ಸಾರಾಂಶ
ಕನ್ನಡಪ್ರಭ ವಾರ್ತೆ ಮಣಿಪಾಲ
ಮಾಹೆ ಮಣಿಪಾಲವು ಗ್ರಾಮೀಣ ಮಹಿಳಾ ಉದ್ಯಮಿಗಳ ಪ್ರತಿಭೆಯನ್ನು ಪ್ರದರ್ಶಿಸುವ ಮತ್ತು ಪ್ರೋತ್ಸಾಹಿಸುವ ದೀಪಾವಳಿ ಪ್ರದರ್ಶನ- ದೀಪ ಸಂಜೀವಿನಿಯನ್ನು ಆಯೋಜಿಸಿದೆ.ಕೆಎಂಸಿ ಕ್ವಾಡ್ರಾಂಗಲ್‌ನಲ್ಲಿ ಉಡುಪಿ ಜಿ.ಪಂ., ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಶನ್, ಅಮೆರಿಕಾದ ದ್ಯೋತ್ ಫೌಂಡೇಶನ್ ಮತ್ತು ಚೆನ್ನೈನ ಡಾ. ಧರ್ಮಬಲ ನಮಶಿವಾಯಂ ಟ್ರಸ್ಟ್‌ಗಳ ಸಹಯೋಗದಲ್ಲಿ ಮಾಹೆಯ ಮಣಿಪಾಲ ಸ್ಕೂಲ್ ಆಫ್ ಕಾಮರ್ಸ್ ಆ್ಯಂಡ್ ಎಕಾನಾಮಿಕ್ಸ್ (ಎಂಎಸ್‌ಸಿಇ) ಈ ಪ್ರದರ್ಶನವನ್ನು ಆಯೋಜಿಸಿದೆ.ಈ ಪ್ರದರ್ಶನವನ್ನು ಮಾಹೆಯ ಸಹಕುಲಾಧಿಪತಿ ಡಾ. ಎಚ್.ಎಸ್.ಬಲ್ಲಾಳ್ ಮತ್ತು ಇಂದಿರಾ ಎಸ್. ಬಲ್ಲಾಳ್ ಉದ್ಘಾಟಿಸಿದರು. ಸಮಾರಂಭದಲ್ಲಿ ಜಿ.ಪಂ. ಯೋಜನಾ ನಿರ್ದೇಶಕ ವಿಜಯ ಕುಮಾರ್, ಎಂಎಸ್‌ಸಿಇ ಸಹಾಯಕ ನಿರ್ದೇಶಕ ಡಾ. ವಿಕ್ರಮ್ ಬಾಳಿಗ, ಜಿ.ಪಂ. ಸಂಜೀವಿನಿಯ ಸಂಯೋಜಕರಾದ ಅವಿನಾಶ್ ಮತ್ತು ಸವಿತಾ ಮತ್ತಿತರರು ಗಣ್ಯರು ಉಪಸ್ಥಿತರಿದ್ದರು.ಡಾ. ಬಲ್ಲಾಳ್ ದಂಪತಿ, ಈ ಮಹಿಳೆಯರ ಉದ್ಯಮಶೀಲತಾ ಮನೋಭಾವವನ್ನು ಮತ್ತು ಅವರ ಪ್ರತಿಭೆ ಮತ್ತು ಉತ್ಪನ್ನಗಳನ್ನು ವ್ಯಾಪಕ ಪ್ರೇಕ್ಷಕರಿಗೆ ಪ್ರದರ್ಶಿಸಲು ವೇದಿಕೆಯನ್ನು ಒದಗಿಸುವಲ್ಲಿ ಎಂಎಸ್‌ಸಿಇ ಪ್ರಯತ್ನವನ್ನು ಶ್ಲಾಘಿಸಿದರು.ಕಾರ್ಯಕ್ರಮದ ಸಂಯೋಜಕರಾದ ಎಂಎಸ್‌ಸಿಇನ ವಾಣಿ ಮತ್ತು ಮೇಘಾ ಮತ್ತು ಮಾಹೆಯ ಮುಖ್ಯ ವಾರ್ಡನ್ ಮಂಜುನಾಥ್ ಪೈ, ಕ್ಯಾಂಪಸ್ ಸೇಪ್ಟಿ ಮುಖ್ಯಸ್ಥ ರಾಘವೇಂದ್ರ ಎಂ.ಕೆ., ಎಂಎಸ್‌ಸಿಇ ಸಹಾಯಕ ನಿರ್ದೇಶಕ ಸುಬ್ರಹ್ಮಣ್ಯ ಕುಮಾರ್ ಎನ್., ಕಚೇರಿಯ ಸಹಾಯಕ ವ್ಯವಸ್ಥಾಪಕಿ ಹಿಲ್ಡಾ ಕಾರ್ನೆಲಿಯೊ ಮತ್ತು ಆಸರೆಯ ಜೈವಿಠಲ್ ಉಪಸ್ಥಿತರಿದ್ದರು.