ಹಳೇ ದೇಗುಲಗಳ ಜೀರ್ಣೋದ್ಧಾರಕ್ಕೆ ತೀರ್ಮಾನ: ಶಾಸಕ ಎ. ಮಂಜು

| Published : Jul 14 2024, 01:39 AM IST

ಹಳೇ ದೇಗುಲಗಳ ಜೀರ್ಣೋದ್ಧಾರಕ್ಕೆ ತೀರ್ಮಾನ: ಶಾಸಕ ಎ. ಮಂಜು
Share this Article
  • FB
  • TW
  • Linkdin
  • Email

ಸಾರಾಂಶ

ಎರಡೂ ದಿನಗಳ ಹಿಂದೆ ಸಾರಿಗೆ, ಮುಜರಾಯಿ ಇಲಾಖೆ ಸಚಿವರನ್ನು ಭೇಟಿ ಮಾಡಿ 50 ಲಕ್ಷ ರು. ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದೇನೆ. ಕೇರಳಾಪುರ ಮತ್ತು ಹಳ್ಳಿ ಮೈಸೂರು ಬಸ್ ನಿಲ್ದಾಣ ಆಧುನೀಕರಣ ಮತ್ತು ಪಟ್ಟಣದ ಹಳೇ ಬಸ್ ನಿಲ್ದಾಣ ಕಸವನ್ನು ಡಂಪ್ ಮಾಡುವ ಸ್ಥಳವಾಗಿ ಮಾರ್ಪಡಾಗಿದ್ದು, ಇದನ್ನು ಆಧುನಿಕವಾಗಿ ಹೊಸ ಕಾಂಪ್ಲೆಕ್ಸ್ ಮಾಡಲಾಗುವುದು.

ಕನ್ನಡಪ್ರಭ ವಾರ್ತೆ ಅರಕಲಗೂಡು

ಹೊಸ ದೇವಾಲಯ ನಿರ್ಮಾಣಕ್ಕೆ ಹಣ ನೀಡುವುದಕ್ಕಿಂತ ಆರ್ಥಿಕ ಕೊರತೆಯಿಂದ ಕುಂಟುತ್ತ ಸಾಗುತ್ತಿರುವ ದೇವಾಲಯವನ್ನು ಪೂರ್ಣಗೊಳಿಸಲು ಸಹಕಾರ ನೀಡಲು ಸಮಿತಿ ತೀರ್ಮಾನಿಸಿದೆ ಎಂದು ಶಾಸಕ ಎ. ಮಂಜು ತಿಳಿಸಿದರು.

ತಾಲೂಕು ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಆರಾಧನಾ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ದೇವಸ್ಥಾನ ಅಭಿವೃದ್ಧಿಗೆ ಅಗತ್ಯವಿರುವ ಅನುದಾನ ಬಿಡುಗಡೆಗೆ ಕ್ರಮಹಿಸುವಂತೆ ತಹಸೀಲ್ದಾರ್ ರವರಿಗೆ ಸೂಚನೆ ನೀಡಿದರು.

ಈ ಹಿಂದೆ ಯಾವ ದೇವಸ್ಥಾನಗಳಿಗೆ ಹಣ ನೀಡಿದ್ದೇವೆ, ಅದನ್ನು ಸರಿಯಾಗಿ ಉಪಯೋಗಿಸಿಕೊಂಡಿದ್ದಾರಾ ಎಂಬ ಕುರಿತು ವರದಿ ನೀಡುವಂತೆ ಇಂಜಿನಿಯರ್ ಗಳಿಗೆ ಸೂಚಿಸಿದರು.

ಆರಾಧನಾ ಸಮಿತಿಗೆ 2024-25ರಲ್ಲಿ ಸಾಮಾನ್ಯ ಗೆ 2,23,200 ರು., ಪರಿಶಿಷ್ಟ ಜಾತಿಗೆ 4,54,923 ರು., ಗಿರಿಜನ ಉಪಯೋಗಕ್ಕೆ 3,71,713 ರು. ಹಣವನ್ನು ಸರ್ಕಾರ ಬಿಡುಗಡೆ ಮಾಡಿದೆ. ಈಗಾಗಲೇ ಹಲವು ಅರ್ಜಿಗಳು ಬಂದಿವೆ. ಕಳೆದ ಬಾರಿ ಮುಜರಾಯಿ ಸಚಿವ ರಾಮಲಿಂಗರೆಡ್ಡಿ ಅವರ ಬಳಿ 50 ಲಕ್ಷ ರು. ಅನುದಾನ ಕೇಳಿದ್ದೆ. ಆದರೆ, ಆಯ್ದ ದೇವಾಲಯಗಳಾದ ಕಬ್ಬಳಿಗೆರೆ, ತೇಜೂರು, ಉದ್ದೂರು ಹೊಸಹಳ್ಳಿ, ದುಮ್ಮಿ, ಬೀಜಘಟ್ಟದ ಆಂಜನೇಯ ಸ್ವಾಮಿ, ಕೊಣನೂರಿನ ಈಶ್ವರ ದೇವಾಲಯ, ಕಡವೀನಹೋಸಳ್ಳಿ ಬಸವೇಶ್ವರ ದೇವಾಲಯ, ಮಾರಕಮ್ಮ ದೇವಸ್ಥಾನ ಕಾರಹಳ್ಳಿ, ಬಸವೇಶ್ವರ ದೇವಸ್ಥಾನ ಬಾಣದಹಳ್ಳಿ ಸೇರಿದಂತೆ 10 ದೇವಸ್ಥಾನಕ್ಕೆ ತಲಾ 2.50ಲಕ್ಷ ರು. ನಂತೆ 25 ಲಕ್ಷ ರು. ಸರ್ಕಾರ ನೀಡಿದೆ ಎಂದರು.

ಎರಡೂ ದಿನಗಳ ಹಿಂದೆ ಸಾರಿಗೆ, ಮುಜರಾಯಿ ಇಲಾಖೆ ಸಚಿವರನ್ನು ಭೇಟಿ ಮಾಡಿ 50 ಲಕ್ಷ ರು. ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದೇನೆ. ಕೇರಳಾಪುರ ಮತ್ತು ಹಳ್ಳಿ ಮೈಸೂರು ಬಸ್ ನಿಲ್ದಾಣ ಆಧುನೀಕರಣ ಮತ್ತು ಪಟ್ಟಣದ ಹಳೇ ಬಸ್ ನಿಲ್ದಾಣ ಕಸವನ್ನು ಡಂಪ್ ಮಾಡುವ ಸ್ಥಳವಾಗಿ ಮಾರ್ಪಡಾಗಿದ್ದು, ಇದನ್ನು ಆಧುನಿಕವಾಗಿ ಹೊಸ ಕಾಂಪ್ಲೆಕ್ಸ್ ಮಾಡಲಾಗುವುದು ಎಂದರು.

ತಹಸೀಲ್ದಾರ್ ಬಸವರೆಡ್ಡಪ್ಪ ರೋಣದ, ಇಓ ಪ್ರಕಾಶ್, ಸದಸ್ಯರಾದ ಬೆಳವಾಡಿ ನೀಲಮ್ಮ, ಹೆಗ್ಗಡಹಳ್ಳಿ ಪ್ರದೀಪ್ ನಾಯಕ್ ಇದ್ದರು.