ಸಾರಾಂಶ
ಹಿರೇಕೆರೂರು: ತಾಲೂಕಿನ ಹಂಸಭಾವಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡುಮಕ್ಕಳ ಶಾಲೆಯನ್ನು ಅಭಿವೃದ್ಧಿಪಡಿಸಲು ಗ್ರಾಮೀಣ ಅಭಿವೃದ್ಧಿ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದಿಂದ ದತ್ತು ಪಡೆಯಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿದ ಸಂಘದ ಅಧ್ಯಕ್ಷೆ ಹೂವಪ್ಪ ರಾಗಿಕೊಪ್ಪ ಅವರು, 2025- 26ನೇ ಸಾಲಿನಿಂದ ದತ್ತು ಪಡೆಯುವ ಮೂಲಕ ಗ್ರಾಮೀಣ ಭಾಗದ ಬಡಮಕ್ಕಳ ಶಿಕ್ಷಣ ಸುಧಾರಿಸುವ ನಿಟ್ಟಿನಲ್ಲಿ ಉಚಿತವಾಗಿ 1ರಿಂದ 7ನೇ ತರಗತಿವರೆಗೆ ಉಚಿತ ಶಿಕ್ಷಣ ನೀಡಲಾಗುತ್ತದೆ. ಆಂಗ್ಲ ಭಾಷೆ ಬೋಧನೆ ಇರಲಿದೆ. ಜತೆಗೆ ಎಲ್‌ಕೆಜಿ ಪ್ರಾರಂಭಿಸಲಾಗುವುದು.ಶಾಲೆಯ ಮಕ್ಕಳಿಗೆ ಕಲಿಕೆಯ ಅಭಿವವೃದ್ಧಿಗಾಗಿ ಮೂಲ ಸೌಕರ್ಯ ಒದಗಿಸಲಾಗುವುದು. ಸರ್ಕಾರದ ಜತೆಗೆ ದಾನಿಗಳು ಸಹ ಸರ್ಕಾರಿ ಶಾಲೆಗಳ ಉನ್ನತಿಗೆ ಕೈಜೋಡಿಸುವುದು ಅನಿವಾರ್ಯವಾಗಿದೆ ಎಂದರು.ಕ್ಷೇತ್ರ ಶಿಕ್ಷಣಾಧಿಕಾರಿ ಎನ್. ಶ್ರೀಧರ್ ಮಾತನಾಡಿ, ಮಕ್ಕಳಲ್ಲಿ ಕಲಿಕಾ ಸಾಮರ್ಥ್ಯ ಹೆಚ್ಚಿಸಿ ಶಿಕ್ಷಣದ ಗುಣಮಟ್ಟ ಕಾಪಾಡುವ ಉದ್ದೇಶದಿಂದ ಶಿಕ್ಷಕರು ವಿಶೇಷ ತರಗತಿಗಳನ್ನು ತೆಗೆದುಕೊಂಡು ಉತ್ತಮ ಫಲಿತಾಂಶಕ್ಕೆ ಶ್ರಮ ವಹಿಸಿಬೇಕು. ಸರ್ಕಾರವು ಬಹಳಷ್ಟು ಸೌಲಭ್ಯಗಳನ್ನು ಕೊಡುತ್ತದೆ. ಪೋಷಕರು ಮಕ್ಕಳ ಶೈಕ್ಷಣಿಕ ಬೆಳವಣಿಗೆ ಗಮನಿಸಿ ಉತ್ತಮ ಸಹಕಾರ ನೀಡಬೇಕು ಎಂದರು.ಈ ಸಂಧರ್ಭದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಪ್ರಭು ಗುಡಿಪೂಜಾರ್, ಸಂಘದ ಸದ್ಯಸರಾದ ಷಣ್ಮುಖ ಮಳೆಮಠ, ರಮೇಶ್ ಮಡಿವಾಳರ್, ಮೋಹನ್ ಗೌಡ ಪಾಟೀಲ, ಸುರೇಶ್ ತೆಂಬದ್, ಮುಖ್ಯ ಶಿಕ್ಷಕ ವಜ್ರಕಾಂತ್ ಬನ್ನಿಹಟ್ಟಿ, ಸರ್ಕಾರಿ ಹೆಣ್ಣುಮಕ್ಕಳ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಬಸವರಾಜ್ ಚಕ್ರಸಾಲಿ, ಎಂ.ಎಫ್. ಮುಗದೂರ ಇತರರು ಇದ್ದರು.ಗ್ರಾಮೀಣ ಮಹಿಳೆಯರ ಜೀವನ ಸುಧಾರಣೆಗೆ ನರೇಗಾ ಸಹಕಾರಿ
ರಟ್ಟೀಹಳ್ಳಿ: ಗ್ರಾಮೀಣ ಪ್ರದೇಶದ ಮಹಿಳೆಯರ ಜೀವನ ಸುಧಾರಣೆಗೆ ಮತ್ತು ಅವರ ಕುಟುಂಬಕ್ಕೆ ಆರ್ಥಿಕ ಶಕ್ತಿ ನೀಡಲು ನರೇಗಾ ಯೋಜನೆಯಡಿ ವಿಶೇಷ ರಿಯಾಯಿತಿ ಮತ್ತು ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದು ಸಹಾಯಕ ನಿರ್ದೇಶಕ ಪ್ರದೀಪ್ ಗಣೇಶ್ಕರ್ ತಿಳಿಸಿದರು.ತಾಲೂಕಿನ ನಾಗವಂದ ಗ್ರಾಮದಲ್ಲಿ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ನಾಗವಂದ ಇವರ ಸಹಯೋಹದಲ್ಲಿ ಆಯೋಜಿಸಿದ್ದ ಸ್ತ್ರೀಚೇತನ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.ನರೇಗಾ ಯೋಜನೆಯಡಿ ಮಹಿಳೆಯ ಭಾಗವಹಿಸುವಿಕೆ ಹೆಚ್ಚಿಸಲು ವಿಶೇಷ ರಿಯಾಯಿತಿಗಳನ್ನು ಕಲ್ಪಿಸಲಾಗಿದೆ. ನರೇಗಾ ಕಾಮಗಾರಿ ಕೆಲಸದಲ್ಲಿ ಗರ್ಭಿಣಿಯರಿಗೆ ಶೇ. 50ರಷ್ಟು ರಿಯಾಯಿತಿ ನೀಡಲಾಗಿದೆ. ಅದರಂತೆ ಒಂದು ಕಾಮಗಾರಿ ಕೆಲಸದಲ್ಲಿ ಮಹಿಳೆಯರ ಸಂಖ್ಯೆ ಶೇ. 60ಕ್ಕಿಂತ ಹೆಚ್ಚು ಇದ್ದಾಗ,ಅಲ್ಲಿಯು ಕೆಲಸದ ಪ್ರಮಾಣದಲ್ಲಿ ಶೇ. 10ರಷ್ಟು ರಿಯಾಯಿತಿ ನೀಡಲಾಗುತ್ತಿದೆ.
ಮೂರು ವರ್ಷದೊಳಗಿನ ಮಕ್ಕಳನ್ನು ಹೊಂದಿರುವ ಮಹಿಳಾ ಕಾರ್ಮಿಕರ ಮಕ್ಕಳ ಆರೈಕೆಗೆ ಕೂಸಿನ ಮನೆ ಕೇಂದ್ರವನ್ನು ಸ್ಥಾಪಿಸಲಾಗಿದೆ. ನರೇಗಾ ಕಾಮಗಾರಿ ಸ್ಥಳದಲ್ಲಿ ನೀವೇ ಮಾಲೀಕರಾಗಿ ಕೆಲಸ ನಿರ್ವಹಿಸಬಹುದು ಎಂದರು.ತಾಲೂಕು ಐಇಸಿ ಸಂಯೋಜಕ ಕುಮಾರಯ್ಯ ಚಿಕ್ಕಮಠ ಮಾತನಾಡಿ, ನರೇಗಾ ಯೋಜನೆಯ ಸೌಲಭ್ಯ ಪಡೆದರೆ, ಜೀವನ ನಿರ್ವಹಣೆ ಸುಗಮವಾಗಲಿದೆ. ಸ್ತ್ರೀಚೇತನ ಅಭಿಯಾನದ ಮೂಲಕ ಮಹಿಳೆಯರಿಗೆ ನಿರಂತರ ಕೆಲಸ ನೀಡುವ ಉದ್ದೇಶ ಹೊಂದಲಾಗಿದೆ. ಬರುವ ಆರ್ಥಿಕ ವರ್ಷ ಏಪ್ರಿಲ್ 1ರಿಂದ ಮತ್ತೆ ನೂರು ದಿನದ ಕೆಲಸ ಸಿಗಲಿದೆ ಎಂದರು.ಗ್ರಾಪಂ ಅಧ್ಯಕ್ಷೆ ಮಂಜುಳಾ ಹಾಲಿವಾಣದ, ಪಿಡಿಒ ಮನುಕುಮಾರ ಎಂ.ಬಿ., ಪ್ರಭು ಕೆಂಚಾಯಿಕೊಪ್ಪ, ಬಿಎಫ್‌ಟಿ ಕರಬಸಪ್ಪ, ಎಂಬಿಕೆ ಭಾರತಿ ಇತರರು ಇದ್ದರು.