ರಾಜ್ಯದಲ್ಲಿನ ಗೂಂಡಾ ಕಾಂಗ್ರೆಸ್ ಸರ್ಕಾರವನ್ನು ಮುಂದಿನ ಎಲ್ಲ ಹಂತಗಳ ಚುನಾವಣೆಗಳಲ್ಲಿ ಜನತೆ ಕಿತ್ತೆಸೆಯುತ್ತಾರೆ. ಕಾಂಗ್ರೆಸ್ ಸರ್ಕಾರದ ಎಲ್ಲ ಭ್ರಷ್ಟಾಚಾರಗಳ ವಿರುದ್ಧ ಬಿಜೆಪಿ ಮುಂದಿನ ಚುನಾವಣೆಗಳಲ್ಲಿ ತಕ್ಕ ಉತ್ತರ ನೀಡುತ್ತದೆ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿದ್ದಾರೆ.
ಕನ್ನಡಪ್ರಭ ವಾರ್ತೆ ಹೊನ್ನಾಳಿ
ರಾಜ್ಯದಲ್ಲಿನ ಗೂಂಡಾ ಕಾಂಗ್ರೆಸ್ ಸರ್ಕಾರವನ್ನು ಮುಂದಿನ ಎಲ್ಲ ಹಂತಗಳ ಚುನಾವಣೆಗಳಲ್ಲಿ ಜನತೆ ಕಿತ್ತೆಸೆಯುತ್ತಾರೆ. ಕಾಂಗ್ರೆಸ್ ಸರ್ಕಾರದ ಎಲ್ಲ ಭ್ರಷ್ಟಾಚಾರಗಳ ವಿರುದ್ಧ ಬಿಜೆಪಿ ಮುಂದಿನ ಚುನಾವಣೆಗಳಲ್ಲಿ ತಕ್ಕ ಉತ್ತರ ನೀಡುತ್ತದೆ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿದರು.ಮುಂಬರುವ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ನ್ಯಾಮತಿ ಪಟ್ಟಣ ಪಂಚಾಯಿತಿ ಹೊನ್ನಾಳಿ ಪುರಸಭೆ ಹಾಗೂ ಗ್ರಾಮ ಪಂಚಾಯಿತಿಗಳ ಚುನಾವಣೆ ಹಿನ್ನೆಲೆ ಹೊನ್ನಾಳಿ, ನ್ಯಾಮತಿ ಅವಳಿ ತಾಲೂಕುಗಳ ಬಿಜೆಪಿ ವತಿಯಿಂದ ಪಟ್ಟಣದ ಗುರುಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬಿಜೆಪಿ ಕಾರ್ಯಕರ್ತರ ವಿಸ್ತಾರವಾದ ಚರ್ಚೆ, ವಿಕಸಿತ ಭಾರತ, ಹಳ್ಳಿಗಳ ಪ್ರಗತಿಗೆ ಸಂಕಲ್ಪ ಹಾಗೂ ಕೇಂದ್ರ ಬಿಜೆಪಿ ಸರ್ಕಾರದಿಂದ ಗ್ರಾಮೀಣ ಬದುಕಿನ ಕ್ರಾಂತಿಕಾರಿ ಬದಲಾವಣೆಗಾಗಿ ವಿ.ಬಿ.- ಜಿ ರಾಮ್ ಜಿ ಯೋಜನೆ, ಸ್ಥಿರ ಉದ್ಯೋಗ ಖಾತ್ರಿ ನೆಮ್ಮದಿಯ ಬದುಕು ವಿಚಾರ ಕುರಿತ ಸಭೆಗೆ ಗಿಡಕ್ಕೆ ನೀರೆರೆಯುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಮಹಾತ್ಮ ಗಾಂಧಿ ರಾಷ್ಠ್ರೀಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಭ್ರಷ್ಟಾಚಾರಕ್ಕೆ ಅವಕಾಶಗಳಿವೆ. ಆದ್ದರಿಂದ ಲೋಪದೋಷಗಳನ್ನು ಸರಿಪಡಿಸುವ ಉದ್ದೇಶ ಕೇಂದ್ರ ಸರ್ಕಾರದ್ದಾಗಿದೆ. ನೈಜ ಬಡವರು ಹಾಗೂ ದೇಶದ ಪ್ರಗತಿಗೆ ಪೂರಕ ಆಗುವಂತೆ ಅನೇಕ ಬದಲಾವಣೆ, ಸುಧಾರಣೆಗಳ ಬಗ್ಗೆ ವಿಬಿ- ಜಿ ರಾಮ್ ಜಿ ಯೋಜನೆ ಕುರಿತು ಕಾರ್ಯಕರ್ತರಿಗೆ ಮನವರಿಗೆ ಮಾಡಿಕೊಡಬೇಕಾಗಿದೆ ಎಂದು ಹೇಳಿದರು.ಈ ಹಿಂದೆ ಜಿ.ಪಂ., ತಾ.ಪಂ. ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ಬಿಜೆಪಿ ಹೆಚ್ಚಿನ ಸ್ಥಾನಗಳಲ್ಲಿ ಗೆದ್ದು ಆಧಿಕಾರ ನಡೆಸಿದೆ. ಕಳೆದ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಕೆಲವು ತಾತ್ವಿಕ ಕಾರಣಗಳಿಂದ ನಾವು ಸೋತಿದ್ದೇವೆ. ಮುಂದಿನ ಎಲ್ಲ ಚುನಾವಣೆಗಳಲ್ಲಿ ಬಿಜೆಪಿ ಎಲ್ಲ ಮುಖಂಡರು ಮತ್ತು ಕಾರ್ಯಕರ್ತರು ಗೆಲುವಿನ ಸಂಕಲ್ಪ ಕೈಗೊಳ್ಳಬೇಕಾಗಿದೆ. ಬಿಜೆಪಿ ಸ್ಥಳೀಯ ಸಹಕಾರಿ ಕ್ಷೇತ್ರಗಳಲ್ಲಿ ಮಾತ್ರ ಹಿನ್ನಡೆಯಲ್ಲಿ ಇದ್ದೇವೆ. ಕಳೆದ ಬಾರಿ ಜಿಪಂ 6ರ ಪೈಕಿ 5 ಸ್ಥಾನಗಳಲ್ಲಿ ಜಯಗಳಿಸಿತ್ತು. ಕಾಂಗ್ರೆಸ್ ಜಿಲ್ಲಾಧ್ಯಕ್ಷರು ತಮ್ಮ ಬಗ್ಗೆ ಕೀಳುಮಟ್ಟದ ಆರೋಪ ಮಾಡುತ್ತಿದ್ದಾರೆ. ಅವರ ಎಲ್ಲ ಸವಾಲುಗಳನ್ನು ಸ್ವೀಕರಿಸಿ ಮುಂದಿನ ಚುನಾವಣೆಗಳಲ್ಲಿ ತಕ್ಕ ಉತ್ತರ ನೀಡುತ್ತೇನೆ ಎಂದು ಹೇಳಿದರು.
ಕಾರ್ಯಕರ್ತರ ಸಭೆಯಲ್ಲಿ ಮುಖಂಡರಾದ ಜಿ.ಪಂ. ಮಾಜಿ ಸದಸ್ಯ ಸುರೇಂದ್ರ ನಾಯ್ಕ, ಒಬಿಸಿ ಮುಖಂಡ ಕುಬೇಂದ್ರಪ್ಪ, ಜಿಲ್ಲಾ ಮುಖಂಡ ಮಂಜುನಾಥ ನೆಲಹೊನ್ನೆ, ಮಾಜಿ ಅಧ್ಯಕ್ಷ ಜೆ.ಕೆ. ಸುರೇಶ್, ಹಾಲಿ ಅಧ್ಯಕ್ಷ ಅರಕೆರೆ ನಾಗರಾಜ್, ಪಪಂ ಮಾಜಿ ಅಧ್ಯಕ್ಷ ಬಾಬೂ ಹೋಬಳದಾರ್ ಮಾತನಾಡಿದರು.ಸಭೆಯಲ್ಲಿ ಮುಖಂಡರಾದ ಸಿ.ಆರ್. ಶಿವಾನಂದ, ಎಂ.ಎಸ್. ಫಾಲಾಕ್ಷಪ್ಪ, ಮಾರುತಿ ನಾಯ್ಕ, ಮಂಜು ಇಂಚರ, ಕೆ.ರಂಗಪ್ಪ, ಶಿವು ಹುಡೇದ್, ಲಿಂಗರಾಜ್, ಹವಳದ್, ತರಗನಹಳ್ಳಿ ರಮೇಶ್ ಗೌಡ, ಸುನೀಲ್, ನ್ಯಾಮತಿ ರವಿಕುಮಕಾರ್, ಬಡಾವಣೆ ರಂಗಪ್ಪ, ಪೇಟೆ ಪ್ರಶಾಂತ್, .ಡಿ,ಜಿ. ರಾಜಪ್ಪ ಇನ್ನಿತರ ಮುಖಂಡರು, ಅವಳಿ ತಾಲೂಕುಗಳ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.
- - -(ಕೋಟ್) ರಾಜ್ಯದಲ್ಲಿ ಹಗರಣ ಮುಕ್ತ ಸ್ಥಿರ ಸರ್ಕಾರವನ್ನು ಜನತೆ ಬಯುಸುತ್ತಿದ್ದಾರೆ. ಆದರೆ, ಪ್ರಸ್ತುತ ದಿನಗಳಲ್ಲಿ ಕುರ್ಚಿ ಕಿತ್ತಾಟದಲ್ಲಿ ಕಾಂಗ್ರೆಸ್ ಸರ್ಕಾರ ಮುಳುಗಿ ಅಭಿವೃದ್ಧಿ ಕಾರ್ಯಗಳಿಂದ ವಿಮುಖವಾಗಿ ಅಭಿವೃದ್ಧಿ ಶೂನ್ಯ ಸರ್ಕಾರವಾಗಿದೆ. ಬೆಳಗಾವಿ ಅಧಿವೇಶನದಲ್ಲಿ ಕಲ್ಯಾಣ ಕರ್ನಾಟಕದ ಬಗ್ಗೆ ಚರ್ಚೆಯಾಗಲಿಲ್ಲ ಬಳ್ಳಾರಿ ಘಟನೆ, ಮಹಿಳೆಯ ವಿವಸ್ತ್ರ, ಅಧಿಕಾರಗಳ ಮೇಲೆ ದೌರ್ಜನ್ಯ ಇವುಗಳೇ ಕಾಂಗ್ರೆಸ್ ಸರ್ಕಾರದ ಸಾಧನೆಗಳಾಗಿವೆ.
- ಎಂ.ಪಿ.ರೇಣುಕಾಚಾರ್ಯ, ಬಿಜೆಪಿ ಮಾಜಿ ಸಚಿವ.- - -
-19ಎಚ್.ಎಲ್.ಐ1.ಜೆಪಿಜಿ:ಹೊನ್ನಾಳಿ ಗುರು ಭವನದಲ್ಲಿ ಸೋಮವಾರ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಮಾತನಾಡಿದರು.