ನಾವೆಲ್ಲರೂ ಬೆಳಕಿನ ಹಬ್ಬ ದೀಪಾವಳಿಯನ್ನು ವಿಜೃಂಭಣೆಯಿಂದ ಆಚರಿಸುತ್ತಿದ್ದು, ಕೆಲವೊಂದು ಅಶಕ್ತ ಕುಟುಂಬಗಳಿಗೆ ಸಾಧ್ಯವಾಗುತ್ತಿಲ್ಲ, ಅಶಕ್ತ ಕುಟುಂಬದೊಂದಿಗೆ ದೀಪಾವಳಿ ಆಚರಿಸುತ್ತಿರುವ ಬಿರುವೆರ್ ಕುಡ್ಲ ದ ಕಾರ್ಯ ಶ್ಲಾಘನೀಯವೆಂದು ಕಸ್ಟಮ್ಸ್ ನ ನಿವೃತ್ತ ಅಧಿಕಾರಿ ಎಚ್ ಸತೀಶ್ ಕುಮಾರ್ ಹೇಳಿದರು. ಬಿರುವೆರ್ ಕುಡ್ಲ (ರಿ.) ಮುಲ್ಕಿ ಘಟಕದ ವತಿಯಿಂದ ಮನೆ ಮನೆ ದೀಪಾವಳಿ ಕಾರ್ಯಕ್ರಮದಲ್ಲಿ ಅಶಕ್ತ 3 ಕುಟುಂಬಗಳಿಗೆ ದಿನಸಿ ಸಾಮಗ್ರಿ

ಮೂಲ್ಕಿ: ನಾವೆಲ್ಲರೂ ಬೆಳಕಿನ ಹಬ್ಬ ದೀಪಾವಳಿಯನ್ನು ವಿಜೃಂಭಣೆಯಿಂದ ಆಚರಿಸುತ್ತಿದ್ದು, ಕೆಲವೊಂದು ಅಶಕ್ತ ಕುಟುಂಬಗಳಿಗೆ ಸಾಧ್ಯವಾಗುತ್ತಿಲ್ಲ, ಅಶಕ್ತ ಕುಟುಂಬದೊಂದಿಗೆ ದೀಪಾವಳಿ ಆಚರಿಸುತ್ತಿರುವ ಬಿರುವೆರ್ ಕುಡ್ಲ ದ ಕಾರ್ಯ ಶ್ಲಾಘನೀಯವೆಂದು ಕಸ್ಟಮ್ಸ್ ನ ನಿವೃತ್ತ ಅಧಿಕಾರಿ ಎಚ್ ಸತೀಶ್ ಕುಮಾರ್ ಹೇಳಿದರು. ಬಿರುವೆರ್ ಕುಡ್ಲ (ರಿ.) ಮುಲ್ಕಿ ಘಟಕದ ವತಿಯಿಂದ ಮನೆ ಮನೆ ದೀಪಾವಳಿ ಕಾರ್ಯಕ್ರಮದಲ್ಲಿ ಅಶಕ್ತ 3 ಕುಟುಂಬಗಳಿಗೆ ದಿನಸಿ ಸಾಮಗ್ರಿಳನ್ನು ಹಸ್ತಾಂತರಿಸಿ ಮಾತನಾಡಿದರು.

ಘಟಕದ ವತಿಯಿಂದ ಶಿಮಂತೂರು ಗ್ರಾಮದ ಅಪ್ಪಿ ಪೂಜಾರ್ತಿ, ಅಮೃತನಂದ ಮಾಯಿ ನಗರದ ಸೀನ ಸೇಸಿ, ವಿಜಯ ಕಾಲೇಜು ಬಳಿಯ ಶಕುಂತಲಾ ಶೆಟ್ಟಿ ಯವರ ಮನೆಗೆ ತೆರಳಿ ದೀಪಾವಳಿ ಶುಭಾಶಯವನ್ನು ಸಲ್ಲಿಸಿ., ಒಂದು ತಿಂಗಳು ಉಪಯೋಗಿಸುವಷ್ಟು ದಿನಸಿ ಸಾಮಗ್ರಿ, ಸೀರೆ, ಸಿಹಿ ತಿಂಡಿ ನೀಡಿ ಹಣತೆ ದೀಪಗಳನ್ನು ಬೆಳಗಿಸಿ ಪಟಾಕಿ ಸಿಡಿಸಿ ಆಚರಿಸಲಾಯಿತು.

ಈ ಸಂದರ್ಭ ಮೂಲ್ಕಿ ಘಟಕದ ಗೌರವಾಧ್ಯಕ್ಷ ಕಿಶೋರ್ ಸಾಲ್ಯಾನ್ ಬಪ್ಪನಾಡು ಅಧ್ಯಕ್ಷ ಉಮೇಶ್ ಮಾನಂಪಾದಿ, ಉಪಾಧ್ಯಕ್ಷ ಮಾಧವ ಪೂಜಾರಿ, ಕಾರ್ಯದರ್ಶಿ ಸತೀಶ್ ಕಿಲ್ಪಾಡಿ , ಕೋಶಾಧಿಕಾರಿ ಕಿಶೋರ್ ಅಂಚನ್ ಪಡುಬೈಲ್, ಗಿರಿಧರ್ ಅಮೀನ್, ಆದರ್ಶ್ ಮಾಣಂಪಾದಿ, ತಾರಾನಾಥ್ ಏನ್ , ನಿಖಿಲ್ ಪಡುಬೈಲ್, ಸುಜಾತ ಸತೀಶ್ ಉಪಸ್ಥಿತರಿದ್ದರು.