ಸಾರಾಂಶ
ರಾಷ್ಟçದ ರಾಜ್ಯಧಾನಿ ನವದೆಹಲಿಯಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವ ವಿಜಯವನ್ನು ಸಾಧಿಸಿ ನವದೆಹಲಿಯ ಆಡಳಿತ ಚುಕ್ಕಾಣಿ ಭಾರತೀಯ ಜನತಾ ಪಕ್ಷದ ಪಾಲಾಗಿದ್ದು, ಈ ಗೆಲುವಿನ ಎಲ್ಲಾ ಯಶಸ್ಸನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ ಸಿಂಗ್, ರಾಷ್ಟ್ರೀಯ ಮಾಜಿ ಅಧ್ಯಕ್ಷ ಜೆ.ಪಿ.ನಡ್ಡಾರವರಿಗೆ ಸಲ್ಲುತ್ತದೆ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಾಳೆಮಂಡಿ ರಾಮದಾಸ್ ತಿಳಿಸಿದರು.
ದಿಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವು । ಬಿಜೆಪಿ ಕಾರ್ಯಕರ್ತರ ಸಂಭ್ರಮ
ಕನ್ನಡಪ್ರಭ ವಾರ್ತೆ ಚಳ್ಳಕೆರೆರಾಷ್ಟçದ ರಾಜ್ಯಧಾನಿ ನವದೆಹಲಿಯಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವ ವಿಜಯವನ್ನು ಸಾಧಿಸಿ ನವದೆಹಲಿಯ ಆಡಳಿತ ಚುಕ್ಕಾಣಿ ಭಾರತೀಯ ಜನತಾ ಪಕ್ಷದ ಪಾಲಾಗಿದ್ದು, ಈ ಗೆಲುವಿನ ಎಲ್ಲಾ ಯಶಸ್ಸನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ ಸಿಂಗ್, ರಾಷ್ಟ್ರೀಯ ಮಾಜಿ ಅಧ್ಯಕ್ಷ ಜೆ.ಪಿ.ನಡ್ಡಾರವರಿಗೆ ಸಲ್ಲುತ್ತದೆ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಾಳೆಮಂಡಿ ರಾಮದಾಸ್ ತಿಳಿಸಿದರು.
ನಗರದ ನೆಹರೂ ವೃತ್ತದಲ್ಲಿ ಶನಿವಾರ ದೆಹಲಿಯ ಚುನಾವಣೆಯಲ್ಲಿ ಬಿಜೆಪಿ ವಿಜಯ ಸಾಧಿಸಿದ ಸಂದರ್ಭದಲ್ಲಿ ಕಾರ್ಯಕರೊಡನೆ ಪಟಾಕಿ ಸಿಡಿಸಿ, ಸಿಹಿ ಹಂಚಿದ ಸಂದರ್ಭದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಕಳೆದ ೨೭ ವರ್ಷಗಳ ನಂತರ ದೆಹಲಿ ಆಡಳಿತವನ್ನು ಭಾರತೀಯ ಜನತಾ ಪಕ್ಷ ಪಡೆದಿರುವುದು ಸಂತಸ ತಂದಿದೆ. ಪಕ್ಷದ ಕಾರ್ಯಕರ್ತರು, ಮುಖಂಡರು, ಅಭಿಮಾನಿ ವಿಶೇಷವಾಗಿ ಬಿಜೆಪಿಯ ಮಹಿಳಾ, ಯುವ ಘಟಕಗಳು ಚುನಾವಣೆ ಗೆಲುವಿಗೆ ಸಾಕಷ್ಟು ಪರಿಶ್ರಮ ವಹಿಸಿವೆ. ದೆಹಲಿಯಲ್ಲಿದ್ದ ಲಂಚಾವತಾರ ಸರ್ಕಾರವನ್ನು ಮತದಾರ ಕಿತ್ತೆಸೆದಿದ್ದಾನೆ. ಮುಂಬರುವ ವರ್ಷಗಳಲ್ಲಿ ಕರ್ನಾಟಕದಲ್ಲೂ ಸಹ ಇದೇ ಸ್ಥಿತಿ ಉಂಟಾಗಲಿದೆ ಎಂದರು.ಬಿಜೆಪಿ ಮಂಡಲಾಧ್ಯಕ್ಷ, ಗ್ರಾಮ ಪಂಚಾಯಿತಿ ಸದಸ್ಯ ಬಿ.ಎಂ.ಸುರೇಶ್, ಬಿಜೆಪಿ ಹಿರಿಯ ಮುಖಂಡರಾದ ಸೋಮಶೇಕರ್‌ಮಂಡಿಮಠ, ಸಿ.ಎಸ್.ಪ್ರಸಾದ್, ದಿನೇಶ್‌ರೆಡ್ಡಿ, ಚಿದಾನಂದ, ಟಿ.ತಿಮ್ಮಪ್ಪ, ಆದಿಭಾಸ್ಕರಶೆಟ್ಟಿ, ಜಗದಾಂಬ, ಶಾಂತಲಾ, ಸೂರಯ್ಯ, ಬಂಡೆರAಗಪ್ಪ, ಎ.ವಿಜಯೇಂದ್ರ, ಮೋಹನ್, ಮಾರುತಿ ಮುಂತಾದವರು ಇದ್ದರು.