ಸಾರಾಂಶ
ಮಂಗಳೂರು ಲೇಡಿಹಿಲ್‌ನಲ್ಲಿರುವ ಎಸ್. ಎಲ್. ಶೇಟ್ ಡೈಮಂಡ್ ಹೌಸ್‌ನ ಮಾಲೀಕ ಎಂ. ರವೀಂದ್ರ ಶೇಟ್ ಕುಟುಂಬಿಕರು ಕಾಸರಗೋಡು ಗುಡ್ಡೆ ಶ್ರೀ ಮಹಾಲಿಂಗೇಶ್ವರ ಕ್ಷೇತ್ರದ ಪಾರ್ವತಿ ದೇವಿ ಅಮ್ಮನವರಿಗೆ ಕೊಡುಗೆಯಾಗಿ ನೀಡಿದ ಸ್ವರ್ಣ ಮೂಗುತಿ ಸಮೇತ ರಜತ ಕವಚ ಸಮರ್ಪಣಾ ಸೇವಾ ಸಮಾರಂಭ ನೆರವೇರಿತು.
ಮಂಗಳೂರು: ನಮ್ಮ ಜೀವಿತ ಕಾಲದಲ್ಲಿ ದೇವತಾ ಕಾರ್‍ಯದಿಂದಲೇ ತೃಪ್ತಿ ಮತ್ತು ಆನಂದ ದೊರಕುವುದಲ್ಲದೇ ಬೇರೆ ಯಾವ ಕಾರ್‍ಯದಿಂದ ದೊರಕದು ಎಂದು ಎಡನೀರು ಮಠಾಧೀಶ ಶ್ರೀಸಚ್ಚಿದಾನಂದ ಭಾರತೀ ಸ್ವಾಮೀಜಿ ಹೇಳಿದರು.
ಅವರು ಮಂಗಳೂರು ಲೇಡಿಹಿಲ್‌ನಲ್ಲಿರುವ ಎಸ್. ಎಲ್. ಶೇಟ್ ಡೈಮಂಡ್ ಹೌಸ್‌ನ ಮಾಲೀಕ ಎಂ. ರವೀಂದ್ರ ಶೇಟ್ ಕುಟುಂಬಿಕರು ಕಾಸರಗೋಡು ಗುಡ್ಡೆ ಶ್ರೀ ಮಹಾಲಿಂಗೇಶ್ವರ ಕ್ಷೇತ್ರದ ಪಾರ್ವತಿ ದೇವಿ ಅಮ್ಮನವರಿಗೆ ಕೊಡುಗೆಯಾಗಿ ನೀಡಿದ ಸ್ವರ್ಣ ಮೂಗುತಿ ಸಮೇತ ರಜತ ಕವಚ ಸಮರ್ಪಣಾ ಸೇವಾ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.ಕಾಮತ್ ಮೆಡಿಕಲ್ ಸೆಂಟರ್‌ನ ಡಾ. ಅನಂತ ಕಾಮತ್ ಕಾಸರಗೋಡು ಅಧ್ಯಕ್ಷತೆ ವಹಿಸಿದ್ದರು.
ದೇವಳದ ಕಾರ್‍ಯನಿರ್ವಹಣಾಧಿಕಾರಿ ಜಗದೀಶ್ ಪ್ರಸಾದ್, ವಿಜಯಾ ಬ್ಯಾಂಕಿನ ನಿವೃತ್ತ ಪ್ರಬಂಧಕ ಅಮ್ಮು ರೈ ಚಟ್ಲಗುತ್ತು, ವಕೀಲ ಹರಿದಾಸ ಕೂಡ್ಲು ಮಹಾಬಲ ಶೆಟ್ಟಿ, ಕ್ಷೇತ್ರದ ಸುಧಾಕರ ಕೊಟೆ ಕುಂಜತ್ತಾಯ, ಶಾರದಾ ವಿದ್ಯಾಲಯದ ನಿರ್ದೇಶಕ ಸುಧಾಕರ ರಾವ್ ಪೇಜಾವರ, ಚಲನಚಿತ್ರ ನಟ ಕಾಸರಗೋಡು ಚಿನ್ನಾ, ಶಸ್ತ್ರಚಿಕಿತ್ಸಾ ತಜ್ಞ ಡಾ. ಕೆ.ಕೆ. ಶ್ಯಾನುಭಾಗ್, ಕೇರಳ ತಂತ್ರ ವಿದ್ಯಾಪೀಠದ ಮಲ್ಲಿಪ್ಪಳ್ಳ ಕೃಷ್ಣ ನಂಬೂದಿರಿ, ಪ್ರಮುಖರಾದ ಸಂಜೀವ ಶೆಟ್ಟಿ, ಶರತ್ ಶೇಟ್, ದೀಪ್ತಿ ಶೇಟ್, ಪ್ರಸಾದ್ ಶೇಟ್, ದಿವ್ಯಾ ಶೇಟ್, ಶಿವಾನಿ ಶೇಟ್, ವಿರಾಜ್ ಶೇಟ್ ಇದ್ದರು.ಸುಮಾರು ೩.೫ ಲಕ್ಷ ರು. ಮೌಲ್ಯದ ಆಭರಣಗಳನ್ನು ಶೇಟ್ ಕುಟುಂಬಿಕರು ಸಮರ್ಪಿಸಿದರು. ಸ್ಥಳೀಯ ಮಾತೃಮಂಡಳಿಯ ೬೦ ಮಂದಿಗೆ ದೇವಿಯ ಪ್ರಸಾದ ರೂಪವಾಗಿ ಸೀರೆ ವಿತರಿಸಲಾಯಿತು. ಕೂಡ್ಲು ವಿಠಲ ಶೆಟ್ಟಿ ಭಕ್ತಿ ಗೀತೆ ಹಾಡಿದರು. ಬಳಿಕ ಸಾರ್ವಜನಿಕ ಅನ್ನದಾನ ನೆರವೇರಿತು.