ಗದಗ: ಶಾಸಕ, ಹಿರಿಯ ಕಾಂಗ್ರೆಸ್ ನಾಯಕ ಎಚ್.ಕೆ. ಪಾಟೀಲ ಅವರಿಗೆ ಸಂಪುಟ ದರ್ಜೆ ಸ್ಥಾನ ನೀಡಬೇಕು ಎಂದು ಆಗ್ರಹಿಸಿ ಎಪಿಎಂಸಿ ಹಮಾಲರು, ಚಕ್ಕಡಿ ಸಂಘದ ಸದಸ್ಯರು ಗುರುವಾರ ನಗರದಲ್ಲಿ ಮೆರವಣಿಗೆ ನಡೆಸಿ ವೀರೇಶ್ವರ ಪುಣ್ಯಾಶ್ರಮದವರೆಗೆ ದೀಡ್ ನಮಸ್ಕಾರ ಹಾಕಿ ಒತ್ತಾಯಿಸಿದರು.
ಎಪಿಎಂಸಿ ಪ್ರಾಂಗಣದ ಹಮಾಲರ ವಿಶ್ರಾಂತಿ ಗೃಹದ ಸಭಾಂಗಣದಲ್ಲಿ ಡಾ. ಬಾಬಾಸಾಹೇಬ ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡಲಾಯಿತು. ಬಳಿಕ ಎಪಿಎಂಸಿ ಗೇಟ್‌ದಿಂದ ವೀರೇಶ್ವರ ಪುಣ್ಯಾಶ್ರಮದ ವರೆಗೆ ಸದಸ್ಯರು ದೀಡ್ ನಮಸ್ಕಾರ ಹಾಕುತ್ತಾ ಸಾಗಿದರು.ಮೆರವಣಿಗೆಯಲ್ಲಿ ಹಲಗೆ ಬಾರಿಸಿ, ಘೋಷಣೆ ಕೂಗುತ್ತ ಹೆಜ್ಜೆ ಹಾಕಿದರು. ಬಡವರಿಗೆ, ಹಿಂದುಳಿದವರಿಗೆ, ಹಮಾಲರಿಗೆ, ಶ್ರಮಿಕರಿಗೆ ಸ್ಪಂದಿಸಿದ ನಾಡಿನ ಹಿರಿಯ, ಮುತ್ಸದ್ಧಿ ರಾಜಕಾರಣಿ ಎಚ್.ಕೆ. ಪಾಟೀಲ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂಬ ಘೋಷಣೆಯುಳ್ಳ ಭಾವಚಿತ್ರದ ಫಲಕಗಳನ್ನು ಪ್ರದರ್ಶಿಸಲಾಯಿತು.
ಕಮಲವ್ವ ಚಲವಾದಿ, ಕನಕವ್ವ ದಾಸರ, ಯಲ್ಲವ್ವ ಚಲವಾದಿ, ರಾಮಚಂದ್ರ ಹರಿಜನ, ಹನಮವ್ವ ತುಮ್ಮರಮಟ್ಟಿ, ಸುಮಾ ಆದೋನಿ, ಶೇಖವ್ವ ಸಂಕಣ್ಣವರ, ಸರೋಜವ್ವ ಚಲವಾದಿ, ಈರಣ್ಣ ಮುಧೋಳ, ಶಶಿಕಲಾ ಚಲವಾದಿ ದೀಡ್ ನಮಸ್ಕಾರ ಹಾಕಿ ಎಚ್.ಕೆ. ಪಾಟೀಲ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿದರು.ರಾಜ್ಯ ಹಮಾಲರ ಒಕ್ಕೂಟದ ರಾಜ್ಯ ಅಧ್ಯಕ್ಷ ಅಯ್ಯಪ್ಪ ನಾಯ್ಕರ್, ಚಕ್ಕಡಿ ಸಂಘದ ಅಧ್ಯಕ್ಷ ಆದಪ್ಪ ಮಾರೆಪ್ಪನವರ, ಉಪಾಧ್ಯಕ್ಷ ಮುಕ್ತುಮ್‌ಸಾಬ ನಾಗನೂರ, ಖಜಾಂಚಿ ಶಂಕ್ರಪ್ಪ ಯರಗುಡಿ, ಗೋವಿಂದಪ್ಪ ಮುಂಡರಗಿ, ಇಮಾಮಹುಸೇನ ರೋಣದ, ಶಿವು ಬಳ್ಳಾರಿ, ಶ್ರೀಕಾಂತ ವಹಿಸಿದ್ದರು. ವಿರೂಪಾಕ್ಷಪ್ಪ ಪಾಲ್ತಿ, ರಾಜೇಸಾಬ ಕಣವಿ, ಮಹ್ಮದ್‌ಸಾಬ್ ವಾಲೀಕಾರ, ಶೇಖಪ್ಪ ಮುಳವಾಡ, ಹುಸೇನಸಾಬ ವಡವಿ, ಮಲ್ಲವ್ವ ಸಣ್ಣಕ್ಕಿ, ಫಕ್ರುಸಾಬ ಘಟದ, ದೇವರಾಜ ಬಿನ್ನಾಳ, ಮಾರುತಿ ರಾಲದೋಡಿ, ಬಸವರಾಜ ಚಲವಾದಿ, ಬಸವರಾಜ ಸೂಡಿ, ಬಸವರಾಜ ಶಗಣಿ, ಮಾಯಪ್ಪ ಬೆಣ್ಣಿ, ಸಿದ್ಧಪ್ಪ ಮುಧೋಳ, ದಾವಲಸಾಬ ಬೇಲೇರಿ ಸೇರಿದಂತೆ 200ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು.
ಜಿ.ಎಸ್. ಪಾಟೀಲರಿಗೆ ಸಚಿವ ಸ್ಥಾನಕ್ಕಾಗಿ ದೇವರ ಮೊರೆ
ನರೇಗಲ್ಲ: ಶಾಸಕ ಜಿ.ಎಸ್. ಪಾಟೀಲ ಅವರಿಗೆ ಸಚಿವ ಸ್ಥಾನ ಸಿಗಬೇಕೆಂದು ಪ್ರಾರ್ಥಿಸಿ ಸಮೀಪದ ಹಾಲಕೆರೆ ಗ್ರಾಮದಲ್ಲಿ ಗುರುವಾರ ಕಾಂಗ್ರೆಸ್ ಕಾರ್ಯಕರ್ತರು ದೀಡ್ ನಮಸ್ಕಾರ ಹಾಕಿದರು.ಗ್ರಾಮದ ಪಾದಗಟ್ಟಿಯ ಬಸವೇಶ್ವರ ಮೂರ್ತಿಗೆ ಪೂಜೆ ಸಲ್ಲಿಸುವ ಮುಖಾಂತರ ಅನ್ನದಾನೇಶ್ವರ ದೇವಸ್ಥಾನದವರೆಗೆ ದೀಡ್ ನಮಸ್ಕಾರ ಹಾಕಿ ಹರಕೆ ತೀರಿಸಿದರು.ಈ ವೇಳೆ ಹಾಲಕೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಎ.ಸಿ. ಪಾಟೀಲ ಮಾತನಾಡಿದರು. ಗಿರೀಶ(ಆನಂದ) ಹಳ್ಳಿ, ಬಸವರಾಜ ಪೂಜಾರ, ಅಪ್ಪಣ್ಣ ಹಳ್ಳಿ, ಪರಶುರಾಮ ತಲೇಖಾನ್, ಅಭಿಷೇಕ ಕುಸಮ್ಮನವರ, ಅಂದಪ್ಪ ಕುರಿ, ಬಸವರಾಜ ಹುಲ್ಯಾಳ, ಭೀಮಪ್ಪ ಖ್ಯಾರ, ಮುತ್ತಪ್ಪ ಪೂಜಾರ, ಮುತ್ತಪ್ಪ ಖ್ಯಾರ, ದುರುಗಪ್ಪ ತಲೇಖಾನ, ಹುಲಗಪ್ಪ ಬಂಗಾಳಿಗಿಡದ ಸೇರಿದಂತೆ ಇತರರು ದೀಡ್ ನಮಸ್ಕಾರ ಸೇವೆ ಸಲ್ಲಿಸಿದರು.
ಸೋಪ್ಪಯ್ಯನವರ ಸೊಪ್ಪಿಹಿರೇಮಠ, ವೀರಣ್ಣ ಹಳ್ಳಿ, ಗಿರೀಶಗೌಡ ಮುಲ್ಕಿಪಾಟೀಲ, ಮಹೇಶ ಕುರಿ, ನರೇಗಲ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶರಣಪ್ಪ ಬೇಟಗೇರಿ, ಹನುಮಪ್ಪ ತೊಂಡಿಹಾಳ, ತಿಮ್ಮರೆಡ್ಡಿಪ್ಪ ಹೊಸಮನಿ, ಶರಣಪ್ಪ ಪೂಜಾರ, ಬಾಳಪ್ಪ ಬುರಡಿ, ಬಸಪ್ಪ ಮೂಲಿಮನಿ, ಮಹಾಂತೇಶ ಪ್ರಭಣ್ಣವರ, ಪ್ರವೀಣ ಬೈರಗೊಂಡ, ನವೀನ ಮಾದಿನೂರ, ಅಂದೇಶ ಶಿರೂರು, ವೀರಭದ್ರಪ್ಪ ನವಲಗುಂದ, ಮಂಜುನಾಥ,ಹಳ್ಳಿ, ಮಂಜುನಾಥ ನವಲಗುಂದ, ಆನಂದ ಕೋಗಿಲೆ, ಭೀಮಪ್ಪ ಚಲವಾದಿ ಮುಂತಾದವರು ಇದ್ದರು.