ಹಿಟ್ಟಿನಹಳ್ಳಿಯಲ್ಲಿ ನಡೆಯುವ ವಿಜಯಪುರ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅರ್ಥಪೂರ್ಣವಾಗಿ ಆಚರಿಸೋಣ. ಅಕ್ಷರ ಜಾತ್ರೆಯನ್ನು ಎಲ್ಲರೂ ಕೂಡಿಕೊಂಡಿ ಯಶಸ್ವಿಗೊಳಿಸೋಣ ಎಂದು ವಿಜಯಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಆನಂದ ಕುಲಕರ್ಣಿ ಅಭಿಪ್ರಾಯ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಹಿಟ್ಟಿನಹಳ್ಳಿಯಲ್ಲಿ ನಡೆಯುವ ವಿಜಯಪುರ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅರ್ಥಪೂರ್ಣವಾಗಿ ಆಚರಿಸೋಣ. ಅಕ್ಷರ ಜಾತ್ರೆಯನ್ನು ಎಲ್ಲರೂ ಕೂಡಿಕೊಂಡಿ ಯಶಸ್ವಿಗೊಳಿಸೋಣ ಎಂದು ವಿಜಯಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಆನಂದ ಕುಲಕರ್ಣಿ ಅಭಿಪ್ರಾಯ ವ್ಯಕ್ತಪಡಿಸಿದರು.

ಹಿಟ್ಟಿನಹಳ್ಳಿ ಗ್ರಾಮದ ಮಾರುತೇಶ್ವರ ದೇವಾಲಯದ ಸಭಾಭವನದಲ್ಲಿ ಇತ್ತೀಚೆಗೆ ನಡೆದ ದ್ವಿತೀಯ ಪೂರ್ವಭಾವಿ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಕನ್ನಡ ಸಾಹಿತ್ಯ, ಭಾಷೆ, ನೆಲ-ಜಲ ಕಾಪಾಡುವ ಕುರಿತು ಅನೇಕ ಉಪನ್ಯಾಸಗಳು ಜರುಗುತ್ತವೆ. ಗ್ರಾಮೀಣರೆ ಜಾನಪದ ಸಾಹಿತ್ಯ ಮಾಲೀಕರು. ಜಾನಪದ ಸಾಹಿತ್ಯ ಕುರಿತು ಉಪನ್ಯಾಸ ಇರುವುದರಿಂದ ಗ್ರಾಮೀಣ ಪ್ರದೇಶದ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಲಾಗುವುದು. ತಾಲೂಕ ಸಮ್ಮೇಳನ ಜಿಲ್ಲೆಗೆ ಮಾದರಿಯಾಗುವಂತೆ ಆಯೋಜನೆ ಮಾಡೋಣ. ಇದಕ್ಕೆ ತಮ್ಮಲ್ಲರ ಸಹಾಯ ಸಹಕಾರ ಅತ್ಯಗತ್ಯ ಎಂದರು.

ವಿಜಯಪುರ ಎಪಿಎಂಸಿ ಮಾಜಿ ಅಧ್ಯಕ್ಷ ಸಾಹೇಬಗೌಡ ಬಿರಾದಾರ ಮಾತನಾಡಿ, ಹಿಟ್ಟಿನಹಳ್ಳಿ ಗ್ರಾಮದಲ್ಲಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಹಮ್ಮಿಕೊಂಡಿದ್ದು ಅತ್ಯಂತ ಸಂತೋಷದ ವಿಷಯ. ತಾಲೂಕು ಎಲ್ಲ ಸಾಹಿತ್ಯ ಆಸಕ್ತಿ ಇರುವ ಎಲ್ಲರನ್ನೂ ಪರಿಗಣಿಸಿ ಅವರಿಗೆ ವೇದಿಕೆ ನೀಡೋಣ ಎಂದರು.

ಕಸಾಪ ವಿಜಯಪುರ ನಗರ ಘಟಕದ ಅಧ್ಯಕ್ಷ ಜಗದೀಶ ಬೋಳಸೂರ ಮುಖ್ಯ ಅತಿಥಿಗಳಾಗಿ ಮಾತನಾಡಿ, ಇಡೀ ದಿನ ಸಾಹಿತ್ಯ ವಾತಾವರಣ ಸೃಷ್ಟಿಸೋಣ. ಎಲ್ಲರಿಗೂ ಒಂದೆ ತರಹದ ಪ್ರಸಾದ ವ್ಯವಸ್ಥೆ ಕಲ್ಪಿಸೋಣ. ಹಿಟ್ಟಿನಹಳ್ಳಿ ಪ್ರೌಢ ಶಾಲೆ ಆವರಣ ಸಮ್ಮೇಳನಕ್ಕೆ ಸೂಕ್ತ ಸ್ಥಳವಾಗಿದೆ. ಸಾವಿರಾರು ಸಾಹಿತಿಗಳು ಸಮ್ಮೇಳನದಲ್ಲಿ ಭಾಗವಹಿಸುವುದರಿಂದ ಶಿಸ್ತು ಪಾಲನೆಗೆ ಹೆಚ್ಚು ಗಮನ ಹರಿಸೋಣ ಎಂದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಾಸಿಂಪೀರ ಮಾತನಾಡಿ, ವಾಲಿಕಾರ ಪುಸ್ತಕ ಮಳಿಗೆಗಳು ಈಗಾಗಲೇ ನೋಂದಣಿ ಮಾಡಿಕೊಂಡಿವೆ. ಅವರಿಗೆ ಉಚಿತವಾಗಿ ಮಳಿಗೆ ನೀಡುತ್ತೇವೆ. 500 ಜನ ತಾಯಂದಿರು ಕುಂಬ ಮೇಳದೊಂದಿಗೆ ಮೆರವಣಿಗೆಯಲ್ಲಿ ಪಾಲ್ಗೊಳ್ಳುತ್ತಿರುವುದರಿಂದ ಸಮ್ಮೇಳನಕ್ಕೆ ಮೆರುಗು ನೀಡುತ್ತದೆ ಎಂದರು. ಮಲ್ಲಪ್ಪ ಬಾವಿಕಟ್ಟಿ, ಆರ್.ಬಿ ಬಿರಾದಾರ, ಸಿದ್ದು ಬಿರಾದಾರ, ದುಂಡಪ್ಪ ಬಗಲಿ, ಶ್ರೀಕಾಂತ ಗೊಂಗಡಿ, ಚಂದ್ರಶೇಖರ ಮಲಘಾಣ, ಸಂಗನಗೌಡ ಬಿರಾದಾರ, ಸಿದ್ದಣ್ಣ ಹೊಸಳ್ಳಿ, ಗುರುಲಿಂಗಪ್ಪ ನಾಟಿಕಾರ ಮಾತನಾಡಿದರು.

ಶಿವನಗೌಡ ಬಿರಾದಾರ, ಶಂಕರಗೌಡ ಬಿರಾದಾರ, ಭೀಮನಗೌಡ ಬಿರಾದಾರ, ಮಹಮ್ಮದ ವಾಲೀಕಾರ, ಮಲ್ಲಿಕಾರ್ಜುನ ಕಂಬಾರ, ಅಶೋಕ ಕೂಬರಡ್ಡಿ, ಪ್ರಕಾಶ ಚಿಕ್ಕಲಕಿ, ರಾಚು ಬೊಳೆನ್ನವರ, ಹುಸೇನ ವಾಲಿಕಾರ, ಸುಭಾಷ ಯಂಭತ್ತನಾಳ, ಮುದಸ್ಸರ ವಾಲಿಕಾರ, ಮಹಾಂತೇಶ ಪಡನಾಡ, ಶ್ರೀಶೈಲ ಕೊಕಟನೂರ, ಅಪ್ಪು ನಾಟಿಕಾರ, ಸುರೇಶ ಚೌದ್ರಿ, ಶಿವಶಂಕರ ಯಾಳವಾರ, ಬಸವರಾಜ ಬೀಳೂರ, ರಖಮಾಜಿ ಪವಾರ, ಧರೆಪ್ಪ ಕೊಕಟನೂರ, ಅಶೋಕ ಸಾಲಿ ಶ್ರೀಶೈಲ ಗೆಣ್ಣೂರ ಮುಂತಾದವರು ಉಪಸ್ಥಿತರಿದ್ದರು.