ಲಿಂಗಾಯತ ಸಮಾವೇಶದ ಯಶಸ್ಸಿಗೆ ನಿರ್ಧಾರ

| Published : May 25 2024, 12:47 AM IST

ಲಿಂಗಾಯತ ಸಮಾವೇಶದ ಯಶಸ್ಸಿಗೆ ನಿರ್ಧಾರ
Share this Article
  • FB
  • TW
  • Linkdin
  • Email

ಸಾರಾಂಶ

ಜೂನ್ ೧೬ರಂದು ಕೊಪ್ಪಳದಲ್ಲಿ ನಡೆಯಲಿರುವ ಲಿಂಗಾಯತ ಸಮಾವೇಶವನ್ನು ಯಶಸ್ವಿಗೊಳಿಸಲು ಸರ್ವಾನುಮತದಿಂದ ನಿರ್ಣಯಿಸಲಾಗಿದೆ. ಎಲ್ಲರೂ ಒಕ್ಕೊರಲಿನಿಂದ ತನು-ಮನ-ಧನದಿಂದ ಕಾರ್ಯಕ್ರಮ ಯಶಸ್ಸುಗೊಳಿಸಬೇಕು ಎಂದು ಕೋರಿದ್ದಾರೆ.

ಕೊಪ್ಪಳ: ಜೂನ್ ೧೬ರಂದು ಕೊಪ್ಪಳದಲ್ಲಿ ನಡೆಯಲಿರುವ ಲಿಂಗಾಯತ ಸಮಾವೇಶವನ್ನು ಯಶಸ್ವಿಗೊಳಿಸಲು ಸರ್ವಾನುಮತದಿಂದ ನಿರ್ಣಯಿಸಲಾಗಿದೆ.

ನಗರದ ತಾಲೂಕು ಕ್ರೀಡಾಂಗಣದ ವೇದಿಕೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಈ ಕುರಿತು ಮಹತ್ವ ತೀರ್ಮಾನಗಳನ್ನು ಕೈಗೊಳ್ಳಲಾಯಿತು.

ಸಮಾವೇಶದ ಯಶಸ್ಸಿಗೆ ಪ್ರತಿಯೊಬ್ಬರು ತಮ್ಮದೇ ಸಮಾವೇಶ ಎಂದು ಭಾವಿಸಿ, ದುಡಿಯಬೇಕಾಗಿದೆ. ಇದೊಂದು ಮಹತ್ವದ ಸಮಾವೇಶವಾಗಿದೆ ಮತ್ತು ಲಿಂಗಾಯತ ಸಮಾಜ ಎದುರಿಸುತ್ತಿರುವ ಪ್ರಸ್ತುತ ಸಮಸ್ಯೆಗಳ ಮೇಲೆಯೂ ಬೆಳಕು ಚಲ್ಲಿ, ಪರಿಹಾರ ಕಂಡುಕೊಳ್ಳುವ ಅಗತ್ಯವಿದ್ದು, ಇದನ್ನು ಮನವರಿಕೆ ಮಾಡಿ, ಸಮಾವೇಶದಲ್ಲಿ ಪ್ರತಿಯೊಬ್ಬರು ಭಾಗವಹಿಸುವಂತೆ ಮಾಡುವ ಅಗತ್ಯವಿದೆ ಎಂದು ಸೇರಿದವರು ಸಲಹೆ ನೀಡಿದರು.ಸಂಗಮೇಶ ಬಾದವಾಡಗಿ, ರುದ್ರಮುನಿ ಗಾಳಿ, ಸೋಮನಗೌಡ ಪಾಟೀಲ ಮತ್ತು ಇನ್ನಿತರ ಮುಖಂಡರು ಮಾತನಾಡಿ, ಲಿಂಗಾಯತ ಸಮಾವೇಶವನ್ನು ಅಚ್ಚುಕಟ್ಟಾಗಿ ಸಂಘಟಿಸುವಲ್ಲಿ ಕೊಪ್ಪಳದ ಎಲ್ಲ ಲಿಂಗಾಯತ ಸಮುದಾಯಗಳು ಶ್ರಮಿಸಬೇಕು ಎಂದು ಹೇಳಿದರು.

ಒಗ್ಗಟ್ಟು ಪ್ರದರ್ಶನ ಮಾಡುವ ಅಗತ್ಯವಿದೆ. ಲಿಂಗಾಯತ ಸಮಾಜವೂ ಇಂದು ಅನೇಕ ಸಮಸ್ಯೆ ಎದುರಿಸುತ್ತಿದೆ. ಸರ್ಕಾರದಿಂದ ದೊರೆಯಬಹುದಾದ ಸೌಲಭ್ಯಗಳು, ಶಿಕ್ಷಣ ಸೇರಿದಂತೆ ಮೊದಲಾದ ವಿಷಯಗಳಲ್ಲಿಯೂ ಆಗಬೇಕಾಗಿರುವ ಅಗತ್ಯದ ಕುರಿತು ಸಮಾವೇಶದಲ್ಲಿ ಚರ್ಚೆ ಮಾಡಲಾಗುತ್ತದೆ. ಹೀಗಾಗಿ, ಪ್ರತಿಯೊಬ್ಬರು ಇಂದಿನಿಂದ ಕಾರ್ಯವನ್ನು ಪ್ರಾರಂಭಿಸಿ ಎಂದರು.

ಇನ್ನೂ ಅನೇಕ ಸಭೆಗಳನ್ನು ನಡೆಸುವ ಮೂಲಕ ಎಲ್ಲರೂ ಒಕ್ಕೊರಲಿನಿಂದ ತನು-ಮನ-ಧನದಿಂದ ಕಾರ್ಯಕ್ರಮ ಯಶಸ್ಸುಗೊಳಿಸಬೇಕು ಎಂದು ಅಭಿಪ್ರಾಯಪಟ್ಟರು.

ಯಲ್ಲಪ್ಪ ಕಾಟ್ರಳ್ಳಿ, ನೀಲಕಂಠಯ್ಯ ಹಿರೇಮಠ, ವಿ.ಎಂ. ಭೂಸನೂರಮಠ, ವೀರಣ್ಣ ಸಂಕ್ಲಾಪುರ, ಮಲ್ಲಿಕಾರ್ಜುನ ಬಳ್ಳೊಳ್ಳಿ, ವಿಶ್ವನಾಥ ಬಳ್ಳೊಳ್ಳಿ, ಕಲ್ಲನಗೌಡರು, ದ್ಯಾಮಣ್ಣ ಮಾದಿನೂರು, ಗುಡಪ್ಪ ಹಡಪದ, ದಾನಪ್ಪ ಶೆಟ್ಟರ್, ಬಸವರಾಜ ಬಳ್ಳೊಳ್ಳಿ, ಸೋಮನಗೌಡ ಪಾಟೀಲ, ಆನಂದ ಅಳವಂಡಿ, ಬಸಣ್ಣ ಸಮಗಂಡಿ, ಮಹೇಶ ಮಿಟ್ಟಲಕೋಡ, ಭೂಮಕ್ಕನವರ, ಪ್ರಭಣ್ಣ ಹೆಬ್ಬಾಳ, ರೇವಣ್ಣ ಭೂತಣ್ಣನವರ, ಹಂಡೆವಜಿರ, ಹೇಮರೆಡ್ಡಿ ಬಿಸರಳ್ಳಿ, ಭೋಜಪ್ಪ ಕುಂಬಾರ, ಅಶೋಕ ಕುಂಬಾರ, ಸುರೇಶ ಕುಂಬಾರ, ಮಂಜುನಾಥ ಅಂಗಡಿ, ಗಾಳೆಪ್ಪ ಕಡೇಮನಿ, ಡಾ. ಸಂಗಮೇಶ ಕಲಹಾಳ ಹನುಮಂತಪ್ಪ ಚಲುವಾದಿ, ಬಸವರಾಜ ಕಮಲಾಪುರ, ಶೇಖರ್ ಎಸ್. ಇಂಗಳದಾಳ, ರಾಜೇಶ ಸಸಿಮಠ, ಮಂಜು ಬಣಗಾರ, ಕಾಶೆಪ್ಪ ಚಲುವಾದಿ ಸೇರಿದಂತೆ ವಿವಿಧ ಸಮಾಜಗಳ, ಸಂಘ-ಸಂಸ್ಥೆಗಳ ಮುಖಂಡರು ಭಾಗವಹಿಸಿದ್ದರು.