ಹಲಗೂರು:
ಗುಂಡಾಪುರದ ಬೆಟ್ಟದರಸಮ್ಮನ ಮೊದಲನೆಯ ಜಾತ್ರಾ ಮಹೋತ್ಸವದ ದಿನವಾದ ಬುಧವಾರ ಅಪಾರ ಭಕ್ತಾದಿಗಳು ಪಾಲ್ಗೊಂಡು ದೇವರಿಗೆ ತಮ್ಮಿಷ್ಟಾರ್ಥಕ್ಕಾಗಿ ಪ್ರಾರ್ಥಿಸಿ ಭಕ್ತಿ ಭಾವ ಸಮರ್ಪಿಸಿದರು.ಗ್ರಾಮದ ಮಧ್ಯಭಾಗದಲ್ಲಿರುವ ಕರಗದ ಮನೆಯಲ್ಲಿ ಬುಧವಾರ ಸಾಯಂಕಾಲ ಕರಗಕ್ಕೆ ಕನಕಂಬರ, ಕಾಕಡ, ಗುಲಾಬಿ ಸೇರಿದಂತೆ ವಿವಿಧ ಪುಷ್ಪಗಳಿಂದ ಅಲಂಕರಿಸಿ ವಿಶೇಷವಾಗಿ ಪೂಜೆ ಪುನಸ್ಕಾರಗಳನ್ನು ನಡೆಸಲಾಯಿತು.
ಸಂಪ್ರದಾಯದಂತೆ ಬುಧವಾರ ಸಂಜೆ ಅರ್ಚಕರು ಹೆಬ್ಬಾರೆಗೆ ಪೂಜೆ ನಡೆಸಿದ ನಂತರ ದೇವರಗುಡ್ಡರು ಮನೆಗಳಿಗೆ ತೇರಳಿ ಅಚಂದ ಪಡೆದ ನಂತರ ದೇವರ ಕರಗವನ್ನು ಹೊತ್ತು ಒರಟಾಗ ಛತ್ರಿ ಚಾಮರಗಳನ್ನು ಬೀಸುತ್ತ ಜೋಡಿ ಬಸವನ ಜೊತೆಯಲ್ಲಿ ಹರಕೆ ಒತ್ತ ಬಾಯಿ ಬೀಗದವರು ಜೊತೆಗೂಡಿದರು.ನಂತರ ಬೆಟ್ಟದ ತಪ್ಪಲನಲ್ಲಿರುವ ಬೆಟ್ಟದರಸಮ್ಮನ ಸನ್ನಿಧಿಗೆ ದೇವರ ಕರಗವನ್ನು ಮೆರವಣಿಗೆ ಮುಖಾಂತರ ಅಪಾರ ಭಕ್ತಾದಿಗಳ ಜೊತೆಯಲ್ಲಿ ಕರೆತರಲಾಯಿತು. ಪೂಜೆ ಪುನಸ್ಕಾರಗಳು ನಡೆದ ನಂತರ ಭಕ್ತರು ದೇವರ ದರ್ಶನ ಪಡೆದು ಪುನೀತರಾದರು.
ದೇವಸ್ಥಾನಕ್ಕೆ ಬಂದ ಭಕ್ತರಿಗೆ ಹರಕೆ ಹೊತ್ತವರು ಉಚಿತವಾಗಿ ನೀರಿನ ಬಾಟಲ್ ಹಾಗೂ ಎತ್ತಿನಗಾಡಿಯಲ್ಲಿ ಕೋಸಂಬರಿ ಪಾನಕ ಮಜ್ಜಿಗೆಯನ್ನು ಮಾಡಿಕೊಂಡು ಭಕ್ತರಿಗೆ ವಿತರಿಸಿದರು.
ಈ ವೇಳೆ ನಂದಿಪುರದ ಕುಮಾರ್ ಮಾತನಾಡಿ, ಮೊದಲನೇ ಪೂಜೆಯಲ್ಲಿ ಅಪಾರ ಭಕ್ತಾದಿಗಳು, ಹರಕೆ ಹೊತ್ತ ಬಾಯಿ ಬೀಗದವರು ಪಾಲ್ಗೊಂಡಿದ್ದಾರೆ. ಮಾ.10ರ ಮಂಗಳವಾರ ದೊಡ್ಡ ಜಾತ್ರೆಯಲ್ಲಿ ಹೆಚ್ಚಿನ ಭಕ್ತಾದಿಗಳು ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗುವಂತೆ ಮನವಿ ಮಾಡಿದರು.
ಉಪತಹಸೀಲ್ದಾರ್ ನಟರಾಜ್ ಮಾತನಾಡಿ, ಜಾತ್ರೆಗೆ ಬರುವ ಭಕ್ತಾದಿಗಳಿಗೆ ಯಾವುದೇ ತೊಂದರೆ ಹಾಗದಂತೆ ಅಗತ್ಯ ಸೌಲಭ್ಯ ಕಲ್ಪಿಸಲಾಗುತ್ತಿದೆ ಎಂದರು. ಮುಂಜಾಗ್ರತೆ ಕ್ರಮವಾಗಿ ಪಿಎಸ್ ಐ ಲೋಕೇಶ್ ಬಿಗಿ ಬಂದೋ ಬಸ್ತ್ ಮಾಡಲಾಗಿದೆ.ನಾಲ್ಕು ತಿಂಗಳ ಉಚಿತ ತರಬೇತಿ ಶಿಬಿರಕೆ.ಆರ್.ಪೇಟೆ:ಬೆಂಗಳೂರಿನ ಅಕ್ಕ ಐಎಎಸ್ ಅಕಾಡೆಮಿ, ದಿ ಸಿಟಿಜನ್ಸ್ ಆಫ್ ಇಂಡಿಯಾ ಕ್ವಾಲಿಟಿ ಎಜುಕೇಷನ್ ಟ್ರಸ್ಟ್ ಮತ್ತು ಪಟ್ಟಣದ ಕಲ್ಪತರು ಪ್ರಥಮ ದರ್ಜೆ ಕಾಲೇಜು ಆಶ್ರಯದಲ್ಲಿ ಕೆಎಎಸ್, ಪಿಎಸ್ಐ, ಪಿಡಿಒ, ಎಫ್‌ಡಿಎ, ಎಸ್‌ಡಿಎ, ಪಿಸಿ ಮತ್ತು ಟಿಇಟಿ ಯಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ನಾಲ್ಕು ತಿಂಗಳ ಉಚಿತ ತರಬೇತಿ ಶಿಬಿರ ಆಯೋಜಿಸಲಾಗಿದೆ ಎಂದು ಸಂಸ್ಥೆ ಅಧ್ಯಕ್ಷ ವಿಠಲಾಪುರ ಜಯರಾಂ ತಿಳಿಸಿದ್ದಾರೆ.
ಸುಮಾರು 10 ವರ್ಷ ತರಬೇತಿ ನೀಡಿದ ಅನುಭವವುಳ್ಳ ಪರಿಣಿತ ಸಂಪನ್ಮೂಲ ವ್ಯಕ್ತಿಗಳಿಂದ ಆನ್‌ಲೈನ್ ಮತ್ತು ಆಫ್ ಲೈನ್ ಮೂಲಕ ತರಬೇತಿ ನೀಡಲಾಗುವುದು. ತರಬೇತಿ ಅಗತ್ಯವಾದ ಅಭ್ಯರ್ಥಿಗಳನ್ನು ಮಾ.8ರ ಪ್ರವೇಶ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುವುದು. ತರಬೇತಿ ಪಡೆಯಲು ಇಚ್ಚಿಸುವ ಅಭ್ಯರ್ಥಿಗಳು ನಿಗಧಿತ ದಿನಾಂಕದೊಳಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವಂತೆ ಸೂಚಿಸಿರುವ ವಿಠಲಾಪುರ ಜಯರಾಂ ಹೆಚ್ಚಿನ ಮಾಹಿತಿಗಾಗಿ ಮೊ.984455030, ಮೊ.7349279021, ಮೊ.9624992576 ಅಥವಾ ಪಟ್ಟಣದ ಕಲ್ಪತರು ಕಾಲೇಜಿನ ಕಛೇರಿಯನ್ನು ಸಂಪರ್ಕಿಸುವಂತೆ ಕೋರಿದ್ದಾರೆ.