ಜನ ಮತ್ತು ಪರಿಸರ ವಿರೋಧಿಯಾಗಿರುವ ಅಘನಾಶಿನಿ-ಬೇಡ್ತಿ ನದಿ ಜೋಡಣೆ ಯೋಜನೆಗೆ ತೀವ್ರ ಆಕ್ಷೇಪ ವ್ಯಕ್ತ ಪಡಿಸಿ, ಯೋಜನೆ ಜಾರಿ ವಿರುದ್ಧ ನಿರಂತರ ಹೋರಾಟ ಮಾಡೋಣ ಎಂದು ತಾಲೂಕಿನ ಸಂತೆಗುಳಿಯಲ್ಲಿ ಆಯೋಜಿಸಿದ್ದ ಅಘನಾಶಿನಿ ನದಿ ಜೋಡಣೆ ವಿರೋಧಿ ಬೃಹತ್ ಸಭೆಯಲ್ಲಿ ನಿರ್ಧರಿಸಲಾಯಿತು.

ಸಂತೆಗುಳಿಯಲ್ಲಿ ಅಘನಾಶಿನಿ ನದಿ ಜೋಡಣೆ ವಿರೋಧಿಸಿ ಸಭೆಕನ್ನಡಪ್ರಭ ವಾರ್ತೆ ಕುಮಟಾ

ಜನ ಮತ್ತು ಪರಿಸರ ವಿರೋಧಿಯಾಗಿರುವ ಅಘನಾಶಿನಿ-ಬೇಡ್ತಿ ನದಿ ಜೋಡಣೆ ಯೋಜನೆಗೆ ತೀವ್ರ ಆಕ್ಷೇಪ ವ್ಯಕ್ತ ಪಡಿಸಿ, ಯೋಜನೆ ಜಾರಿ ವಿರುದ್ಧ ನಿರಂತರ ಹೋರಾಟ ಮಾಡೋಣ ಎಂದು ತಾಲೂಕಿನ ಸಂತೆಗುಳಿಯಲ್ಲಿ ಆಯೋಜಿಸಿದ್ದ ಅಘನಾಶಿನಿ ನದಿ ಜೋಡಣೆ ವಿರೋಧಿ ಬೃಹತ್ ಸಭೆಯಲ್ಲಿ ನಿರ್ಧರಿಸಲಾಯಿತು.

ಸಭೆಯಲ್ಲಿ ಮಾತನಾಡಿದ ಅರಣ್ಯ ಹಕ್ಕು ಹೋರಾಟಗಾರ ರವೀಂದ್ರ ನಾಯ್ಕ, ಕರಾವಳಿ ವಿಭಾಗದ ನದಿ ಜೋಡಣೆಯಿಂದ ಆರ್ಥಿಕ ಸಂಕಷ್ಟ ಉಂಟಾಗುವುದಲ್ಲದೇ, ಪರಿಸರ ವಿನಾಶಕ್ಕೆ ಕಾರಣವಾಗುತ್ತದೆ. ಕುಲಕಸುಬು ನಶಿಸುತ್ತದೆ. ಕೃಷಿಗೆ ಮಾರಕವಾಗುವುದರಿಂದ ನದಿ ಜೋಡಣೆ ತೀವ್ರವಾಗಿ ವಿರೋಧಿಸಬೇಕಿದೆ ಎಂದರು.

ಕನ್ನಡ ಸಂಘದ ಅಧ್ಯಕ್ಷ ಭಾಸ್ಕರ ಪಟಗಾರ, ನಮ್ಮ ಜಿಲ್ಲೆಯ ಪರವಾದ ಯೋಜನೆಗಿಂತ, ಜಿಲ್ಲೆಗೆ ಮಾರಕವಾದ ಯೋಜನೆಗಳೇ ಆಗಮಿಸುತ್ತಿರುವುದು ವಿಷಾದಕರ. ಇಂಥ ಜನ ವಿರೋಧಿ ಯೋಜನೆ ಸ್ಥಗಿತಗೊಳಿಸಲು ಪಕ್ಷಾತೀತವಾಗಿ ಜನಪ್ರತಿನಿಧಿಗಳು ಕೂಡಾ ಆಸಕ್ತಿ ವಹಿಸಬೇಕು ಎಂದರು.

ಸಂತೆಗುಳಿ ಯುವ ಮುಖಂಡ ವಿನಾಯಕ ಭಟ್ ಮಾತನಾಡಿ, ಪಕ್ಷಾತೀತ ಮತ್ತು ಜಾತ್ಯತೀತವಾಗಿ ನದಿ ಜೋಡಣೆ ವಿರೋಧಿ ಹೋರಾಟಕ್ಕೆ ಸನ್ನದ್ಧರಾಗಬೇಕು ಎಂದರು.

ತಾಲೂಕು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ಮಂಜುನಾಥ ಮರಾಠಿ ಪ್ರಾಸ್ತಾವಿಕ ಮಾತನಾಡಿ, ಫೆ.೧೧ ರಂದು ಸಿದ್ದಾಪುರ ತಾಲೂಕಿನ ನೆಹರು ಮೈದಾನದಲ್ಲಿ ಆಯೋಜಿಸಲಾದ ಬೃಹತ್ ಅಘನಾಶಿನಿ ವಿರೋಧಿ ಸಭೆಯಲ್ಲಿ ಆಕ್ಷೇಪಣಾ ಪತ್ರ ಸಲ್ಲಿಸಲಾಗುವುದು. ಹೆಚ್ಚಿನ ಸಂಖ್ಯೆಯಲ್ಲಿ ಆಕ್ಷೇಪಣಾ ಪತ್ರ ಸಲ್ಲಿಕೆಯಾಗಬೇಕು ಎಂದರು.

ಗ್ರಾಪಂ ಸದಸ್ಯರಾದ ಓಮು ಮರಾಠಿ, ಅಬ್ದುಲ ಖಾದರ, ಖಾಸಿಂ ಸಾಬ, ಸ್ಥಾನಿಕ ಪ್ರಮುಖರಾದ ಮಂಜುನಾಥ ನಾಯ್ಕ, ಶಂಕರ ಗೌಡ ಕಂದವಳ್ಳಿ, ಬಾಲಚಂದ್ರ ನಾಯ್ಕ, ಮಹೇಶ ನಾಯ್ಕ ಸಾಲ್ಕೊಂಡ, ಸಫೀನ್ ಹೊಸಳ್ಳಿ, ಈಶ್ವರ ಮರಾಠಿ, ಮಹೇಂದ್ರ ನಾಯ್ಕ ಕತಗಾಲ, ಸೀತಾರಾಮ ನಾಯ್ಕ ಬೊಗರಿಬೈಲ್ ಇದ್ದರು. ಮುಜಾಫರ್ ಸ್ವಾಗತಿಸಿದರು. ಪ್ರಕಾಶ ಹೆಗಡೆ ವಂದಿಸಿದರು.