ಕಲ್ಯಾಣ ಕ್ರಾಂತಿ ವಿಜಯೋತ್ಸವ ಆಚರಣೆಗೆ ನಿರ್ಧಾರ

| Published : Sep 25 2024, 12:53 AM IST

ಕಲ್ಯಾಣ ಕ್ರಾಂತಿ ವಿಜಯೋತ್ಸವ ಆಚರಣೆಗೆ ನಿರ್ಧಾರ
Share this Article
  • FB
  • TW
  • Linkdin
  • Email

ಸಾರಾಂಶ

ಭಾಲ್ಕಿಯಲ್ಲಿ ನಡೆಯಲಿರುವ ಮರಣವೇ ಮಹಾನವಮಿ ಹಾಗೂ ಕಲ್ಯಾಣ ಕ್ರಾಂತಿ ವಿಜಯೋತ್ಸವ ಆಚರಣೆಗೆ ಚಂದ್ರಕಲಾ ಡಿಗ್ಗಿ ಆಯ್ಕೆಯಾಗಿದಕ್ಕೆ ಪೂಜ್ಯರು ಸನ್ಮಾನಿಸಿದರು.

ಭಾಲ್ಕಿ:ಹಿರೇಮಠ ಸಂಸ್ಥಾನ ಭಾಲ್ಕಿಯಲ್ಲಿ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ಹಾಗೂ ಗುರುಬಸವ ಪಟ್ಟದ್ದೇವರ ಸಾನ್ನಿಧ್ಯದಲ್ಲಿ ಪ್ರತಿವರ್ಷದಂತೆ ಈ ವರ್ಷವು ನಡೆಯಲಿರುವ ಮರಣವೇ ಮಹಾನವಮಿ ಹಾಗೂ ಕಲ್ಯಾಣ ಕ್ರಾಂತಿ ವಿಜಯೋತ್ಸವ ಆಚರಿಸಲು ನಿರ್ಧರಿಸಲಾಯಿತು.

ಗುರುಬಸವ ಪಟ್ಟದ್ದೇವರ ಸಾನ್ನಿಧ್ಯದಲ್ಲಿ ಅಕ್ಕನಬಳಗದ ಶರಣೆಯರ ಸಭೆಯಲ್ಲಿ ಸರ್ವಾನುಮತದಿಂದ ಸೇವಾ ಸಮಿತಿ ಅಧ್ಯಕ್ಷರಾಗಿ ಚಂದ್ರಕಲಾ ಪ್ರಭು ಡಿಗ್ಗಿರನ್ನು ನೇಮಕ ಮಾಡಲಾಯಿತು. ಡಿಗ್ಗಿ ರವರ ಅಧ್ಯಕ್ಷತೆಯಲ್ಲಿ 9 ದಿನಗಳ ಪರ್ಯಂತ ನಡೆಯಲಿರುವ ಕಾರ್ಯಕ್ರಮದ ಯಶಸ್ವಿಗೆ ಎಲ್ಲ ಅಕ್ಕನಬಳಗದವರು ಸಹಕರಿಸಿ ಯಶಸ್ವಿಗೊಳಿಸಬೇಕು ಹಾಗೂ ಮಲ್ಲಮ್ಮ ನಾಗನಕೇರೆ ಅವರಿಂದ ಶಿವಯೋಗ ಸಾಧನೆ ನಡೆಯುತ್ತಿರುವುದು ಮತ್ತಷ್ಟು ವಿಶೇಷವಾಗಿದೆ ಎಂದು ಪೂಜ್ಯರು ಆಶೀರ್ವಚನ ನೀಡಿದರು. ಅಧ್ಯಕ್ಷರಾಗಿ ಆಯ್ಕೆಯಾದ ಚಂದ್ರಕಲಾ ಡಿಗ್ಗಿ ಅವರು ಪೂಜ್ಯರಿಂದ ಆಶೀರ್ವಾದ ಪಡೆದುಕೊಂಡು ನನಗೆ ಈ ಒಂದು ಜವಾಬ್ದಾರಿ ನೀಡಿರುವುದು ಬಸವಗುರುವಿನ ಆಶೀರ್ವಾದವೆಂದು ಭಾವಿಸುತ್ತೇನೆ. ತಮ್ಮೇಲ್ಲರ ಸಹಕಾರದಿಂದ ಕಾರ್ಯಕ್ರಮ ಯಶಸ್ವಿ ಮಾಡೋಣವೆಂದು ನುಡಿದರು. ಅಕ್ಕನಬಳಗದ ತಾಯಿಂದಿರು ಉಪಸ್ಥಿತರಿದ್ದರು.