ಕನ್ನಡಪ್ರಭ ವಾರ್ತೆ ತುಮಕೂರುಮಾಜಿ ಶಾಸಕ ಗೌರಿಶಂಕರ್ ಆಪ್ತ ಸಹಾಯಕ ಸೇರಿದಂತೆ ಆತನ ಬೆಂಬಲಿಗರು ಶಾಸಕ ಬಿ. ಸುರೇಶ್ ಗೌಡರನ್ನು ಗುರಿಯಾಗಿಸಿಕೊಂಡು ಈಚಿನ ವಿಧಾನ ಪರಿಷತ್‌ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹರಡಿಸಿ ನಾಗರಿಕರಲ್ಲಿ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದ್ದು ಅವರನ್ನು ಬಂಧಿಸಿ ಜೈಲಿಗೆ ಹಾಕಬೇಕು ಎಂದು ತುಮಕೂರು ಗ್ರಾಮಾಂತರ ಬಿಜೆಪಿ ಘಟಕವದ ಆಶ್ರಯದಲ್ಲಿ ಅನೇಕ ಬಿಜೆಪಿ ಮುಖಂಡರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ಸಲ್ಲಿಸಿದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಮುಂದೆ ಬೃಹತ್‌ ಪ್ರತಿಭಟನೆ ನಡೆಸಿ ಜಿಲ್ಲಾ ಹೆಚ್ಚುವರಿ ಪೊಲೀಸ್‌ ವರಿಷ್ಠರಿಗೆ ಈ ಮುಖಂಡರು ಮನವಿ ಪತ್ರ ಸಲ್ಲಿಸಿದರು.ಇತ್ತೀಚೆಗೆ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ತುಮಕೂರು ಜಿಲ್ಲೆಯ ಒಬ್ಬ ಬಿಜೆಪಿ ಶಾಸಕ ಅಡ್ಡ ಮತದಾನ ಮಾಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಯಾರೆಂದು ಗೊತ್ತಿದ್ದರೆ ಕಾಮೆಂಟ್ ಮಾಡಿ ಎಂದು ಪೋಸ್ಟ್ ಸೃಷ್ಟಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿದ್ದು ನಮ್ಮ ಶಾಸಕರ ಬಗ್ಗೆ ಅಪಪ್ರಚಾರ ಹಾಗೂ ಮಾನಹಾನಿ ಮಾಡುತ್ತಿರುವವರ ವಿರುದ್ಧ ದೂರು ದಾಖಲಿಸಿ ಕ್ರಮ ಜರುಗಿಸುವಂತೆ ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ವೈ.ಎಚ್. ಹುಚ್ಚಯ್ಯ ಆಗ್ರಹಿಸಿದ್ದಾರೆ.ಬಿ. ಸುರೇಶ್ ಗೌಡರು ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಮೂರು ಬಾರಿ ಶಾಸಕರಾಗಿ ಚುನಾಯಿತರಾಗಿರುತ್ತಾರೆ. ತಮ್ಮ ಪಕ್ಷವನ್ನು ತಾಯಿಯ ಜಾಗದಲ್ಲಿ ಇಟ್ಟು ಪೂಜೆ ಸಲ್ಲಿಸುವ, ಸುರೇಶ್ ಗೌಡರು ಕಳೆದ 28 ವರ್ಷಗಳಿಂದ ಸಕ್ರಿಯರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪ್ರಸ್ತುತ ಪಕ್ಷದ ಹಿರಿಯ ಶಾಸಕರಾಗಿ ಹೋರಾಟ ಮತ್ತು ಅಭಿವೃದ್ಧಿ ಕೆಲಸಗಳ ಮೂಲಕ ಜಿಲ್ಲೆ ಕ್ಷೇತ್ರ ಮತ್ತು ರಾಜ್ಯದಲ್ಲಿ ಪಕ್ಷ ಸಂಘಟನೆ ಮಾಡುತ್ತಿದ್ದಾರೆ. ವಿಧಾನ ಪರಿಷತ್ತಿನ ಚುನಾವಣೆಯಲ್ಲಿ ಪಕ್ಷ ಸೂಚಿಸಿರುವಂಥ ಅಭ್ಯರ್ಥಿಗೆ ಪ್ರಾಮಾಣಿಕವಾಗಿ ಮತದಾನ ಮಾಡಿದ್ದಾರೆ ಎಂದು ಗ್ರಾಮಾಂತರ ಬಿಜೆಪಿ ಘಟಕದ ಅಧ್ಯಕ್ಷ ಎಂ.ಪಿ.ರಾಜಶೇಖರ್ ತಿಳಿಸಿದರು. ಈ ಚುನಾವಣೆಯಲ್ಲಿ ತುಮಕೂರು ಜಿಲ್ಲೆಯ ಒಬ್ಬ ಶಾಸಕ ಅಡ್ಡ ಮತದಾನ ಮಾಡಿರುವುದಾಗಿ ಕೆಲವು ವ್ಯಕ್ತಿಗಳು ಸದರಿ ವಿಷಯವಾಗಿ ಸತ್ಯಾಸತ್ಯತೆ ತಿಳಿಯದೆ ಮಾನ್ಯ ಶಾಸಕರ ಬಗ್ಗೆ ಅಪಪ್ರಚಾರಕ್ಕೆ ಇಳಿದು ದುರುದ್ದೇಶಪೂರ್ವಕವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಸುರೇಶ್ ಮುದ್ದಪ್ಪ ಹಾಗೂ ವಿನೋ ವಿನೋದ್ ಎಂಬುವರ ಫೇಸ್‌ಬುಕ್‌ ಪೋಸ್ಟ್‌ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ ಎಂದು ಬಿಜೆಪಿ ಮುಖಂಡ ಹಾಗೂ ಮಾಜಿ ತಾಲೂಕ ಪಂಚಾಯಿತಿ ಅಧ್ಯಕ್ಷ ನರಸಿಂಹಮೂರ್ತಿ ತಿಳಿಸಿದರು.ಶಾಸಕ ಬಿ ಸುರೇಶ್ ಗೌಡರ ರಾಜಕೀಯ ಏಳ್ಗೆ ಮತ್ತು ಬೆಳವಣಿಗೆಯನ್ನು ಸಹಿಸದ ಕೆಲವು ಕಿಡಿಗೇಡಿಗಳು ಅವರ ಬಗ್ಗೆ ಇಲ್ಲ ಸಲ್ಲದ ರೀತಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವಂತ ವ್ಯಕ್ತಿ ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪ್ರಸ್ತುತ (ಕಾಂಗ್ರೆಸ್ ಪಕ್ಷ) ಪರಾಜಿತ ಅಭ್ಯರ್ಥಿಯಾಗಿರುವ ಡಿ ಸಿ ಗೌರಿಶಂಕರ್ ಆತನ ಬೆಂಬಲಿಗ ಸುರೇಶ್ ಮುದ್ದಪ್ಪ ಎನ್ನುವ ಹಾಗೂ ವಿನು ವಿನೋದ್ ಎಂಬ ಇಬ್ಬರೂ ಕೂಡ ಅವರ ಆಪ್ತ ಸಿಬ್ಬಂದಿಯಾಗಿದ್ದಾರೆ ಎಂದು ನಮಗೆ ಮಾಹಿತಿ ಇದ್ದು, ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ತಾಲೂಕು ಬಿಜೆಪಿ ಮಾಜಿ ಅಧ್ಯಕ್ಷ . ಶಂಕರ್ ಆಗ್ರಹಿಸಿದರು.ಈತನ ಈ ಪೋಸ್ಟನ್ನು ಗೌರಿಶಂಕರನ ಬೆಂಬಲಿಗರು ಹಾಗೂ ಪ್ರದೀಪ್ ಯೂತ್ ಕಾಂಗ್ರೆಸ್ ಇತರ ಬೆಂಬಲಿಗರು ವ್ಯವಸ್ಥಿತವಾಗಿ ಪಿತೂರಿ ನಡೆಸಿ ಪೋಸ್ಟ್‌ಗಳನ್ನು ಸಾಮಾಜಿಕ ಜಾಲತಾಣಗಳಾದ ಫೇಸ್ಟುಕ್ ವಾಟ್ಸಾಪ್ ಹಾಗೂ ಟ್ವಿಟ್ಟರ್ ಗಳಲ್ಲಿ ಹಂಚಿಕೊಂಡು ಅವರ ಕಾರ್ಯಕರ್ತರಿಗೆ ಕಾಮೆಂಟ್ ಮಾಡುವಂತೆ ಪ್ರಚೋದಿಸಿ ಸದರಿ ಕಾಮೆಂಟ್ ಗಳಲ್ಲಿ ಅವರ ಬೆಂಬಲಿಗರು ಶಾಸಕ ಬಿ ಸುರೇಶ್ ಗೌಡರ ಹೆಸರನ್ನು ಉಲ್ಲೇಖಿಸಿರುತ್ತಾರೆ. ಇದು ಅಕ್ಷಮ್ಯ ಅಪರಾಧ ಎಂದು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಗೂಳೂರು ಶಿವಕುಮಾರ್ ತಿಳಿಸಿದರು.ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಊರುಕೆರೆ ವಿಜಯ್ ಕುಮಾರ್, ಮುಖಂಡರಾದ ಸಿದ್ದೇಗೌಡ, ಉಮೇಶ್ ಗೌಡ, ತಾರಾದೇವಿ, ಪ್ರಭಾಕರ, ರಮೇಶ, ಗಂಗಾಆಂಜನೇಯ, ಲೋಕೇಶ್, ಅಂಜಿನಪ್ಪ ಗಿರೀಶ್, ಮದನ್, ಸಿದ್ದರಾಜು ಕಣಕುಪ್ಪೆ ಕುಮಾರ, ರೇಣುಕಮ್ಮ, ಅನ್ನಪೂರ್ಣ, ಊರ್ಡಿಗೆರೆ ರವಿ ಉಪಸ್ಥಿತರಿದ್ದರು.