ಖಾಸಗಿ ಶಾಲೆಗಳಿಂದ ಸರ್ಕಾರಿ ಶಾಲೆ ಅವನತಿ

| Published : Jun 09 2024, 01:30 AM IST

ಸಾರಾಂಶ

ಬಾಳೆಹೊನ್ನೂರು, ಇಂದಿನ ದಿನಗಳಲ್ಲಿ ಖಾಸಗಿ ಶಾಲೆಗಳ ಭರಾಟೆಯಲ್ಲಿ ಸರ್ಕಾರಿ ಶಾಲೆಗಳು ಅವನತಿ ಕಂಡು ಮುಚ್ಚುತ್ತಿವೆ ಎಂದು ರೋಟರಿ ಕ್ಲಬ್ ಅಧ್ಯಕ್ಷ ಎ.ಆರ್.ಸುರೇಂದ್ರ ವಿಷಾಧ ವ್ಯಕ್ತಪಡಿಸಿದರು.

ಹರಾವರಿ ಕಾನೂರು ಕಟ್ಟಿನಮನೆ ಸರ್ಕಾರಿ ಶಾಲೆಗೆ ರೋಟರಿಯಿಂದ ಕ್ರೀಡಾ ಪರಿಕರ ವಿತರಿಸಿ

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಇಂದಿನ ದಿನಗಳಲ್ಲಿ ಖಾಸಗಿ ಶಾಲೆಗಳ ಭರಾಟೆಯಲ್ಲಿ ಸರ್ಕಾರಿ ಶಾಲೆಗಳು ಅವನತಿ ಕಂಡು ಮುಚ್ಚುತ್ತಿವೆ ಎಂದು ರೋಟರಿ ಕ್ಲಬ್ ಅಧ್ಯಕ್ಷ ಎ.ಆರ್.ಸುರೇಂದ್ರ ವಿಷಾಧ ವ್ಯಕ್ತಪಡಿಸಿದರು.

ಹರಾವರಿ ಕಾನೂರು ಕಟ್ಟಿನಮನೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ರೋಟರಿ ಕ್ಲಬ್ ನಿಂದ ವಿವಿಧ ಕ್ರೀಡಾ ಪರಿಕರಗಳನ್ನು ವಿತರಿಸಿ ಅವರು ಮಾತನಾಡಿದರು.ಬಾಳೆಹೊನ್ನೂರು ರೋಟರಿ ಸಂಸ್ಥೆ ವಿವಿಧೆಡೆ ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವ ಕೆಲಸ ಮಾಡುತ್ತಿದ್ದು, ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಿಗೆ ವಿವಿಧ ಶಾಲಾ ಪರಿಕರಗಳು, ಕ್ರೀಡಾ ಸಾಮಾಗ್ರಿಗಳು, ಕುಡಿಯುವ ನೀರಿನ ವ್ಯವಸ್ಥೆ, ಸಮವಸ್ತ್ರ, ಬ್ಯಾಂಡ್‌ಸೆಟ್ ಸೇರಿದಂತೆ ವಿವಿಧ ಕೊಡುಗೆಗಳನ್ನು ನೀಡುತ್ತಿದೆ.

ಗ್ರಾಮೀಣ ಭಾಗದ ಶಾಲೆಗಳು ಉಳಿದು ಬೆಳೆಯಬೇಕು ಎಂಬುದೇ ರೋಟರಿ ಸಂಸ್ಥೆ ಆಶಯವಾಗಿದೆ. ಈ ನಿಟ್ಟಿನಲ್ಲಿ ನಾವು ಸಹಕಾರ ಮಾಡುತ್ತಿದ್ದೇವೆ ಎಂದರು.

ಎಸ್‌ಡಿಎಂಸಿ ಅಧ್ಯಕ್ಷ ಶ್ರೀಧರ್ ಆಚಾರ್ಯ ಮಾತನಾಡಿ, ರೋಟರಿ ಕ್ಲಬ್‌ನಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಕ್ರೀಡಾ ಚಟುವಟಿಕೆಗಾಗಿ ಪರಿಕರಗಳನ್ನು ನೀಡುತ್ತಿರುವುದು ಶ್ಲಾಘನೀಯ. ಮುಂದಿನ ದಿನಗಳಲ್ಲಿಯೂ ಸಹ ಸಂಸ್ಥೆಯಿಂದ ಇದೇ ಮಾದರಿ ಸೇವೆ ದೊರೆಯಲಿ ಎಂದರು.

ಮುಖ್ಯಶಿಕ್ಷಕಿ ಭಾರತಿ, ರೋಟರಿ ಕಾರ್ಯದರ್ಶಿ ಯಶವಂತ, ಸಹಶಿಕ್ಷಕ ಲೋಕೇಶ, ಭರತ್, ಪದ್ಮರೇಖಾ, ಅಂಗನವಾಡಿ ಮೇಲ್ವಿಚಾರಕಿ ಬಿ.ಆರ್.ಭಾರತಿ, ಲವೀನಾ ಪಾಯ್ಸ್ ಮತ್ತಿತರರು ಇದ್ದರು.೦೮ಬಿಹೆಚ್‌ಆರ್ ೧:

ಬಾಳೆಹೊನ್ನೂರು ಸಮೀಪದ ಕಾನೂರು ಕಟ್ಟಿನಮನೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ರೋಟರಿ ಕ್ಲಬ್ ವತಿಯಿಂದ ವಿವಿಧ ಕ್ರೀಡಾ ಸಾಮಾಗ್ರಿಗಳನ್ನು ನೀಡಲಾಯಿತು. ಎ.ಆರ್.ಸುರೇಂದ್ರ, ಶ್ರೀಧರ್ ಆಚಾರ್ಯ, ಭಾರತಿ ಇದ್ದರು.