ಪ್ರಭುರಾಜೇಂದ್ರ ಶ್ರೀ ಜನ್ಮಶತಮಾನೋತ್ಸವ ಅದ್ಧೂರಿಗೆ ನಿರ್ಧಾರ

| Published : Dec 04 2024, 12:33 AM IST

ಪ್ರಭುರಾಜೇಂದ್ರ ಶ್ರೀ ಜನ್ಮಶತಮಾನೋತ್ಸವ ಅದ್ಧೂರಿಗೆ ನಿರ್ಧಾರ
Share this Article
  • FB
  • TW
  • Linkdin
  • Email

ಸಾರಾಂಶ

ಈ ಭಾಗದ ಶಿಕ್ಷಣಪ್ರೇಮಿ, ಮಾನವತಾವಾದಿ ಲಿಂಗೈಕ್ಯ ರಾಜಗುರು ಪ್ರಭುರಾಜೇಂದ್ರ ಶ್ರೀಗಳ ಜನ್ಮ ಶತಮಾನೋತ್ಸವ ಹಾಗೂ ವಿವಿಧ ಕಾರ್ಯಕ್ರಮಗಳನ್ನು ಅರ್ಥಪೂರ್ಣ ಹಾಗೂ ಅದ್ಧೂರಿಯಾಗಿ ಆಚರಿಸಲು ಮಠಾಧೀಶರು ಹಾಗೂ ಭಕ್ತರು ಕಂಕಣ ಬದ್ಧರಾಗಿದ್ದೇವೆ ಎಂದು ಉಪ್ಪಿನಬೆಟಗೇರಿ ಕುಮಾರ ವಿರೂಪಾಕ್ಷಶ್ರೀಗಳು ಹೇಳಿದರು.

ಕನ್ನಡಪ್ರಭ ವಾರ್ತೆ ಅಮೀನಗಡ

ಈ ಭಾಗದ ಶಿಕ್ಷಣಪ್ರೇಮಿ, ಮಾನವತಾವಾದಿ ಲಿಂಗೈಕ್ಯ ರಾಜಗುರು ಪ್ರಭುರಾಜೇಂದ್ರ ಶ್ರೀಗಳ ಜನ್ಮ ಶತಮಾನೋತ್ಸವ ಹಾಗೂ ವಿವಿಧ ಕಾರ್ಯಕ್ರಮಗಳನ್ನು ಅರ್ಥಪೂರ್ಣ ಹಾಗೂ ಅದ್ಧೂರಿಯಾಗಿ ಆಚರಿಸಲು ಮಠಾಧೀಶರು ಹಾಗೂ ಭಕ್ತರು ಕಂಕಣ ಬದ್ಧರಾಗಿದ್ದೇವೆ ಎಂದು ಉಪ್ಪಿನಬೆಟಗೇರಿ ಕುಮಾರ ವಿರೂಪಾಕ್ಷಶ್ರೀಗಳು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ಪೂರ್ವದಲ್ಲೇ ಶ್ರೀಪ್ರಭುಶಂಕರೇಶ್ವರ ಗಚ್ಚಿನಮಠದ ಲಿಂಗೈಕ್ಯ ರಾಜಗುರು ಪ್ರಭುರಾಜೇಂದ್ರಶ್ರೀಗಳು ಸಂಗಮೇಶ್ವರ ವಿಧ್ಯಾವರ್ಧಕ ಸಂಘ ಸ್ಥಾಪಿಸಿ ಲಕ್ಷಗಟ್ಟಲೆ ವಿಧ್ಯಾರ್ಥಿಗಳಿಗೆ ವಿದ್ಯಾದಾನ, ನೂರಾರು ಕುಟುಂಬಗಳಿಗೆ ಉದ್ಯೋಗ ನೀಡಿದ್ದಾರೆ. ಆ ಸಂಸ್ಥೆಗೆ 75 ವರ್ಷ ಗತಿಸಿವೆ. ಇದರೊಂದಿಗೆ ಈಗಿನ ಪೀಠಾಧಿಪತಿಗಳಾದ ಶಂಕರರಾಜೇಂದ್ರ ಶ್ರೀಗಳ ಪೀಠಾರೋಹಣದ ರಜತ ಮಹೋತ್ಸವ, ಅವರ ಜನ್ಮ ಸುವರ್ಣ ಮಹೋತ್ಸವ, ಶ್ರೀ ಪ್ರಭುಶಂಕರೇಶ್ವರ ಅನುಭವ ಮಂಟಪದ ಲೋಕಾರ್ಪಣೆ, ಸಂಗಮೇಶ್ವರ ವಿಧ್ಯಾವರ್ಧಕ ಸಂಘದ ಅಮೃತ ಮಹೋತ್ಸವ, ನೌಕರರ ಪತ್ತಿನ ಸಹಕಾರಿ ಸಂಘದ ಸುವರ್ಣ ಮಹೋತ್ಸವ, ಪ್ರಭು ಕಾರಣ್ಯ ಪ್ರಶಸ್ತಿ ಪ್ರಧಾನದೊಂದಿಗೆ, 21 ದಿನಗಳ ಬಸವ ಪುರಾಣ ಜರುಗಲಿದೆ. ಇಂಥಹ ಬಹುದೊಡ್ಡ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸಲೆಂಬ ಉದ್ದೇಶದಿಂದ, ಸುತ್ತಮುತ್ತಲ ಪ್ರತಿ ಪ್ರತಿ ಗ್ರಾಮಗಳಿಗೂ ತೆರಳಿ, ಆಯಾ ಗ್ರಾಮದ ಸರ್ವಸಮಾಜದ ಮುಖಂಡರಿಗೂ ಆಹ್ವಾನ ನೀಡಲಾಗುವುದು. ಅಕ್ಕನ ಬಳಗದಿಂದ ಪಟ್ಟಣದ ಮನೆಮನೆಗೂ ತೆರಳಿ ಮಹಿಳೆಯರಿಗೆ ಅರಿಸಿನಕುಂಕುಮ ನೀಡಿ ಆಹ್ವಾನಿಸಲಾಗುವುದು ಎಂದರು.ಶಂಕರರಾಜೇಂದ್ರಶ್ರೀಗಳು ಮಾತನಾಡಿ, ಸುತ್ತೂರು ಶ್ರೀಗಳಾದಿಯಾಗಿ ನಾಡಿನ ವಿವಿಧ ಮಠಾಧೀಶರು, ಸರ್ವಪಕ್ಷಗಳ ಧುರೀಣರು, ಸಮಾಜ ಮುಖಂಡರು ಆಗಮಿಸಲಿದ್ದು, ಕಾರ್ಯಕ್ರಮದ ಯಶಸ್ಸಿಗೆ ವಿವಿಧ ಸಮಿತಿಗಳ ರಚನೆ, ಆಯಾ ಕಟ್ಟಿನಲ್ಲಿ ಸ್ವಾಗತ ಕಮಾನುಗಳು ಮುಂತಾದ ಕಾರ್ಯಕ್ರಮದ ಯಶಸ್ಸಿನ ರೂಪುರೇಶೆ ಮಾಡಲಾಗುವುದು ಎಂದರು. ಪತ್ರಿಕಾಗೋಷ್ಠಿಯಲ್ಲಿ ಮುನವಳ್ಳಿಯ ಮುರುಘೇಂಧ್ರ ಸ್ವಾಮೀಜಿ,ಖೇಢಗಿ ಶಿವಬಸವರಾಜೇಂದ್ರ ಸ್ವಾಮೀಜಿ, ಕಮತಗಿ ಹುಚ್ಚೇಶ್ವರ ಸ್ವಾಮೀಜಿ, ಘಟಪ್ರಭಾದ ಮಲ್ಲಿಕಾರ್ಜುನ ಸ್ವಾಮೀಜಿ ಹಾಗೂ ಸಂಗಮೇಶ್ವರ ಪಪೂ ಕಾಲೇಜಿನ ಉಪ ಪ್ರಾಚಾರ್ಯ ಆರ್.ಜಿ.ಸನ್ನಿ ಇದ್ದರು.