ಗ್ರಾಮ ಅರಣ್ಯ ಸಮಿತಿಯಿಂದ ಕ್ಷೀಣಿಸಿದ ಕಾಡಿನ ಬೆಂಕಿ, ಅರಣ್ಯ ವೃದ್ಧಿ: ಬಿ.ಎಸ್.ಮಂಜುನಾಥ್
KannadaprabhaNewsNetwork | Published : Oct 28 2023, 01:16 AM IST
ಗ್ರಾಮ ಅರಣ್ಯ ಸಮಿತಿಯಿಂದ ಕ್ಷೀಣಿಸಿದ ಕಾಡಿನ ಬೆಂಕಿ, ಅರಣ್ಯ ವೃದ್ಧಿ: ಬಿ.ಎಸ್.ಮಂಜುನಾಥ್
ಸಾರಾಂಶ
ಗ್ರಾಮ ಅರಣ್ಯ ಸಮಿತಿಯಿಂದ ಕ್ಷೀಣಿಸಿದ ಕಾಡಿನ ಬೆಂಕಿ, ಅರಣ್ಯ ವೃದ್ಧಿ: ಬಿ.ಎಸ್.ಮಂಜುನಾಥ್
ತೋಟಕ್ಕೆ ಮಣ್ಣು ನೀಡಲು ಆಗ್ರಹ । ಕೊನೋಡಿ ಪಂಚವಟಿ ಗ್ರಾಮ ಅರಣ್ಯ ಸಮಿತಿಯ ಸರ್ವ ಸದಸ್ಯರ ಸಭೆ ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ ಕೊನೋಡಿ ಗ್ರಾಮದಲ್ಲಿ ಪಂಚವಟಿ ಗ್ರಾಮ ಅರಣ್ಯ ಸಮಿತಿ ಪ್ರಾರಂಭವಾದ ನಂತರ ಕಾಡಿಗೆ ಬೆಂಕಿ ಬೀಳಲು ಬಿಟ್ಟಿಲ್ಲ. ಗ್ರಾಮಸ್ಥರಲ್ಲಿ ಅರಣ್ಯದ ಬಗ್ಗೆ ಕಾಳಜಿ ಜಾಸ್ತಿಯಾಗಿದ್ದು ಅರಣ್ಯ ಬೆಳೆಯಲು ಸಹಕಾರಿಯಾಗಿದೆ ಎಂದು ಕೊನೋಡಿ ಪಂಚವಟಿ ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಬಿ.ಎಸ್.ಮಂಜುನಾಥ್ ತಿಳಿಸಿದರು. ಶುಕ್ರವಾರ ಬೆಮ್ಮನೆ ಸಮುದಾಯ ಭವನದಲ್ಲಿ ನಡೆದ ಪಂಚವಟಿ ಗ್ರಾಮ ಅರಣ್ಯ ಸಮಿತಿ 2021-22 ಹಾಗೂ 2022-23 ನೇ ಸಾಲಿನ ಸರ್ವ ಸದಸ್ಯರ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಳೆದ 16 ವರ್ಷಗಳಿಂದ ನಾನು ಪಂಚವಟಿ ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷನಾಗಿ ಕಾರ್ಯನಿರ್ವಹಿಸಿದ್ದೇನೆ. ಅಕೇಶಿಯಾ ಕಡಿತಲೆ ಬಾಬ್ತು ಅರಣ್ಯ ಇಲಾಖೆಯಿಂದ 19 ಲಕ್ಷ ರು. ಬರಬೇಕಾಗಿದೆ. ಈಗಾಗಲೇ ನಮ್ಮ ಸಮಿತಿಯಿಂದ ಬೆಂಗಳೂರಿನ ಅರಣ್ಯಾಧಿಕಾರಿಗಳ ಕಚೇರಿಗೆ ಹೋಗಿ ಮನವಿ ಸಲ್ಲಿಸಿದ್ದೇವೆ ಎಂದರು. ಪಂಚವಟಿ ಗ್ರಾಮ ಅರಣ್ಯ ಸಮಿತಿ ಸದಸ್ಯ ಕಾರ್ಯದರ್ಶಿ ಹಾಗೂ ಸೀತೂರು ವೃತ್ತದ ಉಪ ವಲಯ ಅರಣ್ಯಾಧಿಕಾರಿ ವರುಣ್ .ಸಿ ಶೆಟ್ಟಿ ಜಮಾ ಖರ್ಚು ಮಂಡಿಸಿ ಮಾತನಾಡಿ, ಕೊಪ್ಪ ಅರಣ್ಯ ವಿಭಾಗದಲ್ಲಿ 34 ಗ್ರಾಮ ಅರಣ್ಯ ಸಮಿತಿ ಗಳಿದ್ದರೂ ಸೀತೂರು, ಕೊನೋಡಿ ಹಾಗೂ ಬೆಳ್ಳೂರು ಗ್ರಾಮ ಅರಣ್ಯ ಸಮಿತಿಗಳು ಉತ್ತಮ ಕಾರ್ಯ ಮಾಡಿ ಹೆಸರು ಪಡೆದಿದೆ. 1992 ಕ್ಕಿಂತ ಮುಂಚೆ ಅರಣ್ಯ ಇಲಾಖೆ ಬಗ್ಗೆ ಗ್ರಾಮಸ್ಥರಿಗೆ ಭಯವಿತ್ತು. ಆಗ ಕಾಡಿಗೆ ಬೆಂಕಿ ಬೀಳುವುದು ಸಹ ಜಾಸ್ತಿಯಾಗಿತ್ತು. ನಂತರ ಗ್ರಾಮಸ್ಥರ ಸಹ ಭಾಗಿತ್ವದಲ್ಲಿ ಗ್ರಾಮ ಅರಣ್ಯ ಸಮಿತಿ ರಚನೆಯಾದ ನಂತರ ಅರಣ್ಯದ ಬಗ್ಗೆ ಪ್ರೀತಿ, ಖಾಳಜಿ ಹೆಚ್ಚಿದೆ. ಒತ್ತುವರಿ ಕಡಿಮೆಯಾಗಿದೆ ಎಂದರು. --ಬಾಕ್ಸ್-- ಮಣ್ಣು ತೆಗೆಯಲು ಅವಕಾಶ ಕೊಡಿ ರೈತರ ತೋಟಗಳಿಗೆ ಕಾಡಿನಿಂದ ಮಣ್ಣು ತರಲು ಅವಕಾಶ ನೀಡಬೇಕು ಎಂದು ಗ್ರಾಮಸ್ಥರು ಅರಣ್ಯ ಇಲಾಖೆಯನ್ನು ಆಗ್ರಹಿಸಿದರು. ಸಭೆಯಲ್ಲಿ ಗ್ರಾಪಂ ಸದಸ್ಯ ಎಚ್.ಇ.ದಿವಾಕರ, ಸೀತೂರು ವಿಎಸ್‌ಎಸ್‌ಎನ್ ಉಪಾಧ್ಯಕ್ಷ ಬಿ.ಎಸ್.ಶ್ರೀನಿವಾಸ್ ಮುಂತಾದವರು ವಿಷಯ ಪ್ರಸ್ತಾಪ ಮಾಡಿ, ಅತಿಯಾದ ಮಳೆಯಿಂದ ತೋಟಗಳ ಮಣ್ಣು ತೊಳೆದು ಹೋಗಿದೆ. ರೈತರಿಗೆ ಮಣ್ಣಿನ ಅವಶ್ಯಕತೆ ಇದೆ. ಅರಣ್ಯ ಇಲಾಖೆಯವರು ತೋರಿಸಿದ ಜಾಗದಲ್ಲೇ ಅರಣ್ಯಕ್ಕೆ ತೊಂದರೆ ಮಾಡದಂತೆ ಮಣ್ಣು ತೆಗೆಯುತ್ತೇವೆ ಎಂದು ಅರಣ್ಯ ಇಲಾಖೆ ಒತ್ತಾಯಿಸಿದರು. ಸಭೆಯಲ್ಲಿ ಪಂಚವಟಿ ಗ್ರಾಮ ಅರಣ್ಯ ಸಮಿತಿ ಕಾರ್ಯಕಾರಿ ಸಮಿತಿ ಸದಸ್ಯರಾದ ಎಚ್.ಇ. ಮಹೇಶ್, ಸಂಪತ್ ಕುಮಾರ್, ಜಯರಾಂ,ಈಶ್ವರ್, ಉಷಾ, ಮಾಲತಿ, ಗೀತ, ಜಯಂತಿ, ರಮಾಮಣಿ, ಅರುಣ,ಗ್ರಾಪಂ ಸದಸ್ಯರಾದ ಎಚ್.ಇ.ದಿವಾಕರ, ಎಚ್.ಎಲ್.ವಿಜಯ, ವನ ಪಾಲಕ ರಾಘವೇಂದ್ರ ಮತ್ತಿತರರು ಪಾಲ್ಗೊಂಡಿದ್ದರು.