ಸಾರಾಂಶ
ಮೇ 4ರಂದು ಭಗೀರಥ ಮಹರ್ಷಿಗಳ ಜಯಂತಿ ಆಚರಿಸಲಾಗುವುದು. ಅಂದು ಕಡ್ಡಾಯವಾಗಿ ಸರ್ಕಾರಿ ಕಚೇರಿಯಲ್ಲಿ ಅವರ ಭಾವಚಿತ್ರಕ್ಕೆ ವಿಶೇಷ ಸಲ್ಲಿಸಬೇಕು. ಪಟ್ಟಣದ ಎಲ್ಲ ವೃತ್ತ ಸ್ವಚ್ಛತೆಗೊಳಿಸಬೇಕು.
ಕೊಪ್ಪಳ(ಯಲಬುರ್ಗಾ)
ಶ್ರೀಭಗೀರಥ ಮಹರ್ಷಿ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲು ಸಹಕಾರ ನೀಡಬೇಕೆಂದು ಗ್ರೇಡ್-2 ತಹಸೀಲ್ದಾರ್ ವಿರೂಪಾಕ್ಷಪ್ಪ ಹೊರಪೇಟೆ ಹೇಳಿದರು.ಯಲಬುರ್ಗಾ ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ತಾಲೂಕಾಡಳಿತ ವತಿಯಿಂದ ಹಮ್ಮಿಕೊಂಡಿದ್ದ ಭಗೀರಥ ಮಹರ್ಷಿ ಜಯಂತಿ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಮೇ 4ರಂದು ಭಗೀರಥ ಮಹರ್ಷಿಗಳ ಜಯಂತಿ ಆಚರಿಸಲಾಗುವುದು. ಅಂದು ಕಡ್ಡಾಯವಾಗಿ ಸರ್ಕಾರಿ ಕಚೇರಿಯಲ್ಲಿ ಅವರ ಭಾವಚಿತ್ರಕ್ಕೆ ವಿಶೇಷ ಸಲ್ಲಿಸಬೇಕು. ಪಟ್ಟಣದ ಎಲ್ಲ ವೃತ್ತ ಸ್ವಚ್ಛತೆಗೊಳಿಸಬೇಕು. ಸಮುದಾಯದ ಒತ್ತಾಯದ ಮೇರೆಗೆ ಜಯಂತಿಯನ್ನು ಪ್ರತ್ಯೇಕ ದಿನದಂದು ಆಚರಿಸಲಾಗುವುದು ಎಂದರು.
ಪಟ್ಟಣದ ಬಯಲು ರಂಗಮಂದಿರದಲ್ಲಿ ಸಮಾಜದ ಜತೆಗೂಡಿ ತಾಲೂಕಾಡಳಿತ ವತಿಯಿಂದ ಜಯಂತಿ ಆಚರಣೆಗೆ ಮುಂದಾಗಿದ್ದು ಹೆಚ್ಚಿನ ಮಟ್ಟದಲ್ಲಿ ಜನರು ಭಾಗವಹಿಸಬೇಕು. ಭಾವಚಿತ್ರ ಮೆರವಣಿಗೆ, ವಿಶೇಷ ಉಪನ್ಯಾಸ ನಡೆಯಲಿದೆ ಎಂದು ತಿಳಿಸಿದರು.ಭಗೀರಥ ಸಮಾಜದ ಅಧ್ಯಕ್ಷ ಈರಪ್ಪ ದಸ್ತಾನಿ ಮಾತನಾಡಿ, ಮೇ 4ರಂದು ಬೇರೆ ಬೇರೆ ಕಾರ್ಯಕ್ರಮಗಳಿಂದ ಜಯಂತಿಯನ್ನು ಬೇರೊಂದು ದಿನ ಆಚರಿಸಬೇಕೆಂದು ಮನವಿ ಮಾಡಿದರು.
ಸಭೆಯಲ್ಲಿ ಪಪಂ ಅಧ್ಯಕ್ಷ ಅಂದಯ್ಯ ಕಳ್ಳಿಮಠ, ಸದಸ್ಯರಾದ ರೇವಣೆಪ್ಪ ಹಿರೇಕುರುಬರ, ಹನುಮಂತ ಭಜಂತ್ರಿ, ಶರಣಪ್ಪ ಉಪ್ಪಾರ, ಬಸವರಾಜ ಪೂಜಾರ, ಫಕೀರಪ್ಪ ಉಪ್ಪಾರ, ವೈ.ಬಿ. ಮೇಟಿ, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.