ಕೊಪ್ಪಮಲೆನಾಡು ಮತ್ತು ಕರಾವಳಿ ಭಾಗದ ಕೃಷಿಯನ್ನು ವಿಶೇಷ ಕೃಷಿ ವಲಯ ಎಂದು ಘೋಷಣೆ ಮಾಡಬೇಕು ಇಲ್ಲಿನ ಕೃಷಿ ಸಮಸ್ಯೆಗಳು ವಿಭಿನ್ನ ಇರುವ ಕಾರಣ. ಕೃಷಿ ಸಾಲ ನೀಡಲು ರೈತರ ಸಿಬಿಲ್ ಸ್ಕೋರ್ ನೋಡುವ ಪದ್ಧತಿ ರದ್ದುಪಡಿಸಬೇಕು ಇಲ್ಲದಿದ್ದರೆ ಹೋರಾಟ ನಡೆಸಲಾಗುವುದು ಕಾಫಿ ಬೆಳೆಗಾರರು ಈ ದಿಕ್ಕಿನಲ್ಲಿ ಹೋರಾಟಕ್ಕೆ ಸಿದ್ದರಾಗಬೇಕು ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ರೈತರತ್ನ ಕುರುಬೂರು ಶಾಂತಕುಮಾರ್ ಒತ್ತಾಯಿಸಿದ್ದಾರೆ.
ಕೃಷಿ ಸಾಲ ನೀಡಲು ರೈತರ ಸಿಬಿಲ್ ಸ್ಕೋರ್ ಪದ್ಧತಿ ರದ್ದುಪಡಿಸಿ
ಕನ್ನಡಪ್ರಭ ವಾರ್ತೆ ಕೊಪ್ಪಮಲೆನಾಡು ಮತ್ತು ಕರಾವಳಿ ಭಾಗದ ಕೃಷಿಯನ್ನು ವಿಶೇಷ ಕೃಷಿ ವಲಯ ಎಂದು ಘೋಷಣೆ ಮಾಡಬೇಕು ಇಲ್ಲಿನ ಕೃಷಿ ಸಮಸ್ಯೆಗಳು ವಿಭಿನ್ನ ಇರುವ ಕಾರಣ. ಕೃಷಿ ಸಾಲ ನೀಡಲು ರೈತರ ಸಿಬಿಲ್ ಸ್ಕೋರ್ ನೋಡುವ ಪದ್ಧತಿ ರದ್ದುಪಡಿಸಬೇಕು ಇಲ್ಲದಿದ್ದರೆ ಹೋರಾಟ ನಡೆಸಲಾಗುವುದು ಕಾಫಿ ಬೆಳೆಗಾರರು ಈ ದಿಕ್ಕಿನಲ್ಲಿ ಹೋರಾಟಕ್ಕೆ ಸಿದ್ದರಾಗಬೇಕು ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ರೈತರತ್ನ ಕುರುಬೂರು ಶಾಂತಕುಮಾರ್ ಒತ್ತಾಯಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಕೃಷಿ ಎಂಬುದು ಮಾನ್ಸೂನ್ ಮಾರುತಗಳ ನಡುವಿನ ಜೂಜಾಟವಾಗಿದೆ. ಆದ್ದರಿಂದ ಸಕಾಲಕ್ಕೆ ರೈತರಿಗೆ ಸಾಲ ಕಟ್ಟಲು ಸಾಧ್ಯವಾಗುವುದಿಲ್ಲ ಎಂಬುದನ್ನು ಅರಿಯಬೇಕು. ರೈತರ ಸಾಲ ವಸೂಲಿಗಾಗಿ ಕೃಷಿ ಭೂಮಿ ಜಪ್ತಿ ಮಾಡಿ ಸರ್ಪೈಸಿ ಕಾಯ್ದೆಯಲ್ಲಿ ಆನ್‌ಲೈನ್ ಮಾರಾಟ ಮಾಡುವುದನ್ನು ತಪ್ಪಿಸಬೇಕು ಈ ಕಾಯ್ದೆ ರದ್ದು ಪಡಿಸಬೇಕು ಎಂದು ಕರ್ನಾಟಕದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮುಖ್ಯಸ್ಥರ ಜೊತೆ ಸಭೆ ನಡೆಸಿದ್ದೇವೆ. ರಾಜ್ಯ ಬ್ಯಾಂಕಗಳ ಸಮನ್ವಯ ಸಮಿತಿ ಅಧ್ಯಕ್ಷರು ಮುಖ್ಯ ಕಾರ್ಯದರ್ಶಿ ಶಾಲಿನಿ ರಾಜನಿಶ್ ಅವರಿಗೆ ಒತ್ತಾಯಿಸಲಾಗಿದೆ.ಅಡಿಕೆ ಬೆಳೆಗೆ ಎಲೆ ಚುಕ್ಕಿ ರೋಗ, ಹಳದಿ ರೋಗ ಹಿನ್ನೆಲೆಯಲ್ಲಿ ಬೆಳೆ ನಷ್ಟ ಅನುಭವಿಸಿದ ರೈತರಿಗೆ ವಿಶೇಷ ಪ್ಯಾಕೇಜ್ ಘೂಷಣೆ ಮಾಡಬೇಕು. ಬದುಕಿಗಾಗಿ ಕೃಷಿ ಮಾಡುತ್ತಿರುವ ರೈತರಿಗೆ ಜಂಟಿ ಸರ್ವೆ ನಡೆಸಿ ರೈತರಿಗೆ ಮಾಹಿತಿ ಕೊಟ್ಟು ಗ್ರಾಮ ಸಭೆಗಳ ಮೂಲಕ ಕೃಷಿ ಭೂಮಿ ಹಕ್ಕು ಪತ್ರ ನೀಡಬೇಕು ಎಂದು ಶೃಂಗೇರಿ ಕ್ಷೇತ್ರದ ರೈತ ಘಟಕ ಅಧ್ಯಕ್ಷ ನವೀನ್ ಕರುವಾನೆ ಒತ್ತಾಯಿಸಿದ್ದಾರೆ.ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಉಪಾಧ್ಯಕ್ಷ ಎನ್.ಎಚ್. ಶಿವಕುಮಾರ್ ಜಿಲ್ಲಾ ಕಾರ್ಯದರ್ಶಿ ಬರಡನಪುರ ನಾಗರಾಜ್ ಮುಂತಾದವರಿದ್ದರು.