ಸಾರಾಂಶ
ಯಾದಗಿರಿ: ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿನ ಅಪಾಯಕಾರಿ ಕೆಮಿಕಲ್ ತ್ಯಾಜ್ಯ ಕಂಪನಿಗಳಿಂದಾಗುತ್ತಿರುವ ದುಷ್ಪರಿಣಾಮ ಕುರಿತು ಗ್ರಾಮಗಳಲ್ಲಿ ಈಗ ಜಾಗೃತಭಾವ ಮೂಡತೊಡಗಿದೆ. ಕಾನೂನುರೀತ್ಯ ಗ್ರಾಮ-ಸಭೆಗಳ ಮೂಲಕ ಅನುಮತಿ ರದ್ದಿಗೆ ನಿರ್ಣಯ ಕೈಗೊಳ್ಳಲು ಹೋರಾಟಗಳು ಜನಮಾನಸದಲ್ಲಿ ಚಿಗುರೊಡೆಯುತ್ತಿವೆ. ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರಾದಿಯಾಗಿ ಠರಾವು ಪಾಸ್ ಮಾಡಲು ಒಲವು ತೋರುತ್ತಿದ್ದಾರೆ. ಗಲ್ಲಿಗಲ್ಲಿಗಳಲ್ಲಿ ಮನಸ್ಸುಗಳು ಜಾಗೃತಗೊಳ್ಳುತ್ತಿವೆ. ಜನವಿರೋಧಕ್ಕೆ ಬೆವೆತಿರುವ ಕೆಲವು ಕಂಪನಿ ಮಾಲೀಕರು ಈಗ ಬಂದು ನೀಡುತ್ತಿರುವ ಭರವಸೆಗಳಿಗೆ, ಆಸೆ ಆಮಿಷಗಳ ಬಿಟ್ಟಾಕಿ ಅವರ ವಾಪಸ್ ಕಳುಹಿಸುತ್ತಿದ್ದಾರೆ. ಒಂದೊಂದಾಗಿ ಒಂದಿಷ್ಟು ಬೆಳವಣಿಗೆಗಳು ಚಿಗುರತೊಡಗಿವೆ.ಕಳೆದ ಸತತ 38 ದಿನಗಳಿಂದ "ಕನ್ನಡಪ್ರಭ "ದಲ್ಲಿ ಪ್ರಕಟಗೊಳ್ಳುತ್ತಿರುವ ಸರಣಿ ವರದಿಗಳ ಮುಂದುವರೆದ ಭಾಗದ ಪೈಕಿ, ಈಗ ಈ ಕುರಿತು ಅಲ್ಲಿನ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಜನಪ್ರತಿನಿಧಿಗಳ, ಸಂಘಟನೆಗಳ, ಸಾಮಾನ್ಯರ ಅಭಿಪ್ರಾಯಗಳನ್ನು ಕಟ್ಟಿಕೊಡುವ ನಿಟ್ಟಿನಲ್ಲಿ ಪ್ರಯತ್ನ ನಡೆಸಿದೆ. ಅಲ್ಲಿನ ಜನ ಏನಂತಾರೆ ? ಏನಾಗಬೇಕು ? ಸದ್ಯಕ್ಕೆ ಏನಾಗುತ್ತಿದೆ ಎಂಬ ಬಗ್ಗೆ ವಿವಿಧರ ಅಭಿಪ್ರಾಯಗಳು ಹೀಗಿವೆ...
ಕಡೇಚೂರು-ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿನ ರಾಸಾಯನಿಕ ಕೈಗಾರಿಕೆಗಳು ಸೇರಿದಂತೆ ಇತರ ಕೈಗಾರಿಕೆಗಳು ಕಾನೂನುಬಾಹಿರವಾಗಿ ಪರಿಸರಕ್ಕೆ ಹಾನಿಯಗುವ ವಿಷಾನಿಲವನ್ನು ಹೊರಹಾಕುತ್ತಿರುವ ಪರಿಣಾಮದಿಂದ ಸೈದಾಪುರ ಪಟ್ಟಣ ಸೇರಿದಂತೆ ಪಂಚಾಯತಿ ವ್ಯಾಪ್ತಿಯ ಶೆಟ್ಟಿಹಳ್ಳಿ, ರಾಚನಹಳ್ಳಿ, ಇಂದಿರನಗರ, ಕ್ಯಾತನಾಳದ ಗ್ರಾಮಗಳ ಜನರು ಮೂಗು ಮುಚಿಕೊಂಡು ತಿರುಗಾಡುವ ಪರಿಸ್ಥಿತಿ ಎದುರಾಗಿದೆ. ಈ ಕುರಿತು ಗ್ರಾಮ ಸಭೆಯಲ್ಲಿ ಇವುಗಳ ಕಂಪನಿಗಳನ್ನು ಬಂದ್ ಮಾಡುವ ಕುರಿತು ಠರಾವು ಪಾಸ್ ಮಾಡುವಂತೆ ವಿನಂತಿ ಮಾಡಿದ್ದೇವೆ.
- ಭೀಮಣ್ಣ ಮಡಿವಾಳಕರ್, ಸೈದಾಪುರ. (16ವೈಡಿಆರ್2)ರಾಸಾಯನಿಕ ಕಂಪನಿಗಳು ಈ ಭಾಗದ ಜನರ ಜೀವನ ಜೊತೆ ಚೆಲ್ಲಾಟವಾಡುತಿವೆ. ಇಲ್ಲಿನ ಬಹುತೇಕ ಕಾರ್ಖಾನೆಗಳು ನಿಯಮ ಮೀರಿ ವಿಷಗಾಳಿ, ಘನ ಮತ್ತು ದ್ರವ ತ್ಯಾಜಗಳನ್ನು ನೇರವಾಗಿ ಪರಿಸರಕ್ಕೆ ಬಿಡುತ್ತಿರುವುದರಿಂದ ನಮ್ಮ ಜನರು ದುಡಿದ ಹಣವನ್ನು ಆಸ್ಪತ್ರೆಗೆ ಇಡುವ ಪರಿಸ್ಥಿತಿ ಬಂದಿದೆ. ಇದಲ್ಲದೆ ಕೆಲಸ ಮಾಡುತ್ತೀರುವ ಕಾರ್ಮಿಕರಿಗೆ ಯಾವುದೇ ರಕ್ಷಣೆ ಇಲ್ಲದಂತಾಗಿದೆ. ಇವುಗಳ ವಿರುದ್ಧ ಉಗ್ರವಾದ ಹೋರಾಟವನ್ನು ಮಾಡುತ್ತೇವೆ.
- ವೀರೇಶ ಸಜ್ಜನ್, ವಲಯ ಅಧ್ಯಕ್ಷ, ಜಯ ಕರ್ನಾಟಕ ರಕ್ಷಣಾ ಸೇನೆ ಸೈದಾಪುರ . (16ವೈಡಿಆರ್3)
ಕಂಪನಿಗಳು ನಿಯಮಗಳನ್ನು ಗಾಳಿಗೆ ತೂರಿ ತ್ಯಾಜ್ಯ, ವಿಷಗಾಳಿ ರಾತ್ರಿಯ ಸಮಯದಲ್ಲಿ ಯಥೇಚ್ಚವಾಗಿ ಹೊರ ಬಿಡುತ್ತಿರುವುದರಿಂದ ಮನೆಗಳಲ್ಲಿನ ಕಿಟಕಿ-ಬಾಗಿಲುಗಳನ್ನು ಮುಚ್ಚಿ ಬಾಯಿ-ಮೂಗಿಗೆ ಬಟ್ಟೆ ಕಟ್ಟಿಕೊಂಡು ಮಲಗಿದರೂ ರಾಸಾಯನಿಕ ತ್ಯಾಜ್ಯ ವಾಸನೆ ತಡೆಯಲು ಆಗುತ್ತಿಲ್ಲ. ಕಂಪನಿಗಳ ತ್ಯಾಜ ದ್ರವವನ್ನು ನಿಯಮಬಾಹಿರವಾಗಿ ಹಳ್ಳ-ಕೊಳ್ಳಗಳಿಗೆ ನೇರವಾಗಿ ಬಿಡುತ್ತಿರುವ ಕುರಿತು ಅನೇಕ ಗ್ರಾಮಸ್ಥರು ದೂರು ನೀಡಿದ್ದಾರೆ. ಇವುಗಳ ವಿರುದ್ಧ ಗ್ರಾಮ ಸಭೆಯಲ್ಲಿ ಚರ್ಚಿಸಿ ಕಂಪನಿಗಳ ಅನುಮತಿಯನ್ನು ರದ್ದು ಮಾಡುವಂತೆ ನಿರ್ಣಾಯವನ್ನು ಕೈಗೊಳ್ಳುತ್ತೇವೆ.
- ಕವಿತಾ ಎಂ. ಮಿರಿಯಾಲ್, ಉಪಾಧ್ಯಕ್ಷರು ಗ್ರಾ.ಪಂ. ಸೈದಾಪುರ. (16ವೈಡಿಆರ್4)ಪರಿಸರಕ್ಕೆ ಹಾನಿ ಮಾಡುವ ಮತ್ತು ಜೀವ ಸಂಕುಲಕ್ಕೆ ಕಂಠಕವಾಗಿರುವ ಕಾರ್ಖಾನೆಗಳನ್ನು ಈ ಪ್ರದೇಶದಿಂದ ಹೊರ ಹಾಕುವವರೆಗೂ ನಾವುಗಳು ನಿರಂತರ ಹೋರಾಟಗಳನ್ನು ಹಮ್ಮಿಕೊಳ್ಳಲಾಗುವುದು. ನಮ್ಮ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಂಗವಾರ, ಕೊಂಡಾಪುರ ಮತ್ತು ಬಾಡಿಯಾಳದಲ್ಲಿ ಅನೇಕ ಜನರಿಗೆ ಆರೋಗ್ಯ ಸಮಸ್ಯೆಗಳು ಎದರಾಗಿವೆ. ಈ ಕುರಿತು ಮುಂದಿನ ಗ್ರಾಮ ಸಭೆಯಲ್ಲಿ ವಿಷಯ ಮಂಡನೆ ಮಾಡಿ ಇವುಗಳ ವಿರುದ್ಧ ಕಠಿಣ ಕ್ರಮ ಕೈಗೊಳಲು ಹಕ್ಕೊತ್ತಾಯ ಮಾಡುತ್ತಿದ್ದೇವೆ.
- ಸುಮಲತಾ ಮರಿಗೌಡ ಪಾಟೀಲ್, ಸದಸ್ಯರು ಗ್ರಾಪಂ ಬಾಡಿಯಾಳ. (16ವೈಡಿಆರ್5)
ಈ ಪ್ರದೇಶದಲ್ಲಿ ಗಾಳಿ ಗುಣಮಟ್ಟದ ಸೂಚ್ಯಂಕ ಗಮನಿಸಿದಾಗ ಈ ಪ್ರದೇಶದಲ್ಲಿ ಜನರು ವಾಸಿಸುವುದಕ್ಕೆ ಪೂರವಾಗಿಲ್ಲ. ಆಕಾಸ್ಮಾತ್ ಇದೇ ರೀತಿ ಮುಂದುವರೆದರೆ ನಾವು ದುಡಿದ ಹಣವನ್ನು ಆಸ್ಪತ್ರೆಗೆ ಇಡುವುದರ ಜತೆ ಅನಾರೋಗ್ಯದಿಂದ ಸಾಯುವ ಆತಂಕ ಹೆಚ್ಚಾಗಿದೆ ಎಂದು ಕೂಡಲೂರು, ಗೌಡಗೇರಾ ಮತ್ತು ನೀಲಹಳ್ಳಿಯ ಗ್ರಾಮಸ್ಥರು ದೂರು ನೀಡಿದ್ದಾರೆ. ಗ್ರಾಮ ಸಭೆಯಲ್ಲಿ ನಮ್ಮ ಸದಸ್ಯರು ಮತ್ತು ಗ್ರಾಮಸ್ಥರೊಂದಿಗೆ ಈ ಕಾರ್ಖಾನೆಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳುವಂತೆ ಸರ್ಕಾರಕ್ಕೆ ಪತ್ರ ಬರೆಯುತ್ತೇವೆ.
- ನೀಲಮ್ಮ ಬನ್ನಪ್ಪ ಕೂಡಲೂರು, ಅಧ್ಯಕ್ಷರು ಗ್ರಾ.ಪಂ ಕಿಲ್ಲನಕೇರಾ. (16ವೈಡಿಆರ್6)ನಮ್ಮ ಕಡೇಚೂರು-ಬಾಡಿಯಾಳ ಪ್ರದೇಶದಲ್ಲಿ ಪರಿಸರಕ್ಕೆ ಹಾನಿಯಾಗದ ಮತ್ತು ಸಾರ್ವಜನಿಕ ದೊಡ್ಡ-ದೊಡ್ಡ ಉದ್ಯಮಗಳನ್ನು ಸ್ಥಾಪಿಸಿ, ಸ್ಥಳೀಯರಿಗೆ ಉದ್ಯೋಗ ನೀಡುತ್ತೇವೆ ಎಂದು ಹೇಳಿ ಇಂದು ವಿಷಗಾಳಿ ಹೊರಹಾಕುವ ರಾಸಾಯನಿಕ ಕಂಪನಿಗಳನ್ನು ಸ್ಥಾಪಿಸಿ ಇಲ್ಲಿನ ರೈತರಿಗೆ ಮೋಸ ಮಾಡಿದ ಸರ್ಕಾರದ ಮಲತಾಯಿ ಧೋರಣೆ ಕುರಿತು ಗ್ರಾಮ ಸಭೆಯನ್ನು ಏರ್ಪಡಿಸಿ ಸರ್ಕಾರದ ವಿರುದ್ಧ ಹಕ್ಕೊತ್ತಾಯ ಮಾಡುತ್ತಿದ್ದೇವೆ. ಹಾಗೂ ಈ ಕಾರ್ಖಾನೆಗಳನ್ನು ಇಲ್ಲಿಂದ ತೊಲಗಿಸುವವರೆಗೂ ನಾವು ಬಿಡುವುದಿಲ್ಲ.
- ಕಮಲಮ್ಮ ವೆಂಕಟೇಶ ದುಪಲ್ಲಿ, ಅಧ್ಯಕ್ಷರು ಗ್ರಾ.ಪಂ ಕಡೇಚೂರು. (16ವೈಡಿಆರ್7)
ಈ ಕೈಗಾರಿಕೆಗಳಿಂದ ಪರಿಸರ ಮತ್ತು ಜನರ ಮೇಲೆ ಆಗುತ್ತಿರುವ ಹಾನಿಯ ಕುರಿತು ಅಧ್ಯಯನವನ್ನು ಮಾಡಿ ಜನರ ಮತ್ತು ಪ್ರಾಣಿ ಪಕ್ಷಿಗಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿರುವ ಕೈಗಾರಿಕೆಗಳ ಅನುಮತಿಯನ್ನು ರದ್ದುಗೊಳಿಸಲು ಹಾಗೂ ಕೇಂದ್ರ ಪರಿಸರ ಮತ್ತು ಹವಾಮಾನ ನಿಯಂತ್ರಣ ಸಚಿವಾಲಯದಿಂದ ನೀಡಲಾದ ಷರತ್ತುಗಳನ್ನು ಉಲ್ಲಂಘನೆ ಮಾಡಿರುವುದರಿಂದ ಈ(ENVIRONMENT CLEARENCE) EC ಕೈಗಾರಿಕೆಗಳಿಗೆ ನೀಡಿರುವ ಪರಿಸರ ವಿಮೋಚನಾ
ಜಿಲ್ಲಾಡಳಿತಕ್ಕೆ ಮತ್ತು ಸಂಬಂಧಪಟ್ಟ ಇಲಾಖೆಯ ಮೇಲಾಧಿಕಾರಿಗಳಿಗೆ ಸೂಚಿಸಿ ಪತ್ರ ಬರೆಯಬೇಕೆಂದು ಶೆಟ್ಟಿಹಳ್ಳಿ ಜನತೆಯ ಪರವಾಗಿ ಸರಕಾರಕ್ಕೆ ಮನವಿ ಸಲ್ಲಿಸಿದ್ದೇವೆ.- ಕಾಶೀನಾಥ್, ಸಾಮಾಜಿಕ ಕಾರ್ಯಕರ್ತ, ಶೆಟ್ಟಿಹಳ್ಳಿ