ಋಷ್ಯಮುಖ ಪರ್ವತದ ಬಾರೆಹಣ್ಣುಗಳನ್ನು ಅಯೋಧ್ಯೆಗೆಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಗೆ ಸಮರ್ಪಣೆ

| Published : Jan 22 2024, 02:18 AM IST

ಋಷ್ಯಮುಖ ಪರ್ವತದ ಬಾರೆಹಣ್ಣುಗಳನ್ನು ಅಯೋಧ್ಯೆಗೆಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಗೆ ಸಮರ್ಪಣೆ
Share this Article
  • FB
  • TW
  • Linkdin
  • Email

ಸಾರಾಂಶ

ಅಂಜನಾದ್ರಿಯ ಸನಿಹದಲ್ಲಿರುವ ಋಷ್ಯಮುಖ ಪರ್ವತದಲ್ಲಿ ಶಬರಿ ರಾಮನಿಗೆ ಬಾರೆಹಣ್ಣು ನೀಡಿದ್ದರು ಎಂಬ ಪ್ರತೀತಿ ಇದೆ. ಈ ಹಿನ್ನೆಲೆಯಲ್ಲಿ ಬಾರೆಹಣ್ಣುಗಳನ್ನು ಅಯೋಧ್ಯೆಯಲ್ಲಿ ಜ.22ರಂದು ರಾಮಮಂದಿರ ಉದ್ಘಾಟನೆ ಸಂದರ್ಭದಲ್ಲಿ ಸಮರ್ಪಿಸಬೇಕೆಂಬ ಕಾರಣಕ್ಕೆ ಸಚಿವರಿಗೆ ನೀಡಿದರು.

ಗಂಗಾವತಿ: ರಾಮನಿಗೆ ಶಬರಿಯು ಬಾರೆಹಣ್ಣು ನೀಡಿದ್ದ ಸ್ಥಳವಾದ ತಾಲೂಕಿನ ಋಷ್ಯಮುಖ ಪರ್ವತದಲ್ಲಿರುವ ಬಾರೆಹಣ್ಣುಗಳನ್ನು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ವಿಧಾನಪರಿಷತ್ ಮಾಜಿ ಸದಸ್ಯ ಎಚ್.ಆರ್. ಶ್ರೀನಾಥ ಸಮರ್ಪಿಸಿದರು.ತಾಲೂಕಿನ ಅಂಜನಾದ್ರಿಗೆ ಆಗಮಿಸಿದ್ದ ಸಚಿವೆ ಕರಂದ್ಲಾಜೆ ಬಾರೆಹಣ್ಣು ಸ್ವೀಕರಿಸಿದರು.ಅಂಜನಾದ್ರಿಯ ಸನಿಹದಲ್ಲಿರುವ ಋಷ್ಯಮುಖ ಪರ್ವತದಲ್ಲಿ ಶಬರಿ ರಾಮನಿಗೆ ಬಾರೆಹಣ್ಣು ನೀಡಿದ್ದರು ಎಂಬ ಪ್ರತೀತಿ ಇದೆ. ಈ ಹಿನ್ನೆಲೆಯಲ್ಲಿ ಬಾರೆಹಣ್ಣುಗಳನ್ನು ಅಯೋಧ್ಯೆಯಲ್ಲಿ ಜ.22ರಂದು ರಾಮಮಂದಿರ ಉದ್ಘಾಟನೆ ಸಂದರ್ಭದಲ್ಲಿ ಸಮರ್ಪಿಸಬೇಕೆಂಬ ಕಾರಣಕ್ಕೆ ಸಚಿವರಿಗೆ ನೀಡಿದರು.ಇದೇ ಸಂದರ್ಭದಲ್ಲಿ ಕಿಷ್ಕಿಂಧೆ ಅಂಜನಾದ್ರಿಗೆ ಶ್ರೀರಾಮಾಂಜನೇಯ ಕಾರಿಡಾರ್ ಎಂದು ಘೋಷಿಸಿ ₹500 ಕೋಟಿಯನ್ನು ಕೇಂದ್ರ ಸರ್ಕಾರ ನೀಡಬೇಕೆಂದು ಸಚಿವರಿಗೆ ಶ್ರೀನಾಥ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಸಂಸದ ಕರಡಿ ಸಂಗಣ್ಣ, ಮಾಜಿ ಶಾಸಕ ಪರಣ್ಣ ಮುನವಳ್ಳಿ ಇದ್ದರು.