ಪೂಜೆ, ಪುನಸ್ಕಾರದಲ್ಲಿ ದೀವರ ಸಮಾಜ ಹಿಂದುಳಿದಿದೆ

| Published : Nov 27 2023, 01:15 AM IST

ಸಾರಾಂಶ

ತೆಂಗಿನಕಾಯಿ ದೇವರ ತಲೆ, ವೀಳ್ಯವನು ಮೂರು ಎಲೆ ಇಡಬೇಕು. ದೇವ ಸಂಕೇತವಾಗಿದೆ, ದೇವರ ಆರಾಧನೆ ಮಾಡಲಾಗುತ್ತಿದೆ. ಮಹಿಳೆಯರಿಗೆ ಮಂತ್ರ ಬಾರದ ಕಾರಣ ಮೂರು ಬಾರಿ ಅಕ್ಷತೆ ಹಾಕಿ ದೇವಿಯನ್ನು ಆಹ್ವಾನಿಸಲಾಗುತ್ತದೆ. ಹೀಗೆ ಲಕ್ಷ್ಮೀಪೂಜೆ ಮಾಡಲಾಗುತ್ತದೆ. ನಿಟ್ಟೂರ ನಾರಾಯಣಗುರು ಸಂಸ್ಥಾನದ ರೇಣುಕಾನಂದ ಸ್ವಾಮೀಜಿ, ಸಂಸ್ಕೃತಿ ಉಳಿಯಬೇಕಿದೆ ಮತ್ತು ಬೆಳಸುವ ಮೂಲಕ ಪಾಲಿಸಿಕೊಂಡು ಹೋಗಬೇಕಿದೆ. ದೀವರ ಸಂಸ್ಕೃತಿ ನಮ್ಮ‌ಪೀಳಿಗೆಗೆ ಧಾರೆ ಎರೆಯುವ ಕೆಲಸವಾಗಲಿ ಎಂದು ಆಶಿಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಸಂಸ್ಕೃತಿ ತೇಲುಹೋಗುತ್ತಿರುವುದನ್ನ ಹಿಡಿದು ದೀವರ ಸಂಸ್ಕೃತಿಯನ್ನು ನೆನಪಿಸಲಾಗಿದೆ. ಈ ಸಂಸ್ಕೃತಿ ಉಳಿಸಲು ಒಗ್ಗಟ್ಟಾಗಬೇಕು ಎಂದು ಯೋಗೇಂದ್ರ ಅವಧೂತ ಹೇಳಿದರು.

ನಗರದ ಈಡಿಗರ ಭವನದಲ್ಲಿ ಭಾನವಾರ ಧೀರ ಧಿವರ ಬಳಗ, ಹಾಗೂ ಹಳೇಪೈಕ ದೀವರ ಸಂಸ್ಕೃತಿ ಸಂವಾದ ಬಳಗದಿಂದ ಆಯೋಜಿಸಿದ್ದ ದೀವರ ಸಾಂಸ್ಕೃತಿಕ ವೈಭವ ಕಾರ್ಯಕ್ರಮದಲ್ಲಿ ಅವರು ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಯೂಟ್ಯೂಬ್ ಫೇಸ್‌ಬುಕ್‌ನಲ್ಲಿ ಸಂಸ್ಕೃತಿ ಹರಿದುಹೋಗ್ತಾ ಇದೆ. ಇದಕ್ಕಾಗಿ ದೀವರ ಸಾಂಸ್ಕೃತಿಕ ವೈಭವ ದೊಡ್ಡದಾಗಿ ಬಿಂಬಿಸಬೇಕಿದೆ. ಲಕ್ಷ್ಮೀ ಪೂಜೆ ಮಾಡುವುದು ಸಹ ಒಂದು ಸಂಸ್ಕೃತಿಯನ್ನ ಬಿಂಬಿಸುತ್ತದೆ. ಪೂಜೆ, ಪುನಸ್ಕಾರದಲ್ಲಿ ದೀವರ ಸಮಾಜ ಹಿಂದುಳಿದಿದೆ. ಕಳಶ ಇಡಲಾಗುತ್ತದೆ, ಅದಕ್ಕೆ ಹೆಸರೇನು ಇಡಬೇಕು ಗೊತ್ತಿಲ್ಲ. ಯಾವ ರೀತಿಯ ದೇವರನ್ನ ಕರೆಯಬೇಕು ಗೊತ್ತಿಲ್ಲ ಎಂದರು.

ತೆಂಗಿನಕಾಯಿ ದೇವರ ತಲೆ, ವೀಳ್ಯವನು ಮೂರು ಎಲೆ ಇಡಬೇಕು. ದೇವ ಸಂಕೇತವಾಗಿದೆ, ದೇವರ ಆರಾಧನೆ ಮಾಡಲಾಗುತ್ತಿದೆ. ಮಹಿಳೆಯರಿಗೆ ಮಂತ್ರ ಬಾರದ ಕಾರಣ ಮೂರು ಬಾರಿ ಅಕ್ಷತೆ ಹಾಕಿ ದೇವಿಯನ್ನು ಆಹ್ವಾನಿಸಲಾಗುತ್ತದೆ. ಹೀಗೆ ಲಕ್ಷ್ಮೀಪೂಜೆ ಮಾಡಲಾಗುತ್ತದೆ.

ನಿಟ್ಟೂರ ನಾರಾಯಣಗುರು ಸಂಸ್ಥಾನದ ರೇಣುಕಾನಂದ ಸ್ವಾಮೀಜಿ, ಸಂಸ್ಕೃತಿ ಉಳಿಯಬೇಕಿದೆ ಮತ್ತು ಬೆಳಸುವ ಮೂಲಕ ಪಾಲಿಸಿಕೊಂಡು ಹೋಗಬೇಕಿದೆ. ದೀವರ ಸಂಸ್ಕೃತಿ ನಮ್ಮ‌ಪೀಳಿಗೆಗೆ ಧಾರೆ ಎರೆಯುವ ಕೆಲಸವಾಗಲಿ ಎಂದು ಆಶಿಸಿದರು.

ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಮಾತನಾಡಿ, ಕಾಗೋಡು ಚಳಿವಳಿಯೂ ಒಂದು ಸಾಂಸ್ಕೃತಿಕ ಹೋರಾಟ. ಆದ್ದರಿಂದ ಈ ಕಾರ್ಯಕ್ರಮದಲ್ಲಿ ಅದರ ಭಾಗವನ್ನು ಅಳವಡಿಸಿಕೊಳ್ಳಬೇಕಿತ್ತು. ಆಗ ಈ ಕಾರ್ಯಕ್ರಮ ಚರಿತ್ರೆಯಲ್ಲಿ ಶಾಶ್ವತವಾಗಿ ಉಳಿಯುತ್ತಿತ್ತು. ಮುಂದಿನ ದಿನದಲ್ಲಿ ಈ ಕುರಿತ ಚಿಂತನೆ ನಡೆಯಲಿ ಎಂದರು. ದೀವರ ಸಾಂಸ್ಕೃತಿಕ ವೈಭವ ಸಂಚಾಲಕ ನಾಗರಾಜ ನೇರಿಗೆ ಮಾತನಾಡಿ, ಸಂಸ್ಕೃತಿ, ಕಲೆಯನ್ನು ಮುಂದಿನ ತಲೆಮಾರಿಗೆ ದಾಟಿಸುವ ಕೆಲಸ ಆಗಬೇಕಿದೆ. ದೀವರು ಎಂದರೆ, ಮಲೆನಾಡ ಸಂಸ್ಕೃತಿಯ ಬುಡಗಟ್ಟು. ಈ ಬಳಗ ಜನರ ಮನದಲ್ಲಿ ನೋಂದಣಿ ಆಗಿದೆ. ಹಳ್ಳಿಯ ರೈತನಿಂದ ಗಡಿಯಲ್ಲಿನ ಯೋಧ ಕೂಡ ಈ ಕಾರ್ಯಕ್ರಮಕ್ಕೆ ಬೆಂಬಲ ಸೂಚಿಸಿದ್ದಾರೆ ಎಂದರು. ಸಿಗಂದೂರು ಕ್ಷೇತ್ರದ ಧರ್ಮದರ್ಶಿ ಎಸ್.ರಾಮಪ್ಪ, ಹಿರಿಯ ಹಸೆ ಚಿತ್ತಾರ ಕಲಾವಿದೆ ಲಕ್ಷ್ಮಮ್ಮ ಗಡೇಮನೆ, ಅಂತರ ರಾಷ್ಟ್ರೀಯ ಜಾನಪದ (ಡೊಳ್ಳುಕುಣಿತ) ಕಲಾವಿದ ಬಿ.ಟಾಕಪ್ಪ ಕಣ್ಣೂರು ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧು ಬಂಗಾರಪ್ಪ ಅವರು ‘ಧೀರ ದೀವರು’ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು. ಹಸೆ ಚಿತ್ತಾರ ಕಲಾವಿದ ಸಿರಿವಂತೆ ಚಂದ್ರಶೇಖರ್ ಸಮರೋಪ ನುಡಿ ಆಡಿದರು.

ಶಾಸಕ ಬೇಳೂರು ಗೋಪಾಲ ಕೃಷ್ಣ ಮಾತನಾಡಿದರು. ನಿಟ್ಟೂರಿನ ನಾರಾಯಣಗುರು ಸಂಸ್ಥಾನದ ರೇಣುಕಾನಂದ ಸ್ವಾಮೀಜಿ, ಸುರೇಶ್ ಕೆ.ಬಾಳೆಗುಂಡಿ, ಜಿ.ಡಿ.ನಾರಾಯಣಪ್ಪ, ಕೆಎಎಸ್ ಅಧಿಕಾರಿಗಳಾದ ಕೆ.ಚೆನ್ನಪ್ಪ, ಎಚ್.ಕೆ. ಕೃಷ್ಣಮೂರ್ತಿ, ಶ್ರೀಧರ್ ಆರ್.ಹುಲ್ತಿಕೊಪ್ಪ ಮತ್ತಿತರರು ಇದ್ದರು.

- - -

ಬಾಕ್ಸ್‌-1 ರಾಜ್ಯಾದ್ಯಂತದಿಂದ ಈಡಿಗರು ಆಗಮನಕಾರ್ಯಕ್ರಮದಲ್ಲಿ ಹಸೆ ಚಿತ್ತಾರ ಮತ್ತು ಬೂಮಣ್ಣಿ ಬುಟ್ಟಿ ಚಿತ್ತಾರವೇ ಮೇಳೈಸಿತು.. ಕಳ್ಳುಬಳ್ಳಿಗಳ ಸಮಾಗಮ, ಹಸೆ ಚಿತ್ತಾರ ಮತ್ತು ಬೂಮಣ್ಣಿ ಬುಟ್ಟಿ ಚಿತ್ತಾರವೆಂಬ ದೀವರ ಅಸ್ಮಿತೆಯನ್ನು ಹೆಸರಲ್ಲಿ ಸಾಂಪ್ರದಾಯಿಕ ಕಲಾ ಜಗತ್ತೇ ಅನಾವರಣಗೊಂಡಿತು. ಮಲೆನಾಡು ದೀವರ ಸಾಂಪ್ರಾಯಕ ಸೀರೆಯಲ್ಲಿ ಮಹಿಳೆಯರು ಸಂಭ್ರಮಿಸಿದರೆ, ಪುರುಷರು ಬಿಳಿವಸ್ತ್ರ ಧರಿಸಿ ಮಿಂಚಿದರು.

ಧೀರ ದೀವರ ಬಳಗ, ಹಳೆಪೈಕ ದೀವರ ಸಂಸ್ಕೃತಿ ಸಂವಾದ ಬಳಗ ಸೇರಿ ನಡೆಸಿದ ದೀವರ ಸಾಂಸ್ಕೃತಿಕ ವೈಭವ ಬೆಳಗಾವಿ, ಹಾವೇರಿ, ತುಮಕೂರು, ಬೆಂಗಳೂರು, ಮಂಡ್ಯ, ಮೈಸೂರು, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆ ಭಾಗಗಳಿಂದ ಈಡಿಗ ಸಮುದಾಯದವರು ಪಾಲ್ಗೊಂಡಿದ್ದರು.

ದೀವರ ಸಾಂಸ್ಕೃತಿಕ ವೈಭವದ ಕುರುಹುಗಳಾದ ಡೊಳ್ಳು, ಕೋಲಾಟ, ಅಂಟಿಕೆ–ಪಿಂಟಿಕೆ, ಸಂಪ್ರದಾಯದ ಹಾಡುಗಳು, ಭರತನಾಟ್ಯ, ಇಡಕಲು ಪೂಜೆ ಸೇರಿದಂತೆ ಜನಪದ ಹಾಡಗಳಿಗೆ ನೆರೆದಿದ್ದ ಸಮುದಾಯ ದನಿಯಾದರು.

ದೀವರ ಭಾಷೆಯಲ್ಲಿ ನಾಟಕ ಆಡಿ ಖುಷಿಪಟ್ಟರು. ಮಧ್ಯಾಹ್ನ ಮಲೆನಾಡಿನ ಭೂರಿಭೋಜನ ಸಾಂಸ್ಕೃತಿಕ ವೈಭವಕ್ಕೆ ಬಂದವರ ನಾಲಿಗೆ ತಣಿಸಿತು.

ಸಿಗಂದೂರು ಕಲಾ ತಂಡ ಹಾಗೂ ಮಲೆಶಂಕರ ಕಲಾ ತಂಡಗಳಿಂದ ಅಂಟಿಕೆ–ಪಿಂಟಿಕೆ, ಜನಪದ ಗೀತೆ, ಬಲೀಂದ್ರ ಪದ, ಮಂಗಳಾರತಿ ಪದ ಜನರ ಮನಗೆದ್ದವು. ಸಿದ್ಧಾಪುರದ ನಿಶಾ ಅವರಿಂದ ಯಕ್ಷಗಾನ ಮೇಳ ಆಯೋಜಿಸಲಾಗಿತ್ತು. ಅದೇ ರೀತಿ ಏಕವ್ಯಕ್ತಿ ಪಾತ್ರಭಿನಯ ಸೇರಿದಂತೆ ಹಲವು ಕಾರ್ಯಕ್ರಮ ಸಂಪನ್ನಗೊಂಡಿತು.

- - -

ಬಾಕ್ಸ್‌-2

ಡಿ.10ರಂದು ಸಮಾವೇಶ: ಮಧು ಬಂಗಾರಪ್ಪ ಬೆಂಗಳೂರಿನ ಅರಮನೆ ಮೈದಾನದಲ್ಲಿ ಡಿ.10ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಆರ್ಯ ಈಡಿಗ ಹಾಗೂ ಉಪ ಪಂಗಡಗಳ ಬೃಹತ್ ಸಮಾವೇಶ ಆಯೋಜಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧು ಬಂಗಾರಪ್ಪ ಮಾಹಿತಿ ನೀಡಿದರು.

ಈ ಸಭೆಯಲ್ಲಿ ಈಡಿಗ ಸಮಾಜದ ಅಹವಾಲು ಸ್ವೀಕರಿಸಲಿದ್ದಾರೆ. ಆದ್ದರಿಂದ ಆರ್ಯ ಈಡಿಗ ಸಂಘ ವತಿಯಿಂದ ನಗರದ ಸುವರ್ಣ ಸಂಸ್ಕೃತಿ ಭವನದಲ್ಲಿ ನ.30ರಂದು ಪೂರ್ವಭಾವಿ ಸಭೆ ಆಯೋಜಿಸಲಾಗಿದೆ. ಸಮಾಜದ ಮುಖಂಡರು ಸಭೆಯಲ್ಲಿ ಭಾಗವಹಿಸಬೇಕು ಎಂದು ಕೋರಿದರು.

- - - -26ಎಸ್ಎಂಜಿಕೆಪಿ04:

ಶಿವಮೊಗ್ಗದ ಈಡಿಗರ ಭವನದಲ್ಲಿ ಭಾನವಾರ ಧೀರ ಧಿವರ ಬಳಗ, ಹಾಗೂ ಹಳೇಪೈಕ ದೀವರ ಸಂಸ್ಕೃತಿ ಸಂವಾದ ಬಳಗದಿಂದ ಆಯೋಜಿಸಿದ್ದ ದೀವರ ಸಾಂಸ್ಕೃತಿಕ ವೈಭವ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರನ್ನು ಅಭಿನಂದಿಸಲಾಯಿತು.