸರ್ಕಾರ ರಾಜಕಾರಣದ ದ್ವಂದ ನೀತಿಯಿಂದ ವಿಳಂಬ ಮಾಡುತ್ತಿದ್ದು, ಅರ್ಹ ಫಲಾನುಭವಿಗಳಿಗೆ ಮೀಸಲಾತಿಯಲ್ಲಿ ಅನ್ಯಾಯವಾಗುತ್ತಿದೆ.

ಸರ್ಕಾರದ ನೀತಿಯನ್ನು ಖಂಡಿಸಿ ಹೋರಾಟ ಅನಿವಾರ್ಯವಾಗಿದೆ. ಕಾರಣ ಜಿಲ್ಲೆಯ ಎಲ್ಲಾ ತಾಲೂಕಿನ ಮಾದಿಗ ಸಮುದಾಯದವರು ಹೋರಾಟದಲ್ಲಿ ಪಾಲ್ಗೊಂಡು ಬಂದ್ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದರು.

ಮುಖಂಡರಾದ ಬಾಲಸ್ವಾಮಿ ಕೊಡ್ಲಿ, ಅಂಬಣ್ಣ ಅರೋಲಿ, ಅಮರೇಶ ಬಲ್ಲಿದವ, ಶಿವರಾಜ ಅಕ್ಕರಕಿ ಮಾತನಾಡಿದರು. ಈ ಸಂದರ್ಭದಲ್ಲಿ ಮುಖಂಡರಾದ ಹನುಮಂತ ಮನ್ನಾಪೂರಿ, ಭೂತಪ್ಪ ದೇವರಮನಿ ಹಾಗೂ ಇದ್ದರು.------