ಸಾರಾಂಶ
ಚಿತ್ರದ ಕೊನೆಯಲ್ಲಿ ನಾಯಕ ಎನ್ ಕೌಂಟರ್ ಗೆ ಬಲಿಯಾಗದೇ ನಾಯಕಿಯೊಂದಿಗೆ ಪ್ರೀತಿಯ ಜೀವನ ಸಾಗಿಸುತ್ತಾನಾ?
ದಾಂಡೇಲಿ; ಬಹುತೇಕ ದಾಂಡೇಲಿ ಹಾಗೂ ಸುತ್ತಮುತ್ತಲಿನ ಕಡೆ ಚಿತ್ರೀಕರಣಗೊಂಡ ಮತ್ತು ಬಹುಪಾಲು ದಾಂಡೇಲಿ ಕಲಾವಿದರೇ ನಟಿಸಿರುವ “ಅರಿಂದಮ್'''''''' ಚಲನಚಿತ್ರ ಹಳಿಯಾಳದ ಬಸವೇಶ್ವರ ಚಿತ್ರಮಂದಿರದಲ್ಲಿ ಶುಕ್ರವಾರ ಪ್ರಾರಂಭೋತ್ಸವ ಉದ್ಘಾಟನೆಯನ್ನು ಜಿಲ್ಲಾ ಕಸಾಪ ಅಧ್ಯಕ್ಷ ಬಿ.ಎನ್. ವಾಸರೆ ಉದ್ಘಾಟಿಸಿ ಮೊದಲ ಪ್ರದರ್ಶನಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಇಂದು ರಾಜ್ಯವ್ಯಾಪಿ ಚಿತ್ರಮಂದಿರಗಳಲ್ಲಿ ಪ್ರದರ್ಶನವಾಗಲಿರುವ ಈ ನಾಯಕ ನಟನಾಗಿರುವ ಧಾರವಾಡದ ಮೂಲದ ಕಲ್ಕಿ ಅಗಸ್ತ್ಯ ಅವರ ನೇತೃತ್ವದಲ್ಲಿ ಸಿದ್ಧಗೊಂಡಿದ್ದು , ಸ್ಥಳೀಯ ಕಲಾವಿದರ ಪ್ರತಿಭೆಯ ಹೊರಬರಲು ಉತ್ತಮ ವೇದಿಕೆಯನ್ನು ಚಿತ್ರತಂಡ ಒದಗಿಸಿಕೊಟ್ಟಿದೆ. ದಾಂಡೇಲಿ ಉತ್ತಮ ಪರಿಸರದೊಂದಿಗೆ ಕಲಾವಿದರಿಂದ ಸಮರ್ಥವಾಗಿ ನಟನೆಯನ್ನು ಹೊರ ತೆಗೆದಿದ್ದಾರೆ ಚಿತ್ರ ಶತದಿನೋತ್ಸವ ಆಚರಿಸಲಿ ಎಂದರು.ಚಿತ್ರದ ಕೊನೆಯಲ್ಲಿ ನಾಯಕ ಎನ್ ಕೌಂಟರ್ ಗೆ ಬಲಿಯಾಗದೇ ನಾಯಕಿಯೊಂದಿಗೆ ಪ್ರೀತಿಯ ಜೀವನ ಸಾಗಿಸುತ್ತಾನಾ? ಹೀಗೆ ಹಲವು ಪ್ರಶ್ನೆಗಳನ್ನು ಪ್ರೇಕ್ಷಕರ ಮನಸ್ಸಲ್ಲಿ ಮೂಡುವಂತೆ ಮಾಡುವಲ್ಲಿ ಯಶಸ್ವಿಯಾಗುವ ಭರವಸೆ ಮೂಡಿಸಿದೆ. ಬಹುತೇಕ ರಂಗಭೂಮಿ ಕಲಾವಿದರ ಅಭಿನಯಿಸಿರುವ ಚಿತ್ರ ಎಲ್ಲಿಯೂ ನಾಟಕೀಯತೆ ತೋರದೇ ನೈಜ ಅಭಿನಯವನ್ನು ನಿರ್ದೇಶಕರು ಹೊರ ತೆಗೆದಿದ್ದಾರೆ.
ಈ ಸಂದರ್ಭದಲ್ಲಿ ಕಸಾಪ ಹಳಿಯಾಳ ತಾಲೂಕು ಘಟಕದ ಅಧ್ಯಕ್ಷೆ ಸುಮಂಗಲಾ ಅಂಗಡಿ, ಚಿತ್ರದಲ್ಲಿ ನಟಿಸಿದ ಸ್ಥಳೀಯ ಕಲಾವಿಧರಾದ ಮುರ್ತುಜ ಆನೆ ಹೊಸೂರ್, ದುಂಡಪ್ಪ ಗೂಳೂರು, ಹನುಮಂತ್ ಕಾರ್ಗಿ, ಗಿರೀಶ್ ಶಿರೋಡ್ಕರ್, ಗೋಪಾಲ್ ಸಿಂಗ್ ರಜಪೂತ, ಪ್ರವೀಣಕುಮಾರ ಸುಲಾಖೆತಿ ಮುಂತಾದವರಿದ್ದರು.ದಾಂಡೇಲಿ ಸ್ಥಳೀಯ ಕಲಾವಿದರ ಅಭಿನಯದ ಅರಿಂದಮ್ ಚಿತ್ರ ಅದ್ದೂರಿಯಾಗಿ ಬಿಡುಗಡೆಗೊಂಡಿತು.