ಸಾರಾಂಶ
ಕ್ಷೇತ್ರ ಪುರೋಹಿತರು ವೈದಿಕ ವಿದಿ ವಿಧಾನಗಳ ಮೂಲಕ ಗೋಪೂಜೆ ನೆರವೇರಿಸಿ ಗೋವುಗಳಿಗೆ ಅಕ್ಕಿ, ಬೆಲ್ಲ, ಬಾಳೆಹಣ್ಣು, ಸಿಹಿ ತಿನಿಸು, ಗೋಗ್ರಾಸ ನೀಡಿದರು. ಬಳಿಕ ಗೋಮಾತೆಗೆ ಪೂಜೆ ಸಮರ್ಪಿಸಿದರು. ಎಲ್ಲ ಗೋವುಗಳಿಗೆ ಹಣ್ಣುಹಂಪಲು ನೀಡಿದರು.
ಕನ್ನಡಪ್ರಭ ವಾರ್ತೆ ಸುಬ್ರಹ್ಮಣ್ಯ
ನಾಗಾರಾಧನೆಯ ಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದಲ್ಲಿ ಗೋಪೂಜೆಯನ್ನು ದೀಪಾವಳಿಯ ದಿನ ಶನಿವಾರ ಸಂಜೆ ವಿಶೇಷವಾಗಿ ಆಚರಿಸಲಾಯಿತು. ದೇವಳದ ಮುಂಭಾಗ ಕ್ಷೇತ್ರ ಪುರೋಹಿತ ಮದುಸೂಧನ ಕಲ್ಲೂರಾಯರು ಗೋಮಾತೆಗೆ ವಿವಿಧ ವೈದಿಕ ವಿದಿ ವಿಧಾನ ನೆರವೇರಿಸಿ ಪೂಜೆ ಮಾಡಿದರು. ನಂತರ ದೇವಳದ ಅವಳಿ ಗೋಶಾಲೆಗಳಲ್ಲಿ ಗೋಪೂಜೆ ನೆರವೇರಿತು.ಕ್ಷೇತ್ರ ಪುರೋಹಿತರು ವೈದಿಕ ವಿದಿ ವಿಧಾನಗಳ ಮೂಲಕ ಗೋಪೂಜೆ ನೆರವೇರಿಸಿ ಗೋವುಗಳಿಗೆ ಅಕ್ಕಿ, ಬೆಲ್ಲ, ಬಾಳೆಹಣ್ಣು, ಸಿಹಿ ತಿನಿಸು, ಗೋಗ್ರಾಸ ನೀಡಿದರು. ಬಳಿಕ ಗೋಮಾತೆಗೆ ಪೂಜೆ ಸಮರ್ಪಿಸಿದರು. ಎಲ್ಲ ಗೋವುಗಳಿಗೆ ಹಣ್ಣುಹಂಪಲು ನೀಡಿದರು.
ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಲಕ್ಷ್ಮೀಶ ಗಬ್ಲಡ್ಕ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಯೇಸುರಾಜ್, ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯ ಲೋಲಾಕ್ಷ ಕೈಕಂಬ, ದೇವಳದ ಅಧೀಕ್ಷಕ ಪದ್ಮನಾಭ ಶೆಟ್ಟಿಗಾರ್, ಅಕೌಂಟೆಂಟ್ ರಾಜಲಕ್ಷ್ಮೀ ಶೆಟ್ಟಿಗಾರ್, ಪಶುವೈದ್ಯಾಧಿಕಾರಿ ಡಾ. ವೆಂಕಟಾಚಲಪತಿ, ದೇವಳದ ಹೆಬ್ಬಾರ್ ಪ್ರಸನ್ನ ಭಟ್, ಅಲೋಕೇಶ್ ಎ.ಆರ್., ದೇವಳದ ಸಿಬ್ಬಂದಿ ಸೇರಿದಂತೆ ಭಕ್ತರು ಉಪಸ್ಥಿತರಿದ್ದರು.‘ಯಶಸ್ವಿ’ಗೆ ಗಜಲಕ್ಷ್ಮೀ ವಿಶೇಷ ಪೂಜೆ
ದೇವಳದ ಆನೆ ಯಶಸ್ವಿಗೆ ಶನಿವಾರ ಬಲಿಪಾಡ್ಯಮಿ ಪ್ರಯುಕ್ತ ಗಜಲಕ್ಷ್ಮೀ ಪೂಜೆಯು ನಡೆಯಿತು. ಕ್ಷೇತ್ರ ಪುರೋಹಿತ ವೇದಮೂರ್ತಿ ಮಧುಸೂದನ ಕಲ್ಲೂರಾಯ ಯಶಸ್ವಿಗೆ ವಿವಿಧ ವೈಧಿಕ ವಿದಿವಿಧಾನಗಳೊಂದಿಗೆ ಪೂಜೆ ನೆರವೇರಿಸಿದರು. ಆನೆಗೆ ಹಣ್ಣುಹಂಪಲು ತೆಂಗಿನಕಾಯಿ, ಅವಲಕ್ಕಿ, ಹೊದ್ಲು, ಬೆಲ್ಲ, ಹಣ್ಣು ಹಂಪಲು, ತೆಂಗಿನ ಕಾಯಿ ಇತ್ಯಾದಿ ತಿನಿಸುಗಳನ್ನು ನೀಡಿದರು. ನಂತರ ಮಂಗಳಾರತಿ ಬೆಳಗಲಾಯಿತು.