ಸಾರಾಂಶ
ನ.೧೮ರಂದು ಶ್ರೀ ಭಕ್ತ ಶ್ರೇಷ್ಠ ಕನಕದಾಸರ ಜಯಂತಿಯನ್ನು ಸಮಾಜದವರ ಜತೆ ಸೇರಿಕೊಂಡು ತಾಲೂಕಾಡಳಿತದಿಂದ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುವುದು.
ಕನ್ನಡಪ್ರಭ ವಾರ್ತೆ ಯಲಬುರ್ಗಾ
ನ.೧೮ರಂದು ಶ್ರೀ ಭಕ್ತ ಶ್ರೇಷ್ಠ ಕನಕದಾಸರ ಜಯಂತಿಯನ್ನು ಸಮಾಜದವರ ಜತೆ ಸೇರಿಕೊಂಡು ತಾಲೂಕಾಡಳಿತದಿಂದ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುವುದು ಎಂದು ತಹಸೀಲ್ದಾರ ಬಸವರಾಜ ತೆನ್ನಳ್ಳಿ ಹೇಳಿದರು.ಪಟ್ಟಣದ ತಹಸೀಲ್ದಾರ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಭಕ್ತ ಕನಕದಾಸ ಜಯಂತಿ ಆಚರಣೆ ನಿಮಿತ್ತ ಆಯೋಜಿಸಿದ್ದ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಅಂದು ಎಲ್ಲ ತಾಲೂಕು ಮಟ್ಟದ ಅಧಿಕಾರಿಗಳು ಬೆಳಗ್ಗೆ ತಂತಮ್ಮ ಕಚೇರಿಯಲ್ಲಿ ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಆಚರಣೆ ಮಾಡಬೇಕು ಎಂದರು.
ಅಂದು ಪಟ್ಟಣ ಸೇರಿದಂತೆ ತಾಲೂಕಿನ ಎಲ್ಲ ಸರ್ಕಾರಿ ಶಾಲಾ, ಕಾಲೇಜುಗಳಲ್ಲಿ ಕನಕದಾಸರ ಜಯಂತಿಯನ್ನು ಆಚರಿಸಬೇಕು. ಎಲ್ಲ ಸಮಾಜದ ಮುಖಂಡರು, ಸಾರ್ವಜನಿಕರು, ಜನಪ್ರತಿನಿಧಿಗಳು, ನಾನಾ ಸಂಘಟನೆಗಳ ಪದಾಧಿಕಾರಿಗಳು ಸಕ್ರಿಯವಾಗಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಹೇಳಿದರು.ಪಪಂ ಅಧ್ಯಕ್ಷ ಅಂದಯ್ಯ ಕಳ್ಳಿಮಠ ಸಭೆ ಅಧ್ಯಕ್ಷತೆ ವಹಿಸಿದ್ದರು.
ತಾಲೂಕಾ ಹಾಲುಮತ ಸಮಾಜದ ಅಧ್ಯಕ್ಷ ವೀರನಗೌಡ ಬಳೂಟಗಿ ಮಾತನಾಡಿದರು.ಪಪಂ ಸದಸ್ಯರಾದ ವಸಂತ ಭಾವಿಮನಿ, ಹನುಮಂತ ಭಜಂತ್ರಿ, ಹಾಲುಮತ ಸಮಾಜದ ಮುಖಂಡರಾದ ಗದ್ದೆಪ್ಪ ಚಿಲವಾಡ್ಗಿ, ರೇವಣೆಪ್ಪ ಹಿರೇಕುರಬರ, ಯಲ್ಲಪ್ಪ ಹೊಸ್ಮನಿ, ಹನುಮಂತಪ್ಪ ಹನುಮಾಪೂರ, ಶಿವು ರಾಜೂರು, ಬಾಲಚಂದ್ರ ಸಾಲಬಾವಿ, ಯಲ್ಲಪ್ಪ ಹುನಗುಂದ ಹಾಗೂ ನಾನಾ ಇಲಾಖೆಗಳ ಅಧಿಕಾರಿಗಳಾದ ಬೆಟದಪ್ಪ ಮಾಳೆಕೊಪ್ಪ, ಶಶಿಧರ ಸಕ್ರಿ, ನಿಂಗನಗೌಡ ಪಾಟೀಲ, ಬಸವರಾಜ ಗೋಗೇರಿ, ಶಿವಶಂಕರ ಕರಡಕಲ್, ಶಿರಸ್ತೆದಾರ ದೇವರಡ್ಡಿ, ರಮೇಶ ಚಿಣಗಿ, ಸಂಜಯ ಚಿತ್ರಗಾರ, ಯಂಕಣ್ಣ ಜೋಶಿ, ಕಂದಾಯ ಸಿಬ್ಬಂದಿ ಹನುಮಂತಗೌಡ ಪಾಟೀಲ ಮತ್ತಿತರರು ಇದ್ದರು.