ರಾಷ್ಟ್ರೀಯತೆಯ ಜಾಗೃತಿ ಮೂಡಿಸಿದ ಪಂ.ದೀನದಯಾಳರು: ಡಾ.ವೀರಣ್ಣ ಚರಂತಿಮಠ

| Published : Feb 12 2024, 01:31 AM IST

ರಾಷ್ಟ್ರೀಯತೆಯ ಜಾಗೃತಿ ಮೂಡಿಸಿದ ಪಂ.ದೀನದಯಾಳರು: ಡಾ.ವೀರಣ್ಣ ಚರಂತಿಮಠ
Share this Article
  • FB
  • TW
  • Linkdin
  • Email

ಸಾರಾಂಶ

ಬಾಗಲಕೋಟೆ: ಪಂ.ದೀನದಯಾಳ್ ಉಪಾಧ್ಯಾಯರು ಪರಂಪರೆ, ಆಧುನಿಕತೆ ಬೆಸೆದ ದಿವ್ಯ ಚೇತನವಾಗಿದ್ದರು. ಪತ್ರಿಕೆಯಿಂದ ರಾಷ್ಟ್ರೀಯತೆಯ ಜಾಗೃತಿ ಮೂಡಿಸಿದರು ಎಂದು ಮಾಜಿ ಶಾಸಕ ಡಾ. ವೀರಣ್ಣ ಚರಂತಿಮಠ ಹೇಳಿದರು. ನಗರದ ಶಿವಾನಂದ ಜಿನ್ ನಲ್ಲಿರುವ ಬಿಜೆಪಿ ಕಾರ್ಯಾಲಯದಲ್ಲಿ ಬಿಜೆಪಿ ನಗರ ಮಂಡಲ ವತಿಯಿಂದ ಹಮ್ಮಿಕೊಂಡ ಭಾರತೀಯ ಜನತಾ ಪಕ್ಷದ ಪ್ರೇರಣಾ ಶಕ್ತಿ ಪಂಡಿತ್ ದೀನದಯಾಳ್‌ ಉಪಾಧ್ಯಾಯನವರ ಬಲಿದಾನ ದಿವಸ್‌ ಕಾರ್ಯಕ್ರಮದಲ್ಲಿ ಉಪಾಧ್ಯಾಯರ ಭಾವಚಿತ್ರಕ್ಕೆ ಪುಷ್ಪಾಂಜಲಿ ಸಲ್ಲಿಸುವ ಮೂಲಕ ಗೌರವ ನಮನ ಸಲ್ಲಿಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಪಂ.ದೀನದಯಾಳ್ ಉಪಾಧ್ಯಾಯರು ಪರಂಪರೆ, ಆಧುನಿಕತೆ ಬೆಸೆದ ದಿವ್ಯ ಚೇತನವಾಗಿದ್ದರು. ಪತ್ರಿಕೆಯಿಂದ ರಾಷ್ಟ್ರೀಯತೆಯ ಜಾಗೃತಿ ಮೂಡಿಸಿದರು ಎಂದು ಮಾಜಿ ಶಾಸಕ ಡಾ. ವೀರಣ್ಣ ಚರಂತಿಮಠ ಹೇಳಿದರು.

ನಗರದ ಶಿವಾನಂದ ಜಿನ್ ನಲ್ಲಿರುವ ಬಿಜೆಪಿ ಕಾರ್ಯಾಲಯದಲ್ಲಿ ಬಿಜೆಪಿ ನಗರ ಮಂಡಲ ವತಿಯಿಂದ ಹಮ್ಮಿಕೊಂಡ ಭಾರತೀಯ ಜನತಾ ಪಕ್ಷದ ಪ್ರೇರಣಾ ಶಕ್ತಿ ಪಂಡಿತ್ ದೀನದಯಾಳ್‌ ಉಪಾಧ್ಯಾಯನವರ ಬಲಿದಾನ ದಿವಸ್‌ ಕಾರ್ಯಕ್ರಮದಲ್ಲಿ ಉಪಾಧ್ಯಾಯರ ಭಾವಚಿತ್ರಕ್ಕೆ ಪುಷ್ಪಾಂಜಲಿ ಸಲ್ಲಿಸುವ ಮೂಲಕ ಗೌರವ ನಮನ ಸಲ್ಲಿಸಿ ಮಾತನಾಡಿದರು.

ಭಾರತೀಯ ಜನತಾ ಪಕ್ಷ ಇದೀಗ ಭಾರತದ ಹೆಚ್ಚಿನ ರಾಜ್ಯಗಳಲ್ಲಿ ಜನ್ನಮನ್ನಣೆಗೆ ಪಾತ್ರವಾಗಿ ಅಧಿಕಾರದಲ್ಲಿದೆ. ಅದರ ಜನಬೆಂಬಲದ ತಳಹದಿ ಇನ್ನೂ ವಿಸ್ತಾರವಾಗುತ್ತಲಿದೆ. ಪಕ್ಷದ ವಿಚಾರಧಾರೆಗಳು, ಪ್ರತಿಪಾದನೆಗಳು, ತತ್ವ ಸಿದ್ಧಾಂತಗಳು ಜನಸಮೂಹಕ್ಕೆ ಒಪ್ಪಿತವಾಗಿರುವುದೇ ಇದಕ್ಕೆ ಕಾರಣ. ಈ ಯಶಸ್ಸಿನ ಹಿಂದಿನ ಮರ್ಮವೇನು ಎಂದು ಹುಡುಕುತ್ತ ಹೋದರೆ ಅದು ನಮಗೆ ಪಂಡಿತ ದೀನದಯಾಳ್ ಉಪಾಧ್ಯಾಯರು ಹಾಕಿದ ತಾತ್ವಿಕ ಪ್ರತಿಪಾದನೆಗಳೇ ಕಾರಣವಾಗಿವೆ.

ಪತ್ರಿಕೆಯಿಂದ ರಾಷ್ಟ್ರೀಯತೆಯ ಜಾಗೃತಿ ಮೂಡಿಸಿದರು. ಉತ್ತರ ಪ್ರದೇಶದಲ್ಲಿ ರಾಷ್ಟ್ರಧರ್ಮ ಪ್ರಕಾಶನ ಸ್ಥಾಪಿಸಿದರು. ಆ ಮೂಲಕ ರಾಷ್ಟ್ರಧರ್ಮ ಎಂಬ ಮಾಸ ಪತ್ರಿಕೆ, ಪಾಂಚಜನ್ಯ ಎಂಬ ವಾರ ಪತ್ರಿಕೆ ಹಾಗೂ ಸ್ವದೇಶಿ ಎಂಬ ದಿನಪತ್ರಿಕೆಗಳು ಹೊರಬರಲು ಕಾರಣರಾದರು ಎಂದು ಅಭಿಪ್ರಾಯಪಟ್ಟರು.

ಸುಮಾರು 15 ವರ್ಷ ಭಾರತೀಯ ಜನಸಂಘದ ಪ್ರಧಾನ ಕಾರ್ಯದರ್ಶಿಯಾಗಿದ್ದ ಅವಧಿಯಲ್ಲೂ ಅವರು ತೆಗೆದುಕೊಂಡ ಕಠಿಣ ನಿರ್ಧಾರಗಳಿಗೆ ಸಾಕಷ್ಟು ಉದಾಹರಣೆಗಳು ಸಿಗುತ್ತವೆ. ಅವರು ವಿಕೇಂದ್ರೀಕರಣ ವ್ಯವಸ್ಥೆಯಲ್ಲಿ ನಂಬಿಕೆ ಹೊಂದಿದ್ದರು. ಅಖಂಡ ಭಾರತದ ವೈವಿಧ್ಯತೆ ಉಳಿಯಬೇಕೆಂದರೆ ವಿಕೇಂದ್ರೀಕೃತ ರಾಜಕೀಯ ವ್ಯವಸ್ಥೆ ಅತ್ಯಗತ್ಯ ಎಂಬುದು ಅವರ ಸ್ಪಷ್ಟ ನಿಲುವಾಗಿತ್ತು, ಇಂದು ಅವರ ಬಲಿದಾನ ದಿನವನ್ನು ಸಮರ್ಪಣಾ ದಿನವನ್ನಾಗಿ ಬಿಜೆಪಿಯಿಂದ ಆಚರಿಸುವ ಮೂಲಕ ಅವರ ಸ್ಮರಣೆ ಮಾಡಲಾಗುತ್ತಿದೆ ಎಂದರು.

ಬಸವರಾಜ ಯಂಕಂಚಿ, ಜಿಲ್ಲಾ ಉಪಾಧ್ಯಕ್ಷ ರಾಜು ರೆವಣಕರ, ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ, ಸದಾನಂದ ನಾರಾ, ಸತ್ಯನಾರಾಯಣ ಹೆಮಾದ್ರಿ, ಕೇಶವ ಭಜಂತ್ರಿ, ಶಿವಾನಂದ ಟವಳಿ, ಯಲ್ಲಪ್ಪ ನಾರಾಯಣಿ, ಬಸವರಾಜ ಅವರಾದಿ, ಅಂಬಾಜಿ ಜೊಷಿ, ಕಾಂತು ಖಾತೆದಾರ, ಮಲ್ಲು ಗಬ್ಬೂರ, ರವಿ ನಾಯಕ, ಉಮೇಶ ಹಂಚಿನಾಳ, ಸಾಗರ ಬಂಡಿ ಸೇರಿದಂತೆ ಅನೇಕರು ಇದ್ದರು.