ಸಾರಾಂಶ
ಮಾಗಡಿ: ಪುರಸಭೆ ಪಕ್ಕದಲ್ಲಿರುವ ಕೆಂಪೇಗೌಡರ ಪ್ರತಿಮೆ ಸ್ಥಳಾಂತರದ ಬಗ್ಗೆ ಹೈಕೋರ್ಟ್‌ನಲ್ಲಿ ಪ್ರಕರಣ ಇರುವುದರಿಂದ ಯಥಾಸ್ಥಿತಿ ಕಾಯ್ದುಕೊಳ್ಳಲಾಗುವುದು ಎಂದು ಪುರಸಭಾ ಅಧ್ಯಕ್ಷ ಶಿವರುದ್ರಮ್ಮ ವಿಜಯಕುಮಾರ್ ಹೇಳಿದರು.
ಮಾಗಡಿ: ಪುರಸಭೆ ಪಕ್ಕದಲ್ಲಿರುವ ಕೆಂಪೇಗೌಡರ ಪ್ರತಿಮೆ ಸ್ಥಳಾಂತರದ ಬಗ್ಗೆ ಹೈಕೋರ್ಟ್‌ನಲ್ಲಿ ಪ್ರಕರಣ ಇರುವುದರಿಂದ ಯಥಾಸ್ಥಿತಿ ಕಾಯ್ದುಕೊಳ್ಳಲಾಗುವುದು ಎಂದು ಪುರಸಭಾ ಅಧ್ಯಕ್ಷ ಶಿವರುದ್ರಮ್ಮ ವಿಜಯಕುಮಾರ್ ಹೇಳಿದರು.
ಪುರಸಭೆ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರ್ಕಾರದಿಂದ ಆಸ್ಪತ್ರೆ ನಿರ್ಮಾಣ ಮಾಡುವ ಹಿನ್ನೆಲೆಯಲ್ಲಿ ಕೆಂಪೇಗೌಡರ ಪ್ರತಿಮೆ ಸ್ಥಳಾಂತರ ಕುರಿತು ಶಾಸಕ ಬಾಲಕೃಷ್ಣ ಪ್ರಸ್ತಾಪಿಸಿದ್ದರು. ಈಗ ಎರಡನೇ ಬಾರಿಗೆ ಈ ವಿಚಾರವಾಗಿ ಚರ್ಚೆಗೆ ಬಂದಿದ್ದು ಹೈಕೋರ್ಟ್‌ನಲ್ಲಿ ಪ್ರಕರಣ ದಾಖಲಾಗಿದೆ. ಹೈಕೋರ್ಟ್ ಆದೇಶ ನೀಡುವವರೆಗೂ ಕೆಂಪೇಗೌಡ ಪ್ರತಿಮೆ ಸ್ಥಳಾಂತರ ಮಾಡದಂತೆ ಯಥಾಸ್ಥಿತಿ ಕಾಯ್ದುಕೊಳ್ಳಲಾಗುವುದು ಎಂದು ತಿಳಿಸಿದರು.ಪಟ್ಟಣದ ಹೊಸಪೇಟೆ ವೃತ್ತಕ್ಕೆ ಅಗ್ನಿ ಬನ್ನಿರಾಯ ಸ್ವಾಮಿ ವೃತ್ತ ಎಂದು ನಾಮಕರಣ ಹಾಗೂ ತಿರುಮಲೆ ಮುಖ್ಯರಸ್ತೆಯಲ್ಲಿರುವ ಬಾಲಕೃಷ್ಣ ಉದ್ಯಾನವನ ಹೆಸರನ್ನು ಸಿದ್ದಾರೂಢ ಉದ್ಯಾನವನ ಎಂದು ಮರುನಾಮಕರಣ ಮಾಡುವ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಸಭೆಯ ತೀರ್ಮಾನಿಸಿ ಸರ್ಕಾರದಿಂದ ಆದೇಶ ಪಡೆದು ಕಾನೂನು ಪ್ರಕಾರವೇ ಹೆಸರಿಡಲಾಗುವುದು ಎಂದರು.
ಕಾಮಗಾರಿಗಳು ಪ್ರಗತಿಯಲ್ಲಿ: ಪಟ್ಟಣದಲ್ಲಿ ಹಲವು ಕಾಮಗಾರಿಗಳು ಪ್ರಗತಿಯಲ್ಲಿದ್ದು ಮುಗಿಯುವ ಹಂತಕ್ಕೆ ಬಂದಿದ್ದು 15ನೇ ಹಣಕಾಸಿನಡಿ ಪ್ರಾರಂಭಸಿರುವ ಕಾಮಗಾರಿಗಳು ಮುಂದುವರಿಯುತ್ತದೆ. ಹೊಸದಾಗಿ ಯಾವುದೇ ಹೆಚ್ಚುವರಿ ಹಣ ಪುರಸಭೆಗೆ ಬಿಡುಗಡೆಯಾಗಿಲ್ಲ. ಪಟ್ಟಣದಲ್ಲಿ ಮೂಲ ಸೌಲಭ್ಯಗಳಿಗೆ ಮೊದಲ ಆದ್ಯತೆ ನೀಡಲಾಗುತ್ತಿದ್ದು ಪಟ್ಟಣದ ಸ್ವಚ್ಛತೆ ಕುಡಿಯುವ ನೀರು, ಬೀದಿ ದೀಪ ನಿರ್ವಹಣೆಗಳಿಗೆ ಯಾವುದೇ ರೀತಿ ತೊಂದರೆಯಾಗದಂತೆ ಸಿಬ್ಬಂದಿ ಕಾರ್ಯನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.ಕೊನೆ ಸಾಮಾನ್ಯ ಸಭೆ:
ಪುರಸಭೆಯ ಅವಧಿ ನ.9ಕ್ಕೆ ಕೊನೆಯಾಗಲಿದೆ. ಇದು ಕೊನೆಯ ಸಭೆ. ಸ್ಥಳೀಯ ಆಡಳಿತ 2ನೇ ಅವಧಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಮೀಸಲಾತಿ ವಿಳಂಬದಿಂದ ಒಂದೂವರೆ ವರ್ಷ ಆಡಳಿತ ಮಾಡಲು ಆಗಿಲ್ಲ ಇದನ್ನು ಈಗ ಮುಂದುವರಿಸುವಂತೆ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದು ನ್ಯಾಯಾಲಯ ಒಂದು ವೇಳೆ ಹಿಂದಿನ ಅವಧಿಯನ್ನು ಮುಂದುವರಿಸಿದರೆ ಒಂದುವರೆ ವರ್ಷ ಮತ್ತೆ ಅಧಿಕಾರ ಮುಂದುವರಿಯುತ್ತದೆ. ಇಲ್ಲವಾದರೆ ನ. 9ಕ್ಕೆ ಪುರಸಭೆ ಆಡಳಿತ ಕೊನೆಗೊಳ್ಳಲಿದ್ದು ಹೊಸ ಚುನಾವಣೆಗೆ ಪುರಸಭೆ ಸಜ್ಜಾಗಬೇಕಿದೆ.ಸಭೆಯಲ್ಲಿ ಉಪಾಧ್ಯಕ್ಷ ರಿಯಾಜ್, ಸಾಯಿ ಸಮಿತಿಯ ಅಧ್ಯಕ್ಷ ಶಿವಕುಮಾರ್, ಅನಿಲ್ ಅಶ್ವತ್, ಕೆ.ವಿ.ಬಾಲು, ಎಂ.ಎನ್. ಮಂಜು, ರೇಖಾ ನವೀನ್, ರಹಮತ್, ವಿಜಯ ರೂಪೇಶ್, ಮಮತಾ, ಆಶಾ, ರಮ್ಯಾ ನರಸಿಂಹಮೂರ್ತಿ, ಕಾಂತರಾಜು, ಜಯರಾಂ ಸೇರಿದಂತೆ ಪುರಸಭೆ ಮುಖ್ಯ ಅಧಿಕಾರಿ ಶ್ರೀನಿವಾಸ್ ಹಾಗೂ ಅಧಿಕಾರಿಗಳು ಭಾಗವಹಿಸಿದ್ದರು.
;Resize=(128,128))
;Resize=(128,128))
;Resize=(128,128))