ಸಾರಾಂಶ
ಅನಗೋಳದಲ್ಲಿ ಧರ್ಮವೀರ ಸಂಭಾಜಿ ಮಹಾರಾಜರ ಪುತ್ಥಳಿ ಲೋಕಾರ್ಪಣೆ ವೇಳೆ ಮಹಾರಾಷ್ಟ್ರದ ಸಚಿವ ನಾಡದ್ರೋಹಿ ಘೋಷಣೆ ಕೂಗಿದರೂ ತಡೆಯದ ಶಾಸಕ ಅಭಯ ಪಾಟೀಲ, ಮೇಯರ್ ಸವಿತಾ ಕಾಂಬಳೆ, ಮಹಾರಾಷ್ಟ್ರ ಸಚಿವ ಶಿವೇಂದ್ರಸಿಂಹರಾಜೆ ಭೋಸಲೆ ಮೇಲೆ ನಾಡದ್ರೋಹದ ಪ್ರಕರಣ ದಾಖಲಿಸಬೇಕೆಂದು ಆಗ್ರಹಿಸಿ ಮಂಗಳವಾರ ಕಿತ್ತೂರು ಕರ್ನಾಟಕ ಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ ಬೆಳಗಾವಿ
ಅನಗೋಳದಲ್ಲಿ ಧರ್ಮವೀರ ಸಂಭಾಜಿ ಮಹಾರಾಜರ ಪುತ್ಥಳಿ ಲೋಕಾರ್ಪಣೆ ವೇಳೆ ಮಹಾರಾಷ್ಟ್ರದ ಸಚಿವ ನಾಡದ್ರೋಹಿ ಘೋಷಣೆ ಕೂಗಿದರೂ ತಡೆಯದ ಶಾಸಕ ಅಭಯ ಪಾಟೀಲ, ಮೇಯರ್ ಸವಿತಾ ಕಾಂಬಳೆ, ಮಹಾರಾಷ್ಟ್ರ ಸಚಿವ ಶಿವೇಂದ್ರಸಿಂಹರಾಜೆ ಭೋಸಲೆ ಮೇಲೆ ನಾಡದ್ರೋಹದ ಪ್ರಕರಣ ದಾಖಲಿಸಬೇಕೆಂದು ಆಗ್ರಹಿಸಿ ಮಂಗಳವಾರ ಕಿತ್ತೂರು ಕರ್ನಾಟಕ ಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.ಬೆಳಗಾವಿಯ ಅನಗೋಳದಲ್ಲಿ ಧರ್ಮವೀರ ಸಂಭಾಜಿರಾಜೆ ಮೂರ್ತಿ ಉದ್ಘಾಟನೆ ಕುರಿತು ಜಿಲ್ಲಾಧಿಕಾರಿಗಳೇ ಖುದ್ದು ಸ್ಥಳಕ್ಕೆ ಭೇಟಿ ನೀಡಿ ಜ.5ರಂದು ಯಾರೂ ಸ್ಥಳದಲ್ಲಿ ಜಮಾಯಿಸಬಾರದು. ಧರ್ಮವೀರ ಸಂಭಾಜಿರಾಜೆ ಮೂರ್ತಿ ಉದ್ಘಾಟನೆ ಮುಂದೂಡಲಾಗಿದೆ ಆದೇಶ ಮಾಡಿದ್ದರೂ, ಕಾಮಗಾರಿ ಅಪೂರ್ಣವಾಗಿದ್ದರೂ ರಾಜಕೀಯ ಲಾಭ ಪಡೆಯುವ ದುರುದ್ದೇಶದಿಂದ ನಿಯಮ ಗಾಳಿಗೆ ತೂರಿ ಒತ್ತಾಯಪೂರ್ವಕ ಮೂರ್ತಿ ಉದ್ಘಾಟನೆ ಮಾಡಿರುವುದು ಖಂಡನಾರ್ಹ.
ಸಂಭಾಜಿ ಪುತ್ಥಳಿ ಉದ್ಘಾಟನೆಗೆ ಮಹಾರಾಷ್ಟ್ರದ ಸಚಿವ ಶಿವೇಂದ್ರಸಿಂಗ್ ರಾಜೆ ಭೋಸಲೆ ಕರೆಯಿಸಿ ಅವರ ಕಡೆಯಿಂದ ಜೈ ಮಹಾರಾಷ್ಟ್ರ ಎಂದು ಘೋಷಣೆ ಕೂಗಿಸಿ ನಾಡದ್ರೋಹ ಎಸಗಿದ್ದಾರೆ. ಮಹಾರಾಷ್ಟ್ರ ಸಚಿವ ಜೈ ಮಹಾರಾಷ್ಟ್ರ ಎಂದಾಗ ಶಾಸಕ ಅಭಯ ಪಾಟೀಲ ಮತ್ತು ಬೆಳಗಾವಿ ಮಹಾನಗರ ಪಾಲಿಕೆ ಮೇಯರ್ ಸವಿತಾ ಕಾಂಬಳೆ ಚಪ್ಪಾಳೆ ತಟ್ಟಿ ಹರ್ಷ ವ್ಯಕ್ತಪಡಿಸಿದ್ದು, ಕರ್ನಾಟಕದ ಜನತೆಗೆ ಮಾಡಿದ ಅಪಮಾನವಾಗಿದ್ದು, ಅವರ ಮೇಲೆ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.ಕಸ್ತೂರಿ ಭಾವಿ, ದೇವೆಂದ್ರ ಕಾಂಬಳೆ, ವಾಸು ಬಸನಾಯ್ಕರ್, ಸಂತೋಷ ತಳ್ಳಿಮನಿ, ಶಶಿಕಾಂತ ಅಷ್ಟೇಕರ್, ಭರ್ಮಾ ಕಾಂಬಳೆ, ನಾಗೇಶ ತಿಂಬುಲಿ, ಅನಿಲ್ ದಡ್ಡಿಮನಿ, ಬಾಗಣ್ಣ ಕುರುಬರ ಇತರರು ಇದ್ದರು.