ಸಾರಾಂಶ
ಕ್ಕೇರಿ ಹೋಬಳಿಯ ಸೋಮೇಶ್ವರ, ಶಂಭುಲಿಂಗೇಶ್ವರ ದೇಗುಲಗಳು ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರ ಇದಾಗಿದೆ. ಬಡವರು ಕ್ಷೇತ್ರವನ್ನೆ ಕುಕ್ಕೆ ಸುಬ್ರಹ್ಮಣ್ಯ ಎಂಬ ನಂಬಿದ್ದು, ಕ್ಷೇತ್ರ ಅಭಿವೃದ್ಧಿಯಾದರೆ ಗ್ರಾಮ, ಸುತ್ತಮುತ್ತಲ ಗ್ರಾಮಸ್ಥರ ಬದುಕು ಸುಂದರವಾಗಲಿದೆ.
ಕನ್ನಡಪ್ರಭ ವಾರ್ತೆ ಕಿಕ್ಕೇರಿ
ದೇಗುಲಗಳು, ಗ್ರಾಮಗಳ ಅಭಿವೃದ್ಧಿಗೆ ಮುಂದಾದರೆ ಸಹಕಾರ ನೀಡುವುದಾಗಿ ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್. ನಾಗರಾಜು ಹೇಳಿದರು.ಹೋಬಳಿಯ ಸಾಸಲು ಕ್ಷೇತ್ರದ ಮುಜರಾಯಿ ದೇಗುಲಗಳಾದ ಸೋಮೇಶ್ವರ, ಶಂಭುಲಿಂಗೇಶ್ವರ ದೇಗುಲ ಮತ್ತಿತರ ಅಭಿವೃದ್ಧಿ ಕಾಮಗಾರಿ ವೀಕ್ಷಣೆ ಮಾಡಿ ಮಾತನಾಡಿ, ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರ ಇದಾಗಿದೆ. ಬಡವರು ಕ್ಷೇತ್ರವನ್ನೆ ಕುಕ್ಕೆ ಸುಬ್ರಹ್ಮಣ್ಯ ಎಂಬ ನಂಬಿದ್ದು, ಕ್ಷೇತ್ರ ಅಭಿವೃದ್ಧಿಯಾದರೆ ಗ್ರಾಮ, ಸುತ್ತಮುತ್ತಲ ಗ್ರಾಮಸ್ಥರ ಬದುಕು ಸುಂದರವಾಗಲಿದೆ ಎಂದರು.
ಸಣ್ಣಪುಟ್ಟ ಸಮಸ್ಯೆಗಳನ್ನು ದೊಡ್ಡದು ಮಾಡಿಕೊಳ್ಳದೆ ಕ್ಷೇತ್ರದಲ್ಲಿ ಆಗಬೇಕಾದ ಕೆಲಸಗಳಿಗೆ ಸಾಮರಸ್ಯದ ಚರ್ಚೆ ಇರಬೇಕು. ಆರೋಪ, ಪ್ರತ್ಯಾರೋಪ ಬಿಟ್ಟು ದೇಗುಲ ನವೀಕರಣ ಕಾಮಗಾರಿ ಆದಷ್ಟು ಬೇಗ ಮುಗಿಯುವಂತೆ ನೋಡಿಕೊಳ್ಳಬೇಕು ಎಂದರು.ಗುತ್ತಿಗೆದಾರರಿಗೆ ತ್ವರಿತವಾಗಿ ಕಾಮಗಾರಿ ಮುಗಿಸಲು ತಾಕೀತು ಮಾಡಿದದ ಎಡಿಸಿ, ಭಕ್ತರ ಬೇಸರಕ್ಕೆಡೆಮಾಡಿ ಕುಂಟುತ್ತ ಸಾಗಿರುವ ಜೋಡಿ ರಥ ನಿರ್ಮಾಣವನ್ನು ಬೇಗ ನಿರ್ಮಿಸಿಕೊಡುವಂತೆ ಎಚ್ಚರಿಕೆ ನೀಡಿದರು.
ಮುಜರಾಯಿ ದೇಗುಲ ಸ್ಥಳದಲ್ಲಿ ವ್ಯಾಪಾರ ಮಾಡುತ್ತಿರುವುದನ್ನು ತೆರವು ಮಾಡುವುದಾಗಿ ಹಲವು ಅಂಗಡಿ ವರ್ತಕರು ಅಧಿಕಾರಿಗಳ ಮುಂದೆ ಪ್ರಮಾಣ ಮಾಡಿದರು. ಬಾಲಾಯಲದ ಸೋಮೇಶ್ವರ, ಶಂಭುಲಿಂಗೇಶ್ವರ ದೇಗುಲದಲ್ಲಿ ವಿಶೇಷ ಪೂಜೆಗಳು ನಡೆದವು.ಈ ವೇಳೆ ಗ್ರಾಮ ಲೆಕ್ಕಿಗ ಪ್ರಸನ್ನ, ಈರಾಜು, ಮಹದೇವು, ಶ್ರೀನಾಥ್, ಕರವೇ ಗುರುಮೂರ್ತಿ ಇದ್ದರು.