ಸಾರಾಂಶ
ಚೇಳೂರು ಶಿವನಂಜಪ್ಪ, ಅಂಕಸಂದ್ರದ ಕಂಬದ ರಂಗೇಗೌಡ, ಕೋಣನಕೆರೆಯ ಕೆ.ಎಸ್.ಸುರೇಶ್, ಕೊಪ್ಪದ ಕೆ.ಟಿ.ವೆಂಕಟೇಶ್ ಅವರು ಗುಬ್ಬಿ ತಾಲೂಕು ಭೂ ನ್ಯಾಯಮಂಡಳಿ ಸದಸ್ಯರಾಗಿ ನೇಮಕವಾಗಿದ್ದಾರೆ.
ಕನ್ನಡಪ್ರಭ ವಾರ್ತೆ ತುಮಕೂರು
ಸರ್ಕಾರದಿಂದ ನೇಮಕವಾದ ಭೂ ನ್ಯಾಯ ಮಂಡಳಿ ಸದಸ್ಯರು ಅರ್ಹ ಫಲಾನುಭವಿಗಳಿಗೆ ಸರ್ಕಾರದ ಸವಲತ್ತುಗಳನ್ನು ತಲುಪಲು ಕಾಳಜಿ ವಹಿಸಬೇಕು. ಬಡವರಿಗೆ ಸರ್ಕಾರದ ನೆರವಿನ ಬಗ್ಗೆ ಮನವರಿಕೆ ಮಾಡಿ ಅವರು ಸವಲತ್ತು ಪಡೆಯಲು ಸಹಕರಿಸಬೇಕು ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ಸಲಹೆ ನೀಡಿದರು.ಗುಬ್ಬಿ ತಾಲೂಕು ಭೂ ನ್ಯಾಯಮಂಡಳಿಗೆ ನೇಮಕವಾದ ಸದಸ್ಯರು ಶನಿವಾರ ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಅವರ ನಗರದ ನಿವಾಸದಲ್ಲಿ ಭೇಟಿಯಾಗಿ ಸನ್ಮಾನಿಸಿ ಗೌರವಿಸಿದರು.
ಸಾಮಾಜಿಕ ಕಳಕಳಿ ಇರುವ ನಿಮ್ಮನ್ನು ಸರ್ಕಾರ ನೇಮಕ ಮಾಡಿದೆ. ಇದೊಂದು ಜವಾಬ್ದಾರಿಯ ಕಾರ್ಯ, ಬಡವರು, ಅರ್ಹರಿಗೆ ಸರ್ಕಾರದ ನೆರವನ್ನು ಒದಗಿಸಲು ನೀವು ಮಾರ್ಗದರ್ಶನ ಮಾಡಿ ಅವರಿಗೆ ಸಹಾಯ ಮಾಡಬೇಕು ಎಂದು ಹೇಳಿದರು.ಚೇಳೂರು ಶಿವನಂಜಪ್ಪ, ಅಂಕಸಂದ್ರದ ಕಂಬದ ರಂಗೇಗೌಡ, ಕೋಣನಕೆರೆಯ ಕೆ.ಎಸ್.ಸುರೇಶ್, ಕೊಪ್ಪದ ಕೆ.ಟಿ.ವೆಂಕಟೇಶ್ ಅವರು ಗುಬ್ಬಿ ತಾಲೂಕು ಭೂ ನ್ಯಾಯಮಂಡಳಿ ಸದಸ್ಯರಾಗಿ ನೇಮಕವಾಗಿದ್ದಾರೆ.
ಈ ವೇಳೆ ಗುಬ್ಬಿ ತಾಲೂಕು ಕಾಂಗ್ರೆಸ್ ಅಧ್ಯಕ್ಷ ಕೆ.ಆರ್.ವೆಂಕಟೇಶ್, ಮುಖಂಡರಾದ ಕೋಡಿಯಾಲ ಮಹದೇವ್, ಜಿ.ಎಚ್.ಜಗನ್ನಾಥ್, ಕಡಬ ನಾರಾಯಣಪ್ಪ, ಡಿಎಸ್‌ಎಸ್ ತಾಲೂಕು ಅಧ್ಯಕ್ಷ ಕಡಬ ಶಂಕರ್, ಕಲಾವಿದ ನರಸಿಂಹಮೂರ್ತಿ, ಎಂ.ಎನ್.ಕೋಟೆ ಕಲ್ಲೇಶ್, ಇರಕಸಂದ್ರ ನರಸಿಂಹಮೂರ್ತಿ, ಲಕ್ಕೇನಹಳ್ಳಿ ನರಸೀಯಪ್ಪ, ದಲಿತ್ ಗಂಗಣ್ಣ, ಬಿದರೆಹಳ್ಳಿಕಾವಲ್ ನಟರಾಜು, ಚೇತನ್, ರವಿಕುಮಾರ್, ಜಿ.ಹೊಸಹಳ್ಳಿ ರವಿಕುಮಾರ್, ದೊಡ್ಡಯ್ಯ ಮೊದಲಾದವರು ಭಾಗವಹಿಸಿದ್ದರು.